ನಾಗಸಂದ್ರ- ಮಾದಾವರ ಮೆಟ್ರೋ ರೈಲು ಮಾರ್ಗದಲ್ಲಿ ಆಸ್ತಿ ಮೌಲ್ಯ ಎಷ್ಟಿದೆ.?-ಅಂಕಿಅಂಶಗಳು ಇಲ್ಲಿವೆ

Namma Metro: ಈಗಾಗಲೇ ನಾಗಸಂದ್ರ-ಮಾದಾವರದವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆ ಆಗಿದೆ. ಈಗಾಗಲೇ ರೈಲು ಸಂಚಾರವೂ ಕೂಡ ಶುರುವಾಗಿದೆ. ಇದರ ಬೆನ್ನಲ್ಲೇ ಈ ಮೆಟ್ರೋ ಲೈನ್‌ನ ಪ್ರದೇಶದಲ್ಲಿ ಭೂಮಿಯ ಮೌಲ್ಯ, ಮನೆ ಬಾಡಿಗೆ ದರ ಹೆಚ್ಚಳ ಆಗಿದೆ. ಹಾಗಾದರೆ ಎಷ್ಟು ಹೆಚ್ಚಳಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹಸಿರು ಮಾರ್ಗದ ನಾಗಸಂದ್ರ-ಮಾದಾವರದವರೆಗೆ ಮೆಟ್ರೋ ವಿಸ್ತರಣೆಯಾದ ಬೆನ್ನೆಲ್ಲೇ, ಈ ಪ್ರದೇಶದಲ್ಲಿ ಆಸ್ತಿ ಮೌಲ್ಯಗಳು ಹೆಚ್ಚಳ ಆಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅದರಲ್ಲೂ ಇಲ್ಲಿನ ಪ್ರದೇಶಗಳು ಕೈಗಾರಿಕಾ ಪ್ರದೇಶ ಮತ್ತು ಟೆಕ್ ಹಬ್‌ಗಳಲ್ಲಿ ಉದ್ಯೋಗಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿವೆ. ಇನ್ನು ಹೊಸ ನಿಲ್ದಾಣಗಳ 2-3 ಕಿಲೋ ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ವಸತಿ ಬೇಡಿಕೆ ಹೆಚ್ಚಾಗಿದೆ ಎಂದು ಅನರಾಕ್ ಗ್ರೂಪ್‌ನ ಚೆನ್ನೈ ನಗರ ಮುಖ್ಯಸ್ಥ ಹೇಳಿದ್ದಾರೆ ಎಂದು ವರದಿಯಾಗಿದೆ.

Know the details of Property Value in Nagasandra-Madhavara Metro Line

ಬೆಂಗಳೂರು ಮೆಟ್ರೋ ಹಸಿರು ಮಾರ್ಗ ವಿಸ್ತರಣೆ ಆಗಿರುವಲ್ಲಿ ಕೊನೆಯ ನಿಲ್ದಾಣ ಆಗಿರುವ ಮಾದಾವರದಲ್ಲಿ ಆಸ್ತಿ ಮೌಲ್ಯ 2017ರಲ್ಲಿ ಪ್ರತಿ ಚದರ ಅಡಿಗೆ 4,500-5,000 ರೂಪಾಯಿ. 2023ರಲ್ಲಿ 9,000-9,500 ರೂಪಾಯಿ ಆಗಿತ್ತು. 2024ರ 3ನೇ ತ್ರೈಮಾಸಿಕದಲ್ಲಿ 10,000 10,500 ರೂಪಾಯಿಗೆ ಏರಿಕೆ ಆಗಿದೆ.

ಇದೇ ರೀತಿ ಅಂಚೆಪಾಳ್ಯದಲ್ಲಿ 2017ರಲ್ಲಿ ಪ್ರತಿ ಚದರ ಅಡಿಗೆ 5,000-5,500 ರೂಪಾಯಿ ಇತ್ತು. 2023ರಲ್ಲಿ 10,000-10,500 ರೂಪಾಯಿ ಮತ್ತು 2024ರ ಮೂರನೇ ತ್ರೈಮಾಸಿಕದಲ್ಲಿ 10,600-11,100 ರೂಪಾಯಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉತ್ತರ ಬೆಂಗಳೂರಿನಲ್ಲಿ 3.14 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ವಿಸ್ತರಣಾ ಮಾರ್ಗವನ್ನು ಇತ್ತೀಚೆಗಷ್ಟೆ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2017ರಲ್ಲಿ ಇದರ ನಿರ್ಮಾಣ ಕಾಮಗಾರಿ ಶುರು ಆಗಿದ್ದು, ತುಂಬಾ ನಿಧಾನವಾಗಿ ಪೂರ್ಣಗೊಂಡ ಮಾರ್ಗ ಇದಾಗಿ ದಾಖಲಾಯಿತು. ಕಾಮಗಾರಿ ಪೂರ್ಣವಾಗಲು ಹೆಚ್ಚು ಅವಧಿ ಬೇಕಾಯಿತು.

ವಿಸ್ತರಿತ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ನಿಲ್ದಾಣಗಳಿವೆ. 1,169 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಾದಾವರ ಸುತ್ತಮುತ್ತ ಬಾಡಿಗೆ ದರ ಹೆಚ್ಚಳ: ಮೂಲಗಳ ಪ್ರಕಾರ, ಈ ಮಾರ್ಗದ ಪ್ರದೇಶಗಳಲ್ಲಿ ಬಾಡಿಗೆ ಮೌಲ್ಯಗಳು 5 ವರ್ಷಗಳ ಅವಧಿಯಲ್ಲಿ 16-25 ಪ್ರತಿಶತದ ನಡುವೆ ಹೆಚ್ಚಾಗಿದೆ. ನಾಗಸಂದ್ರದಲ್ಲಿ ಬಾಡಿಗೆ ಮಾಸಿಕ 26,394-30,100 ರೂಪಾಯಿ ಇದ್ದು, 2023ರಲ್ಲಿ 30,690-32,550 ರೂಪಾಯಿ ಮತ್ತು 2024ರ ಮೊದಲ 10 ತಿಂಗಳಲ್ಲಿ 33,000-35,000 ರೂಪಾಯಿಗೆ ತಲುಪಿದೆ.

ಬಿಎಂಆರ್‌ಸಿಎಲ್‌ ಮಾಹಿತಿಯ ಪ್ರಕಾರ, ಈ ವಿಭಾಗದ ಕಾರ್ಯಾರಂಭದ ಮೇಲೆ, ಬೆಂಗಳೂರಿನಲ್ಲಿ ಇದೀಗ 69 ನಿಲ್ದಾಣಗಳೊಂದಿಗೆ 76.95 ಕಿಲೋ ಮೀಟರ್‌ ಮೆಟ್ರೋ ವ್ಯಾಪಿಸಿದೆ. ಉತ್ತರ ದಕ್ಷಿಣ ಕಾರಿಡಾರ್ (ಗ್ರೀನ್ ಲೈನ್) ಈಗ 31 ನಿಲ್ದಾಣಗಳೊಂದಿಗೆ 33.46 ಕಿಲೋ ಮೀಟರ್‌, ಮತ್ತು ಪೂರ್ವ ಪಶ್ಚಿಮ ಕಾರಿಡಾರ್ (ಪರ್ಪಲ್ ಲೈನ್) 38 ನಿಲ್ದಾಣಗಳೊಂದಿಗೆ 43.49 ಕಿಲೋ ಮೀಟರ್‌ ಉದ್ದಕ್ಕೂ ವಿಸ್ತರಣೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+