ಬೆಂಗಳೂರಿನ ಐಟಿ ದಂಪತಿ ವಿಭಿನ್ನ ಸಾಧನೆ: ವಾರ್ಷಿಕ ₹56 ಲಕ್ಷ ಆದಾಯ; ಐಟಿ ಬಿಟ್ಟು ಯಶಸ್ವಿ ಉದ್ಯಮಿಗಳಾದ ಕಥೆ

ಬೆಂಗಳೂರು: ಐಟಿ ವೃತ್ತಿಯಲ್ಲಿದ್ದ ದಂಪತಿಯು ಲಕ್ಷಾಂತರ ರೂಪಾಯಿ ಉದ್ಯೋಗ ಬಿಟ್ಟು ಆಹಾರ ಉದ್ಯಮ ಆರಂಭಿಸಿ ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇತರರ ಕೈ ಕೆಳಗೆ ದುರಿಯುವ ಹಂಗು ತೊರೆದು ಮಹತ್ತರ ಉದ್ದೇಶದೊಂದಿಗೆ ಸ್ವಂತ ಫುಡ್ ಬಿಸಿನೆಸ್ ಆರಂಭಿಸುವ ಮೂಲಕ ಗುರಿ ಮುಟ್ಟಿದ್ದಾರೆ. ಐಟಿ ಬಿಟ್ಟು ವಾರ್ಷಿಕ 56 ಲಕ್ಷ ರೂಪಾಯಿ ಸಂಪಾದಿಸುತ್ತಿರುವ ದಂಪತಿ ಸ್ಪೂರ್ತಿದಾಯಕ ಕಥೆ ನೆಟ್ಟಿಗರ ಕಣ್ಣರಳಿಸುವಂತೆ ಮಾಡಿದೆ.

ಬೆಂಗಳೂರಿನಂಥಹ ಬ್ಯೂಸಿ ಊರಿನಲ್ಲಿ ಐಟಿ, ಕಾರ್ಪೋರೇಟ್ ಸೇರಿದಂತೆ ಉದ್ಯೋಗಿಗಳು, ಮತ್ತು ಇಲ್ಲಿ ಬದುಕುವ ಜನರು ನಿತ್ಯ ಕೆಲಸದ ಒತ್ತಡದಲ್ಲಿರುತ್ತಾರೆ. ಆರೋಗ್ಯ ಕಾಳಜಿ ಕಡಿಮೆ ಆಗಿರುತ್ತದೆ. ಕೆಲವರಂತೂ ಊಟಕ್ಕೆ ಆದ್ಯತೆಯನ್ನು ನೀಡದೇ, ಸುಮ್ಮನೆ ಮೂರು ಹೊತ್ತು ಊಟ ಮಾಡುತ್ತಿರುತ್ತಾರೆ. ಅಂಥವರಿಗೆ ಶುಚಿ, ರುಚಿ ಮತ್ತು ಪ್ರೋಟಿನ್, ಕ್ಯಾಲೋರಿ ಆಧಾರಿತ ಆಹಾರ ಒದಗಿಸಲು ಈ ದಂಪತಿ ದಿಯಾ ಕೃಷ್ಣಕುಮಾರ್ ಮತ್ತು ಆದಿತ್ಯ ನಟರಾಜನ್ ಅವರು ನಿರ್ಧರಿಸಿದರು.

Bengaluru IT Couple

ವೆಲ್‌ಫೆಡ್ ಬಿಸಿನೆಸ್ ಆರಂಭವಾಗಿದ್ದೇಗೆ?

ಐಟಿ ವೃತ್ತಿಪರತೆ ತೊರೆದ ದಂಪತಿ 'ವೆಲ್‌ಫೆಡ್' (Wellfed) ಸೇವೆ (ಬೆಂಗಳೂರು ಬೇಸ್ ಸಬ್‌ಸ್ಕ್ರಿಪ್ಷನ್ ಆಧಾರದಲ್ಲಿ ಆರೋಗ್ಯಕರ ಆಹಾರ ಒದಗಿಸುವ ಸೇವೆ) ಉದ್ಯಮಕ್ಕೆ ಇಳಿದರು. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ದಂಪತಿ ಐಟಿ ವೃತ್ತಿಜೀವನ ಆರಂಭಿಸಿದರು. ಆದರೆ ಅವರು ಅಂತಿಮವಾಗಿ ಆಹಾರ ಉದ್ಯಮವ ಆಯ್ಕೆ ಮಾಡಿಕೊಂಡು, ಆ ನಿಟ್ಟಿನಲ್ಲಿ ಬಂಡವಾಳ ಹೂಡಿ, ಶ್ರಮಿಸಿದ್ದಾರೆ. ಗುರಿ ಸ್ಪಷ್ಟವಾಗಿದ್ದು, ಪ್ರಯತ್ನ ಪಟ್ಟರೇ ಯಾವುದು ಅಸಾಧ್ಯವಲ್ಲ ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದೆ. ಇದಕ್ಕೆ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ.

ಸೆಪ್ಟೆಂಬರ್ 2024ರಲ್ಲಿ ಈ ದಂಪತಿ ₹15 ಲಕ್ಷದ ಸ್ವಂತ ಬಂಡವಾಳದೊಂದಿಗೆ 'ವೆಲ್‌ಫೆಡ್' (Wellfed) ಅನ್ನು ಪ್ರಾರಂಭಿಸಿದರು. ಬಿಡುವಿಲ್ಲದ ಕೆಲಸದ ಒತ್ತಡದಲ್ಲಿರುವ ವೃತ್ತಿಪರರಿಗೆ, ಪೌಷ್ಟಿಕಾಂಶಯುಕ್ತ, ಕೈಗೆಟುಕುವ ದರದ ಮತ್ತು ಮನೆಯ ಶೈಲಿಯ ಭಾರತೀಯ ಊಟವನ್ನು ಒದಗಿಸುವ ಉದ್ದೇಶದೊಂದಿಗೆ ಅವರು ಈ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ.

ಐಟಿಯಿಂದ ಉದ್ಯಮಕ್ಕೆ ಶಿಫ್ಟ್ ಪಯಣ ಹೇಗಿತ್ತು?

ದಂಪತಿ ದಿಯಾ ಕೃಷ್ಣಕುಮಾರ್ ಮತ್ತು ಆದಿತ್ಯ ನಟರಾಜನ್ ಅವರಿಗೆ ಒಂದು ವೃತ್ತಿ ಬಿಟ್ಟು ಇನ್ನೊಂದನ್ನು ಆಯ್ಕೆ ಮಾಡಿಕೊಳ್ಳುವಾಗ ಹಲವು ಸವಾಲುಗಳಿದ್ದವು. ಎದೆಗುಂದದೇ ಅವರು, 15 ಲಕ್ಷ ರೂಪಾಯಿ ಆರಂಭಿಕ ಬಂಡವಾಳದೊಂದಿಗೆ ವೆಲ್‌ಫೆಡ್ ಪ್ರಾರಂಭಿಸಿದರು.

ವಾರ್ಷಿಕ ಆದಾಯ ₹56 ಲಕ್ಷ!

ಆರಂಭದಲ್ಲಿ ಆರು ಸದಸ್ಯರ ಆರಂಭಿಕ ತಂಡವನ್ನು ರಚಿಸಿದರು. ಬೆಂಗಳೂರಿನ ವ್ಯಾಪ್ತಿಯಲ್ಲಿ ಅವರು ಸುಮಾರು 55,000 ಊಟಗಳನ್ನು ಒದಗಿಸಿದರು. ನೋಡ ನೋಡುತ್ತಿದ್ದಂತೆ ಕೆಲವೇ ದಿನಗಳಲ್ಲಿ ಅವರ ಆಹಾರ 1,500 ಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿತು. ಮೊದಲ ವರ್ಷದಲ್ಲಿ ₹45 ಲಕ್ಷದ ಆದಾಯ ಗಳಿಸಿದರು. ಇದೇ ವರ್ಷ 2026ರ ಸೆಪ್ಟೆಂಬರ್ ಹೊತ್ತಿಗೆ ಅವರ ಆದಾಯ ಬರೋಬ್ಬರಿ ₹56 ಲಕ್ಷ ರೂ. ದಾಟಿದೆ ಎನ್ನಲಾಗಿದೆ.

ಪ್ರತಿ ಊಟಕ್ಕೆ ₹269 ರಿಂದ ಪ್ರಾರಂಭವಾಗುವ 'ಮೀಲ್ ಸಬ್‌ಸ್ಕ್ರಿಪ್ಷನ್' (ಊಟದ ಚಂದಾದಾರಿಕೆ) ಮೂಲಕ, 'ವೆಲ್‌ಫೆಡ್' ಕೆಲಸದಲ್ಲಿ ನಿರತರಾಗಿರುವ ವೃತ್ತಿಪರರು ಎದುರಿಸುವ ಒಂದು ಸಾಮಾನ್ಯ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಇಲ್ಲಿ ಚೆಂದಾದಾರರಾದರೆ ನೀವು ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಆರೋಗ್ಯಕರ ಆಹಾರವನ್ನು ಸವಿಯಬಹುದಾಗಿದೆ.

ಹೊಸ ಉದ್ಯಮ ಆರಂಭಿಸಬೇಕೆನ್ನುವವರು ಯಾವಾಗಲೂ ಸಂಪೂರ್ಣವಾಗಿ ಹೊಸದನ್ನೇ ಕಂಡು ಹಿಡಿಯಬೇಕು ಎಂದೇನಿಲ್ಲ. ಕೆಲವೊಮ್ಮೆ, ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗುರುತಿಸಿ, ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡು, ಅದಕ್ಕೊಂದು ಪ್ರಾಯೋಗಿಕ ಪರಿಹಾರವನ್ನು ರೂಪಿಸುವುದೇ ಉದ್ಯಮಶೀಲತೆಯಾಗಿರುತ್ತದೆ ಎಂಬುದನ್ನು ಈ ಯುವ ದಂಪತಿ ಸಾಬೀತು ಮಾಡಿದ್ದಾರೆ.

ಸ್ಪಷ್ಟ ಕಲ್ಪನೆ ಜೊತೆಗೆ ದೃಢ ನಿಶ್ಚಯ ಮತ್ತು ನಿರಂತರ ಪ್ರಯತ್ನವನ್ನು ಸೇರಿಸಿದರೆ, ಅದು ಹೇಗೆ ಒಂದು ಯಶಸ್ವಿ ಉದ್ಯಮವಾಗಿ ಬದಲಾಗಬಲ್ಲದು ಎಂಬುದಕ್ಕೆ ಇವರ ಪಯಣವೇ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+