ಅಶ್ಲೀಲ ಪೋಸ್ಟ್ ಹಾಕಿ ಮಹಿಳಾ ಟಿಕ್ಕಿಗೆ ಕಿರುಕುಳ, ದೂರು
ಬೆಂಗಳೂರು, ಮೇ 13: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕಿ ಮಹಿಳಾ ಟೆಕ್ಕಿಗೆ ಕಿರುಕುಳ ನೀಡುತ್ತಿದ್ದ ಯುವಕನ ವಿರುದ್ಧ ದೂರು ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕುವ ಮೂಲಕ ಮಾಜಿ ಸಹೋದ್ಯೋಗಿಯೊಬ್ಬ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳಾ ಟೆಕ್ಕಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೆಹಲಿ ಮೂಲದ ಯುವತಿ ಮಿಶ್ರಾ ಎಂಬಾತನ ವಿರುದ್ಧ ದೂರು ನೀಡಿದ್ದಾಳೆ. ಅವರಿಬ್ಬರಿ ಈ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಬಳಿಕ ಮಹಿಳಾ ಟೆಕ್ಕಿ ಬೇರೊಂದು ಕಂಪನಿಗೆ ಸೇರಿಕೊಂಡಿದ್ದರು.ಕಂಪನಿ ಬದಲಾಯಿಸಿದ್ದರೂ ಆತ ಮಾತ್ರ ಕಿರುಕುಳ ನೀಡಿರುವುದು ಬಿಟ್ಟಿರಲಿಲ್ಲ.

ಮೊದಲು ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ, ಬಳಿಕ ನಂಬರ್ ಬ್ಲಾಕ್ ಮಾಡಿದ ಬಳಿಕ ಇ-ಮೇಲ್ ಮೂಲಕ ಅಶ್ಲೀಲ ಮತ್ತು ಅನುಚಿತ ಸಂದೇಶ ಕಳುಹಿಸುತ್ತಿದ್ದ.
ಆಕೆಯ ಜೊತೆ ತನಗೆ ಸಂಬಂಧ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ. ಇದೆಲ್ಲವನ್ನು ನೋಡಿ ಬೇಸತ್ತ ಯುವತಿ ಆತನ ವಿರುದ್ಧ ದೂರು ನೀಡಿದ್ದಾಳೆ.












Click it and Unblock the Notifications