ಬೆಂಗಳೂರು-ಮೈಸೂರು ಫ್ಲೈ ಬಸ್ ದರ ಇಳಿಕೆ
ಬೆಂಗಳೂರು, ಡಿಸೆಂಬರ್ 03 : ಕೆಎಸ್‌ಆರ್‌ಟಿಸಿ ಫ್ಲೈ ಬಸ್ಸುಗಳ ದರಗಳನ್ನು ಕಡಿತ ಮಾಡಿದೆ. ಹೊಸ ಮಾರ್ಗಗಳಲ್ಲಿ ಶೀಘ್ರದಲ್ಲೇ ಫ್ಲೈ ಬಸ್ ಸೇವೆಯನ್ನು ಆರಂಭಿಸಲು ಯೋಜನೆ ಸಿದ್ಧವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುವ ಫ್ಲೈ ಬಸ್ ದರವನ್ನು ಕಡಿತಗೊಳಿಸಲಾಗಿದೆ. ಮೂರು ಜನರು ಒಟ್ಟಿಗೆ 700 ರೂ.ಗಳಿಗೆ ಟಿಕೆಟ್ ಬುಕ್ ಮಾಡಬಹುದಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ನಗರಗಳಿಗೆ ಹೊಸ ಬಸ್‌ಗಳನ್ನು ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಸಿಂಗಲ್ ಸೀಟ್‌ನ ಎಸಿ ಬಸ್ಸುಗಳು ವೈ-ಫೈ, ಎಲ್‌ಇಡಿ ಸ್ಕ್ರೀನ್, ಜಿಪಿಎಸ್ ಟ್ರಾಕಿಂಗ್, ರಾಸಾಯನಿಕ ಟಾಯ್ಲೆಟ್‌ಗಳನ್ನು ಹೊಂದಿವೆ.
ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯನ್ನು ಮಡಿಕೇರಿ, ತಿರುಪತಿ, ಸೇಲಂ, ಕೊಚ್ಚಿಕೋಡ್ ಮತ್ತು ಕೊಯಮತ್ತೂರಿಗೆ ವಿಸ್ತರಿಸಲು ನಿರ್ಧರಿಸಿದೆ. ಶೀಘ್ರದಲ್ಲಿಯೇ ಈ ಬಸ್ ಸೇವೆ ಆರಂಭವಾಗಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ಮಣಿಪಾಲ್ ನಡುವೆ ಈಗಾಗಲೇ ಫ್ಲೈ ಬಸ್ ಸಂಚಾರ ನಡೆಸುತ್ತಿದೆ.












Click it and Unblock the Notifications