ಪರಿಷತ್ ಸ್ಥಾನಕ್ಕೆ ಪರಮೇಶ್ವರ್ ಕರೆತರುವ ಹೊಣೆ ಸಿಎಂಗೆ

ಬೆಂಗಳೂರು, ಅ, 31 : ಡಾ.ಮುಮ್ತಾಜ್‌ ಅಲಿಖಾನ್‌ ಅವರಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಸದಸ್ಯರನ್ನು ನಾಮಕಾರಣ ಮಾಡುವ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ. ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ವಿಧಾನ ಪರಿಪತ್ ಪ್ರವೇಶಿಸುತ್ತಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ.

ಬುಧವಾರ ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ಮುಮ್ತಾಜ್‌ ಅಲಿಖಾನ್‌ ಅವರಿಂದ ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಸದಸ್ಯರನ್ನು ನಾಮಕರಣ ಮಾಡುವ ಕುರಿತು ಚರ್ಚೆ ನಡೆದಿದೆ. ಅಂತಿಮವಾಗಿ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

KPCC

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಷತ್ ಗೆ ನಾಮ ನಿರ್ದೇಶನಗೊಂಡಿದ್ದ ಮುಮ್ತಾಜ್‌ ಅಲಿಖಾನ್‌ ಅವರ ಅವಧಿ 2014 ಜೂನ್‌ವರೆಗೂ ಇತ್ತು. ಆದರೆ, ಸೆ.24ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಕಾಂಗ್ರೆಸ್ ಕೈ ಹಿಡಿದಿದ್ದರು. ಸದ್ಯ ತೆರವಾಗಿರುವ ಈ ಕ್ಷೇತ್ರಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಹೊಣೆ ಸಿಎಂ ಹೆಗಲೇರಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ ಪ್ರವೇಶಿಸುವ ಸಲುವಾಗಿಯೇ ಕಾಲೇಜಿನಲ್ಲಿ ತಮಗೆ ಪಾಠ ಹೇಳಿಕೊಟ್ಟಿದ್ದ ಗುರುಗಳಾದ ಮುಮ್ತಾಜ್‌ ಅಲಿ ಖಾನ್‌ ಅವರಿಂದ ಅವಧಿಗೆ ಮುನ್ನವೇ ರಾಜೀನಾಮೆ ಕೊಡಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಬ್ಬಿದ್ದವು. ಪರಿಷತ್ ಪ್ರವೇಶಿಸುವ ಮೂಲಕ ಪರಮೇಶ್ವರ್ ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ಎಂಬ ಮಾತುಗಳು ಇವೆ. (ಪರಮೇಶ್ವರ್ ಸಂಪುಟ ಸೇರುವ ಹಾದಿ ಸುಗಮ)

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಮೇಶ್ವರ್ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೊಸ ಸರ್ಕಾರ ರಚನೆಯಾದ ನಂತರ ಅವರಿಗೆ ಸೂಕ್ತ ಸ್ಥಾನ ಮಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಇದುವರೆಗೂ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ವಿವಿಧ ಮಠಾಧೀಶರು ಪರಮೇಶ್ವರ್ ಅವರಿಗೆ ಉನ್ನತ ಹುದ್ದೆ ನೀಡಬೇಕೆಂದು ಸರ್ಕಾರ ಮತ್ತು ಹೈ ಕಮಾಂಡ್ ನಾಯಕರಿಗೆ ಆಗ್ರಹಿಸಿದ್ದಾರೆ.

ಸದ್ಯ ವಿಧಾನಪರಿಷತ್ ಸ್ಥಾನ ತುಂಬುವ ಕಾಯಕ ಸಿಎಂ ಹೆಗಲೇರಿದ್ದು, ಅವರು, ಪರಮೇಶ್ವರ್ ಅವರನ್ನು ಪರಿಷತ್ ಗೆ ಕರೆತಂದು ಅಲ್ಲಿಂದ ಸಚಿವ ಸಂಪುಟ ಸೇರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪರಿಷತ್ ನಾಮಕರಣದ ಬಗ್ಗೆ ಇದುವರೆಗೂ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ನಾಮಕರಣವಾಗುವ ಸದಸ್ಯರ ಅವಧಿ ಜೂನ್ 2014ಕ್ಕೆ ಅಂತ್ಯಗೊಳ್ಳಲಿದೆ.

ಪರಮೇಶ್ವರ ಕಾಯಬೇಕು : ಸದ್ಯ ವಿಧಾನಪರಿಷತ್ ಗೆ ಪರಮೇಶ್ವರ್ ನಾಮಕರಣವಾಗದಿದ್ದರೆ ಜೂನ್ ಕಾಯಬೇಕಾದ ಅನಿವಾರ್ಯತೆ ಇದೆ. ಜೂನ್ ನಲ್ಲಿ ವಿಧಾನಪರಿಷತ್ತಿನ 14 ಸ್ಥಾನಗಳಿಗೆ ಚುಣಾವಣೆ ನಡೆಯಲಿದೆ. ಆಗ ಅವರು ಚುನಾವಣೆಗೆ ಸ್ಪರ್ಧಿಸಿ ಪರಿಷತ್ ಗೆ ಆಗಮಿಸಬಹದು. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಕೆಲವೇ ದಿನಗಳಲ್ಲಿ ಪರಮೇಶ್ವರ್ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ ಸಂಪುಟ ಸೇರಲೂ ಬಹದುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+