ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರ ವಸತಿ ಯೋಜನೆ ಸಹಾಯಧನ 5 ಲಕ್ಷಕ್ಕೆ ಏರಿಕೆ

By Nayana
|
Google Oneindia Kannada News

ಬೆಂಗಳೂರು, ಜು.20: ಕಾರ್ಮಿಕರ ವಸತಿ ಯೋಜನೆ ಹಣವನ್ನು ಎರಡು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಲಾಗಿದೆ ಎಂದು ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ.

ನಿವೇಶನ ಹೊಂದಿರುವ ಕಾರ್ಮಿಕರಿಗೆ ಈ ಸೌಲಭ್ಯ ಮೊದಲ ಹಂತದಲ್ಲಿ ಕಾರ್ಮಿಕ ಇಲಾಖೆಯಿಂದ ಹಣ ಹಾಗೂ ಫಲಾನುಭವಿಗಳ ಪಟ್ಟಿಯನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ನೀಡಲಾಗುತ್ತದೆ, ಕಾರ್ಮಿಕರು ಕಟ್ಟಿಕೊಳ್ಳುವ ಮನೆಯ ಪ್ರಗತಿಗೆ ಅನುಗುಣವಾಗಿ ನಿಗಮದಿಂದ ಹಣ ಬಿಡುಗಡೆ ಮಾಡಲಾಗುತ್ತದೆ.

ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ! ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ!

ಈ ಕುರಿತು ಜು.24ರಂದು ರಾಜ್ಯದ ಎಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಲಾಗುತ್ತದೆ.ವಿಭಾಗ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಮಿಕರ ನೋಂದಣಿ ಸಮೀಕ್ಷೆ ನಡೆಸಲು ಸೂಚಿಸಲಾಗುವುದು.ಪ್ರತಿಯೊಬ್ಬ ಕಾರ್ಮಿಕರಿಗೂ ಗುರುತಿನ ಚೀಟಿ ನೀಡಿ ಖಾಯಂ ಕಾರ್ಮಿಕರೆಂದು ಗುರುತಿಸಲಾಗುತ್ತದೆ.

Labour housing project limit increased

ಕಾರ್ಮಿಕರ ವಿಮಾ ಆಸ್ಪತ್ರೆ ಅಡಿಯಲ್ಲಿ ಬರುವ ಡಿಸ್ಪೆನ್ಸರಿಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೆ ಅನುಮೋದನೆ ನೀಡುವ ಸಾಧ್ಯತೆಗಳಿವೆ. ರಾಜ್ಯದಲ್ಲಿ 112 ಇಎಸ್‌ಐ ಡಿಸ್ಪೆನ್ಸರಿಗಳಿದ್ದು, ಅಲ್ಲಿ ಮಧುಮೇಹ, ಮೂತ್ರ ಪರೀಕ್ಷೆ ಸೇರಿದಂತೆ ಸಣ್ಣ ಪ್ರಮಾಣದ ಪರೀಕ್ಷೆಗಳನ್ನು ಮಾಡುವಂತೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.

English summary
Housing project of labours have been increased from 2 lakh to 5 lakh. Housing minister venkatramanappa announced this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X