ಗ್ಯಾರೇಜ್ ಟು ಗ್ಲೋಬಲ್! ಸಾಲ ನೀಡದಿದ್ರೂ ₹60,000 ಕೋಟಿ ಕಂಪನಿ ಕಟ್ಟಿಬೆಳೆಸಿದ ಬಯೋಕಾನ್ ಒಡತಿಯ ಯಶೋಗಾಥೆ

ಬೆಂಗಳೂರು: ದೀರ್ಘ ಕಾಯಿಲೆಗಳಿಗೆ ಔಷಧಿ ನೀಡುವ, ದೇಶ ವಿದೇಶಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಬಯೋಕಾನ್ ಸಂಸ್ಥೆಯು ಇಂದು ಅಗ್ರಮಾನ್ಯ ಸಂಸ್ಥೆಯಾಗಿ ಬೆಳೆದಿದೆ. ಇಷ್ಟೊಂದು ದೊಡ್ಡ ಕಂಪನಿಯು ಗ್ಯಾರೆಂಜ್ ವೊಂದರಲ್ಲಿ ಆರಂಭವಾಗಿತ್ತು ಎಂದರೆ ಎಂಥವರು ಒಂದು ಕ್ಷಣ ಅಚ್ಚರಿಗೆ ಒಳಗಾಗುತ್ತಾರೆ. ಬಾಡಿಗೆ ಗ್ಯಾರೇಜ್‌ನಲ್ಲಿ ಕಂಪನಿ ಶುರು ಮಾಡಿದ ಮುಖ್ಯಸ್ಥೆ, ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ನಡೆದು ಬಂದ ಹಾದಿ ಉದ್ಯಮ ಆರಂಭಿಸುವವರಿಗೆ ಸದಾ ಮಾದರಿಯಾಗಿದೆ.

ಗ್ಯಾರೇಜ್‌ನಿಂದ ಜಾಗತಿಕ ಬಯೋಫಾರ್ಮಾ ಸಾಮ್ರಾಜ್ಯಕ್ಕೆ ಕಾಲಿಡಲು ಮಹಿಳೆಯೊಬ್ಬರು ದಶಕಗಳ ಹಿಂದೆ ಮಹತ್ವ ನಿರ್ಧಾರ ಕೈಗೊಂಡಿದ್ದರು. ಆದರೆ ಈ ಉದ್ಯಮ ಆರಂಭ, ಯಶಸ್ಸು, ಆರ್ಥಿಕ ವಹೀವಾಟು ಅಷ್ಟು ಸುಲಭವಾಗಿರಲಿಲ್ಲ. ಬಯೋಕಾನ್ ಸಂಸ್ಥೆ ಹುಟ್ಟಿ, ನಡೆದು ಬಂದ ರೋಚಕ ಕಥೆಯನ್ನು ಲಿಂಕ್ಡ್‌ ಇನ್‌ನಲ್ಲಿ ಅನಿಲ್ ಕುಮಾರ್ ರೆಡ್ಡಿ ಮಿಡ್ಡಿ ಅವರು ಹಂಚಿಕೊಂಡಿದ್ದಾರೆ. ಇದೀಗ ಮತ್ತೆ ವೈರಲ್ ಆಗುತ್ತಿದೆ.

Kiran Mazumdar Shaw Journey

ಮಹಿಳೆ ಎಂಬ ಕಾರಣಕ್ಕೆ ಬ್ಯಾಂಕ್ ಸಾಲ ನೀಡಲು ನಕಾರ!

ಹೌದು, 1978 ರಲ್ಲಿ ಇಂದಿನ ಯಶಸ್ವಿ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಬಯೋಟೆಕ್ ವ್ಯವಹಾರವನ್ನು ನಿರ್ಮಿಸಲು ಮುಂದಾಗಿದ್ದರು. ಆದರೆ ಅಂದು ಅವರಿಗೆ ಮಹಿಳೆ ಎಂಬ ಕಾರಣಕ್ಕೆ ಬ್ಯಾಂಕುಗಳು ಹಣಕಾಸು ನೆರವು (ಸಾಲ) ಒದಗಿಸಲು ನಿರಾಕರಿಸಿದ್ದರು ಎಂಬ ಕರಾಳ ಸತ್ಯವನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರಿನ ಐಟಿ ದಂಪತಿ ವಿಭಿನ್ನ ಸಾಧನೆ: ವಾರ್ಷಿಕ ₹56 ಲಕ್ಷ ಆದಾಯ; ಐಟಿ ಬಿಟ್ಟು ಯಶಸ್ವಿ ಉದ್ಯಮಿಗಳಾದ ಕಥೆ
ಬೆಂಗಳೂರಿನ ಐಟಿ ದಂಪತಿ ವಿಭಿನ್ನ ಸಾಧನೆ: ವಾರ್ಷಿಕ ₹56 ಲಕ್ಷ ಆದಾಯ; ಐಟಿ ಬಿಟ್ಟು ಯಶಸ್ವಿ ಉದ್ಯಮಿಗಳಾದ ಕಥೆ

ಇಂದು, ಅಂದು ಎಂದೆಂದಿಗೂ ಈ ಸಮಾಜದಲ್ಲಿ ವ್ಯವಸ್ಥಿತ ಪಕ್ಷಪಾತ ಬೇರೂರಿದೆ. ತಮ್ಮವರನ್ನು ಬಿಟ್ಟು ಬೇರೆಯವರು ಬೆಳೆಬಾರದು ಎಂಬ ಉದ್ದೇಶ ಸದಾ ಜಾಗೃತವಾಗಿರುತ್ತದೆ. ಅದರಲ್ಲೂ ಮಹಿಳೆ, ಇವರೇನು ಮಾಡಬಲ್ಲರು ಎಂಬ ಭಾವನೆಯೇ ತುಂಬಿದ್ದ ಕಾಲದಲ್ಲಿ ಇವರು ಯಾವುದಕ್ಕೂ ಅಂಜದೇ, ಸವಾಲುಗಳಿಗೆ ಬೆನ್ನು ತೋರದೇ ದಿಟ್ಟ ನಿರ್ಧಾರ ಮಾಡಿ, ಬಯೋಕಾನ್ ಸಂಸ್ಥೆಯನ್ನು ಗ್ಯಾರೇಜ್‌ನಲ್ಲಿ ಆರಂಭಿಸಿದರು.

ಇದನ್ನು ನಂಬಲು ತುಸು ಕಷ್ಟವೆನಿಸಿದರೂ ಈ ವಿಚಾರ ನಿಜ. ಬ್ಯಾಂಕ್‌ಗಳು ಹಣದ ನೆರವು ನೀಡದಿದ್ದರೂ ಧೃತಿಗೆಡದೇ ಅಂದು ಕಿರಣ್ ಮಜುಂದಾರ್ ಶಾ ಅವರು ಕೇವಲ ₹10,000 ಆರಂಭಿಕ ಹೂಡಿಕೆಯೊಂದಿಗೆ ಬಾಡಿಗೆ ಗ್ಯಾರೇಜ್‌ನಲ್ಲಿ ಬಯೋಕಾನ್ ಸಂಸ್ಥೆಯನ್ನು ಪ್ರಾರಂಭಿಸಿದರು. ಅದೀಗ ಹೆಮ್ಮರವಾಗಿ ಬೆಳೆದಿದೆ. ಔಷಧಿಗಳ ನೀಡುವ ಸಂಸ್ಥೆಯು ಇಂದು ಜಾಗತಿಕ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವುದು ಕನ್ನಡಿಗರ ಹೆಮ್ಮೆಯಾಗಿದೆ.

₹60,000 ಕೋಟಿ ಒಡತಿ

ಗ್ಯಾರೇಜ್‌ನಲ್ಲಿ ಆರಂಭವಾದ ಕಂಪನಿ ಇಂದು ಮಧುಮೇಹ, ಆಂಕೊಲಾಜಿ (ಕ್ಯಾನ್ಸರ್ ಚಿಕಿತ್ಸೆ), ರೋಗನಿರೋಧಕ ಶಾಸ್ತ್ರ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಗೆ ಕೈಗೆಟುಕುವ ಔಷಧಗಳು ಮತ್ತು ಬಯೋಸಿಮಿಲರ್‌ಗಳ ಅಭಿವೃದ್ಧಿಪಡಿಸುತ್ತಿದೆ. ಬಯೋಕಾನ್ ಸುಮಾರು ₹60,000 ಕೋಟಿ ಮೌಲ್ಯದ ಪ್ರವರ್ತಕ ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ಉದ್ಯಮವಾಗಿ ಬೆಳೆದು ನಿಂತಿದೆ. ಯಾರ ನೆರವು ಸಿಗಲಿಲ್ಲ ಎಂದುಕೊಂಡು ಕೈಚೆಲ್ಲಿ ಕೂತಿದ್ದರೆ ಇಂದು ಈ ಉದ್ಯಮದ ಅಸ್ತಿತ್ವವೇ ಇರುತ್ತಿಲ್ಲ. ದೃಢನಿಶ್ಚಿಯ, ಎದೆಗುಂದದ ಆತ್ಮವಿಶ್ವಾಸವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಬಯೋಕಾನ್ ಮುಖ್ಯಸ್ಥೆ ತೋರಿಸಿಕೊಟ್ಟಿದ್ದಾರೆ.

ಇಂದಿಗೂ ವಿಶ್ವಾದ್ಯಂತ ಲಕ್ಷಾಂತರ ರೋಗಿಗಳು ಅದರ ಕೈಗೆಟುಕುವ ಜೀವ ಉಳಿಸುವ ಔಷಧಿಗಳನ್ನು ಅವಲಂಬಿಸಿದ್ದಾರೆ. ಕಿರಣ್ ಮಜುಂದಾರ್ ಶಾ ಅವರ ಉದ್ಯಮ ಪ್ರಯಾಣವು ಅದೆಷ್ಟೋ ಮಹಿಳಾ ಉದ್ಯಮಿಗಳ ತಲೆಮಾರುಗಳಿಗೆ ಸ್ಪೂರ್ತಿಯಾಗಿದೆ.

ಜನರು ನಮಗಾಗಿ ಯಾವತ್ತು ಬಾಗಿಲು ತೆರೆಯುವುದಿಲ್ಲ. ಅಂದುಕೊಂಡಂತೆ ಆಗಿದಿದ್ದಾಗ, ಸಮಾಜ, ನಂಬಿದವರು ಕೈ ಬಿಟ್ಟಾಗ, ನಮಗೆ ನಾವದೇ ಸ್ವಂತ ಅಡಿಪಾಯವನ್ನು ನಿರ್ಮಿಸಬೇಕು. ನಿಜವಾದ ದಾರ್ಶನಿಕರು ದೃಢೀಕರಣಕ್ಕಾಗಿ ಕಾಯುವುದಿಲ್ಲ. ಅವರು ತಮ್ಮದೇ ಮೌಲ್ಯವನ್ನು ಸೃಷ್ಟಿಸುತ್ತಾರೆ, ಯಶಸ್ವಿಯಾಗುತ್ತಾರೆ ಎಂಬ ಮಾತಿಗೆ ಕಿರಣ್ ಮಜುಂದಾರ್ ಶಾ ಅವರೇ ಮಾದರಿಯಾಗಿದ್ದಾರೆ.

ಅದ್ಧೂರಿ ಮದುವೆ ಬೇಡ, ಸ್ವಂತ ಮನೆಯೇ ಸಾಕು; ಬೆಂಗಳೂರಿನ ಜೋಡಿಯ ಸರಳ ನಿರ್ಧಾರಕ್ಕೆ ನೆಟ್ಟಿಗರು ಫಿದಾ
ಅದ್ಧೂರಿ ಮದುವೆ ಬೇಡ, ಸ್ವಂತ ಮನೆಯೇ ಸಾಕು; ಬೆಂಗಳೂರಿನ ಜೋಡಿಯ ಸರಳ ನಿರ್ಧಾರಕ್ಕೆ ನೆಟ್ಟಿಗರು ಫಿದಾ

ಬಯೋಕಾನ್ ಸಂಸ್ಥೆಯು ಸಾವಿರಾರು ಉದ್ಯೋಗಿಗಳೊಂದಿಗೆ ಮುಂದುವರಿದಿರುವ ಉದ್ಯಮವಾಗಿದ್ದು, ಯುಎಸ್, ಅಮೆರಿಕಾ ಸೇರಿದಂತೆ ಒಟ್ಟು 120ಕ್ಕೂ ಅಧಿಕ ದೇಶಗಳಿಗೆ ಉತ್ಪನಗಳು (ಔಷಧಿ) ಮಾರಾಟವಾಗುತ್ತವೆ. ಬರಿಗೈನಲ್ಲಿ ಮಹಿಳೆಯೊಬ್ಬರು ಇಷ್ಟೊಂದು ದೊಡ್ಡ ಸಾಮ್ರಾಜ್ಯ ನಿರ್ಮಿಸಿರುವುದು ನಿಜಕ್ಕೂ ಅಮೋಘ ಸಾಧನೆಯಾಗಿದೆ.

ಅವರ ಈ ಪೋಸ್ಟ್‌ಗೆ ಕೆಲವರು ಕಾಮೆಂಟ್ ಮಾಡಿದ್ದು, 'ಹ್ಯಾಟ್ಸ್ ಆಫ್ ಯು' ಎಂದಿದ್ದಾರೆ. 'ಯಶಸ್ವಿ ಕಂಪನಿಯನ್ನು ನಿರ್ಮಿಸುವುದು ಹಾಗೂ ಸಂಸ್ಥೆಯೊಂದನ್ನು ನಿರ್ಮಿಸುವುದರ ನಡುವೆ ಪ್ರಮುಖ ವ್ಯತ್ಯಾಸವಿದೆ. ಅಲ್ದೇ ಸಂಸ್ಥಾಪಕರು ಆರಂಭಿಕ ದೃಷ್ಟಿಕೋನಮೀರಿ ಸಮಾಜಕ್ಕೆ ಮೌಲ್ಯವನ್ನು ನೀಡುವುದು ಮುಖ್ಯವಾಗಿರುತ್ತದೆ. ಸವಾಲುಗಳ ಮಧ್ಯೆ ಮುಂದುವರಿಸಬಹುದಾದ ಸಾಮರ್ಥ್ಯಗಳು, ತಂಡಗಳು ಮತ್ತು ವ್ಯವಸ್ಥೆಗಳನ್ನು ರಚಿಸುವ ಅಗತ್ಯವಿದೆ' ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+