ನಟಿ ಕೃತಿಯಿಂದ ವಿಶಿಷ್ಟ ಅನುಭವದ ಮಳಿಗೆ ಆರಂಭ

ಬೆಂಗಳೂರು, ಭಾರತ, ಏಪ್ರಿಲ್ 01: ಭಾರತೀಯ ಮಹಿಳೆಯರ ಶಾಪಿಂಗ್ ಅನುಭವವನ್ನು ಮರುವ್ಯಾಖ್ಯಾನಿಸುವ ಪ್ರವರ್ತಕ ಪ್ರಯತ್ನದಲ್ಲಿ, ಪ್ರೊಜೆಕ್ಟ್ ಈವ್ ಅನ್ನು ರಿಲಯನ್ಸ್ ರಿಟೈಲ್ ಬೆಂಗಳೂರಿನ ತನ್ನ ಫ್ಲಾಗ್‍ಶಿಪ್ ಸ್ಟೋರ್ ನಲ್ಲಿ ಬಿಡುಗಡೆಗೊಳಿಸಿದೆ.

ಗರುಡಾ ಮಾಲ್‍ನಲ್ಲಿನ ಈ ಮಳಿಗೆ ಪ್ರೀಮಿಯಂ ವಿಭಾಗದ ಒಂದು ವಿಶಿಷ್ಟ ಪರಿಕಲ್ಪನೆಯಾಗಿದ್ದು, 25-40 ವಯೋಮಾನದ ಸ್ವತಂತ್ರ ಮತ್ತು ಅತ್ಯಾಧುನಿಕ ಮಹಿಳೆಯರತ್ತ ಬಲವಾಗಿ ಕೇಂದ್ರೀಕೃತವಾಗಿದೆ. ಪ್ರೊಜೆಕ್ಟ್ ಈವ್ ಸ್ಟೋರ್ ನ ಭವ್ಯ ಉದ್ಘಾಟನೆಯನ್ನು ದಕ್ಷಿಣ ಮತ್ತು ಬಾಲಿವುಡ್ ನಟಿ ಕೃತಿ ಕರಬಂಧ ಅವರು ನಡೆಸಿದರು.

Kriti Kharbanda inaugurates Project Eve store Garuda Mall

ಸುಂದರ ನೋಟ ಬೀರುತ್ತಾ ಕೃತಿ ಅವರು ಸ್ಟೋರ್ ಗೆ ನಡೆದು ಬಂದರು ಮತ್ತು ಮಾಲ್‍ನ ಫ್ಯಾಶನ್ ಶೋದ ಶೋ ಸ್ಟಾಪರ್ ಅವರಾಗಿದ್ದರು. ಇದು ಜಯನಗರ 4ನೇ ಬ್ಲಾಕ್ ಬಳಿಕ ನಗರದಲ್ಲಿ ತಲೆ ಎತ್ತಿರುವ ಪ್ರೊಜೆಕ್ಟ್ ಈವ್‍ನ ಎರಡನೇ ಮಳಿಗೆಯಾಗಿದೆ. ಪ್ರೊಜೆಕ್ಟ್ ಈವ್ ಡೆಸ್ಟಿನೇಶನ್ ಸ್ಟೋರ್ ಆಗಿದ್ದು, ಇದನ್ನು ಮಹಿಳೆಯೊಬ್ಬಳ ನೋಟ ಹಾಗೂ ಭಾವಕ್ಕೆ ಹಿತವೆನಿಸುವ ಪ್ರತಿಯೊಂದನ್ನೂ ಒದಗಿಸುವಂತೆ ನಿರ್ಮಿಸಲಾಗಿದೆ.

Kriti Kharbanda inaugurates Project Eve store Garuda Mall

ಈ ಮಳಿಗೆಯು ತನ್ನ ಸೊಗಸಾದ ಪರಿಸರ, ಇನ್-ಸ್ಟೋರ್ ಸಲೂನ್- ಬೌನ್ಸ್, ಪರ್ಸನಲ್ ಸ್ಟೈಲಿಸ್ಟ್, ಪ್ಲಶ್ ಟ್ರಯಲ್ ರೂಂಗಳು, ಲಾಂಜ್ ಪ್ರದೇಶಗಳೊಂದಿಗೆ ಅಪಾರೆಲ್ ಮತ್ತು ಬ್ಯೂಟಿ ಕಲೆಕ್ಷನ್‍ನಿಂದ ಒಡಗೂಡಿರುತ್ತದೆ. ಈ ಸ್ಟೋರ್ ಸ್ವಂತ ಲೇಬಲ್-ಪ್ರೊಜೆಕ್ಟ್ ಈವ್ ಸೇರಿದಂತೆ ಭಾರತೀಯ ಮತ್ತು ಪಾಶ್ಚಾತ್ಯ ಉಡುಗೆ ಸಂಗ್ರಹವನ್ನು ಹೊಂದಿದೆ.

Kriti Kharbanda inaugurates Project Eve store Garuda Mall

ಪ್ರೊಜೆಕ್ಟ್ ಈವ್ ವಿಶೇಷವಾಗಿ ಮಹಿಳೆ ತನ್ನ ಬಗ್ಗೆ ಸಂಭ್ರಮಿಸಲು ರೂಪಿಸಲಾಗಿದೆ. ಸ್ಟೋರ್‍ನ ಪ್ರತಿ ಅಂಶವು ಮಹಿಳೆಯರಿಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತದೆ. ಅದು, ಅವರನ್ನು ಮುದ್ದಾಗಿಸುವ ಸಲೂನ್ ಇರಬಹುದು, ಅಥವಾ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಕಲೆಕ್ಷನ್‍ನಲ್ಲಿರುವ ಉಡುಪು, ಒಳ ಉಡುಪುಗಳು, ಸಲಕರಣೆಗಳು ಮತ್ತು ಪಾದರಕ್ಷೆಗಳೇ ಇರಬಹುದು. ವಿಶಾಲವಾದ ಟ್ರಯಲ್ ರೂಂಗಳು, ಚಾರ್ಜಿಂಗ್ ಡಾಕೆಟ್‍ಗಳು, ಬ್ಯೂಟಿ ಸೆಕ್ಷನ್‍ನ ಎಕ್ಸ್‍ಪ್ರೆಸ್ ಚೆಕೌಟ್ ಹೀಗೆ ಈ ಮಳಿಗೆ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+