ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿಕೊಂಡಿದ್ದೇಗೆ?

Google Oneindia Kannada News

ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿಕೊಂಡಿದ್ದೇಗೆ? ಇಲ್ಲಿದೆ ಸ್ವಾರಸ್ಯಕರ ಕಥಾನಕ. ಗಾಂಧಿನಗರದಲ್ಲೀಗ ವೀಲ್ ಚೇರ್ ರೋಮಿಯೋ ಸಿನಿಮಾ ಟಾಕ್ ಜೋರಾಗಿದೆ. ಇದೇ ತಿಂಗಳಾಂತ್ಯಕ್ಕೆ ಅಂದ್ರೇ 27ರಂದು ರೋಮಿಯೋ ಜರ್ನಿ ಶುರುವಾಗ್ತಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಕುತೂಹಲದ ಕೋಟೆ ಕಟ್ಟಿರುವ ಕಥೆ ಬಗ್ಗೆ ಚಿತ್ರರಸಿಕರ ಮನದಲ್ಲಿ ನಿರೀಕ್ಷೆ ಹುಟ್ಟಿಸಿದೆ.

ವೇಶ್ಯೆಗೂ ಒಂದು ಬದುಕಿದೆ. ಆಕೆಯ ಹೃದಯದಲ್ಲೂ ಪ್ರೀತಿಯಿದೆ. ಅಂಗವಿಕಲರನ್ನು ಅನುಕಂಪದಿಂದ ನೋಡಬೇಕು ಎನ್ನುವ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಆ ಎರಡನ್ನೂ ಒಟ್ಟಿಗೇ ಸೇರಿಸಿ, ಅವರ ಮಧ್ಯೆ ಪ್ರೀತಿ, ಮದುವೆ ಮಾಡಿಸಿದರೆ ಹೇಗೆ ಅನ್ನೋ ಯೋಚನೆ ಹೊಸದು. ಇಂತಹ ಕಥೆ ನಿರ್ದೇಶಕ ನಟರಾಜ್ ಹೊಳೆದಿದ್ದೇ ಒಂದು ರೋಚಕ.

Know how Kannada film Wheel Chair Romeo story evolved

ಒಮ್ಮೆ ನಟರಾಜ್ ನ್ಯಾಷನಲ್ ಜಿಯಾಗ್ರಾಫಿ ಚಾನೆಲ್ ಎಪಿಸೋಡ್ ಒಂದರಲ್ಲಿ ಆಸ್ಟ್ರೇಲಿಯಾ ತಂದೆಯೊಬ್ಬ ಮಗನನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುವ ಸನ್ನಿವೇಶಗಳಿದ್ದವಂತೆ. ಅದನ್ನು ನಮ್ಮ ಸಂಸ್ಕೃತಿಯಲ್ಲಿ ಒಪ್ಪಿಕೊಳ್ತಾರಾ? ಅಂತಾ ಬಹಳ ಯೋಚನೆ ಮಾಡಿ ಅದೇ ಸ್ಫೂರ್ತಿಯಿಂದ ಬೇರೆ ಬೇರೆ ತಿರುವು ಕೊಟ್ಟು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ಸಿದ್ಧಪಡಿಸಿದ್ದಾರೆ.

Know how Kannada film Wheel Chair Romeo story evolved

ಹಾಗಂತ ಇದು ಸೀರಿಯಸ್ ಸ್ಟೋರಿಯಲ್ಲ. ಇದಕ್ಕೆ ಕಾಮಿಡಿ ಟಚ್ ಕೊಟ್ಟು ಪ್ರೇಕ್ಷಕರಿಗೆ ಮನರಂಜನೆ ನೀಡುವ ಅಂಶಗಳನ್ನು ನಟರಾಜ್ ಹದವಾಗಿ ಬೆರೆಸಿದ್ದಾರೆ. ಇಂತಹ ಕಥೆಗೆ ರಾಮ್‌ಚೇತನ್ ಹೀರೋ ಆಗಿದ್ದು, ನಟಿ ಮಯೂರಿ ವೇಶ್ಯೆಯ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಮುಂತಾದ ಕಲಾವಿದರು ತಮ್ಮ ತಮ್ಮ ಪಾತ್ರ ಪೋಷಣೆ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X