Get Updates
Get notified of breaking news, exclusive insights, and must-see stories!

Lalbagh flower show 2024; ವಿಶೇಷತೆ, ಸಮಯ, ಪ್ರವೇಶ ಶುಲ್ಕ ವಿವರ

ಬೆಂಗಳೂರು, ಜನವರಿ 17: ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ 2024 ಆಯೋಜನೆ ಮಾಡಲಾಗಿದೆ. ಲಕ್ಷಾಂತರ ಜನರು ಜನವರಿ 18ರಿಂದ 28ರ ತನಕ ನಡೆಯಲಿರುವ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತೋಟಗಾರಿಕಾ ಇಲಾಖೆಯು ಪ್ರತಿವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡುತ್ತದೆ. ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು 2.85 ಕೋಟಿ ರೂ. ವೆಚ್ಚದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಒಟ್ಟು 32 ಲಕ್ಷ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.

Lalbagh Republic Day Flower Show 2024 Entry Fee And Timings

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ 215ನೇ ಫಲಪುಷ್ಪ ಪ್ರದರ್ಶನವಿದು. ಈ ಬಾರಿಯ ಪ್ರದರ್ಶನಕ್ಕೆ ಜನವರಿ 18ರಂದು ಚಾಲನೆ ಸಿಗಲಿದೆ. 12ನೇ ಶತಮಾನದ ಬಸವಣ್ಣ ಮತ್ತು ವಚನ ಸಾಹಿತ್ಯ ಹೂಗಳಲ್ಲಿ ಅರಳಲಿದೆ. ಬೆಳಗ್ಗೆ 6 ರಿಂದ ಸಂಜೆ 6.30ರ ತನಕ ಭೇಟಿ ನೀಡಿ, ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಪ್ರದರ್ಶನದ ವಿಶೇಷತೆಗಳು, ಪ್ರವೇಶ ಶುಲ್ಕ: ಜನವರಿ 18ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024ನೇ ಸಾಲಿನ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಒಟ್ಟು 11 ದಿನಗಳ ಕಾಲ ಜನರು ಪ್ರದರ್ಶನವನ್ನು ವೀಕ್ಷಣೆ ಮಾಡಲು ಅವಕಾಶವಿದೆ.

ತೋಟಗಾರಿಕೆ ಇಲಾಖೆಯ ನಿರ್ದೇಶಕ ರಮೇಶ್ ಡಿ. ಎಸ್. ಫಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ್ದಾರೆ. "ಫಲಪುಷ್ಪ ಪ್ರದರ್ಶನವು 12ನೇ ಶತಮಾನಕ್ಕೆ ಕರೆದೊಯ್ಯಲಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪವನ್ನು ಹೂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಸವಣ್ಣನವರ ಪುತ್ಥಳಿಯನ್ನು ಸಹ ಇರಿಸಲಾಗುತ್ತಿದೆ" ಎಂದರು.

"ಅನುಭವ ಮಂಟಪವನ್ನು 34 ಅಡಿ ಅಗಲ ಮತ್ತು 30 ಅಡಿ ಎತ್ತರ ಇರುವಂತೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 4.8 ಲಕ್ಷ ಹೂಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರದರ್ಶನದ ಅವಧಿಯಲ್ಲಿ ಎರಡು ಬಾರಿಗೆ 9.6 ಲಕ್ಷ ಹೂಗಳನ್ನು ಬಳಕೆ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.

ಅನುಭವ ಮಂಟಪದ ಹಿಂಭಾಗದಲ್ಲಿ ಬಸವಣ್ಣನವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ 5 ಕಲಾಕೃತಿಗಳು ಹೂ ಮತ್ತು ಗಿಡಗಳ ಜೋಡಣೆಯಲ್ಲಿ ಕಂಡು ಬರಲಿವೆ. ಬಸವಣ್ಣನವರ ಐಕ್ಯ ಮಂಟಪವನ್ನು 1.5 ಲಕ್ಷ ಗುಲಾಬಿ ಮತ್ತು 2 ಲಕ್ಷ ಸೇವಂತಿ ಹೂಗಳ ಮೂಲಕ ನಿರ್ಮಾಣ ಮಾಡಲಾಗಿದೆ.

ಗಾಜಿನ ಮನೆಯ ಮೂಲೆಯಲ್ಲಿ ಪುಷ್ಪ ಪಿರಮಿಡ್‌ ಅನ್ನು 15 ಸಾವಿರಕ್ಕೂ ಅಧಿಕ ಹೂ ಕುಂಡಗಳ ಮೂಲಕ ನಿರ್ಮಾಣ ಮಾಡಲಾಗಿದೆ. ಒಳಭಾಗದಲ್ಲಿ 8 ಅಡಿ ಅಗಲ ಮತ್ತು 7 ಅಡಿ ಉದ್ದದ ಪ್ರದೇಶದಲ್ಲಿ ಪ್ರಾಚೀನ ಓಲೆಗರಿ ಹಸ್ತಪ್ರತಿಗಳು ಮತ್ತು ಅವುಗಳ ಸಂರಕ್ಷಣಾ ವಿಧಾನ, ಮಹತ್ವ ಕುರಿತ ವಿಶೇಷ ಪ್ರದರ್ಶನ ಇರಲಿದೆ.

ಪ್ರವೇಶ ಶುಲ್ಕ: ಫಲಪುಷ್ಪ ಪ್ರದರ್ಶನಕ್ಕೆ ಸಮವಸ್ತ್ರ ಧರಿಸಿ ಬರುವ 10ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರುತ್ತದೆ. ಉಳಿದಂತೆ ವಯಸ್ಕರಿಗೆ 80, ಮಕ್ಕಳಿಗೆ (12 ವರ್ಷದೊಳಗೆ) 30 ರೂ. ಶುಲ್ಕವನ್ನು ಪಾವತಿ ಮಾಡಬೇಕು. ರಜಾ ದಿನಗಳಲ್ಲಿ ಪ್ರವೇಶ ಶುಲ್ಕ 100 ರೂ.ಗಳು.

ಲಾಲ್‌ಬಾಗ್ 4 ಗೇಟ್‌ಗಳಲ್ಲಿಯೂ ಪ್ರವೇಶ ಶುಲ್ಕವನ್ನು ನೀಡಿ ಟಿಕೆಟ್ ಪಡೆಯಬಹುದು. ತೋಟಗಾರಿಕೆ ಇಲಾಖೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಮೂಲಕ ಸಹ ಟಿಕೆಟ್ ಪಡೆಯಲು ಅವಕಾಶವಿದೆ.

ಲಾಲ್‌ಬಾಗ್ ಸುತ್ತಲೂ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಆದ್ದರಿಂದ ಫಲಪುಲ್ಪ ಪ್ರದರ್ಶನಕ್ಕೆ ಬರುವ ಜನರು ನಮ್ಮ ಮೆಟ್ರೋ ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ಕಟ್ಟಡ, ಡಬಲ್ ರೋಡ್‌ನ ಹಾಪ್‌ಕಾಮ್ಸ್ ಆವರಣ ಮತ್ತು ಜೆಸಿ ರಸ್ತೆಯ ಬಿಬಿಎಂಪಿ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ. ದ್ವಿಚಕ್ರವಾಹನಗಳಿಗೆ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+