ಅದ್ಧೂರಿ ಮದುವೆ ಬೇಡ, ಸ್ವಂತ ಮನೆಯೇ ಸಾಕು; ಬೆಂಗಳೂರಿನ ಜೋಡಿಯ ಸರಳ ನಿರ್ಧಾರಕ್ಕೆ ನೆಟ್ಟಿಗರು ಫಿದಾ

ಬೆಂಗಳೂರು: ಇಂದಿನ ದುಬಾರಿ ಕಾಲದಲ್ಲಿ ಅತ್ಯಂತ ಅದ್ಧೂರಿಯಾಗಿ, ದುಂದು ವೆಚ್ಚ ಮಾಡಿ ಮದುವೆ ಆಗುವವರ ಮಧ್ಯ ಬೆಂಗಳೂರಿನ ಈ ಜೋಡಿಯ ವಿವಾಹವು ವಿಶೇಷವಾಗಿ ಗಮನ ಸೆಳೆದಿದೆ. ಜೀವನದಲ್ಲಿ ಒಮ್ಮೆ ನಡೆಯುವ ವಿವಾಹವೆಂಬ ಶುಭ ಸಮಾರಂಭವನ್ನು ವಿಜೃಂಭಣೆಯಿಂದ ಹಣದ ಚಿಂತೆ ಮಾಡದೇ ನೆರವೇರಿಸುವವರಿದ್ದಾರೆ. ಆದರೆ ಬೆಂಗಳೂರು ಜೋಡಿಯ ಸರಳ ವಿವಾಹವು ಎಲ್ಲರಿಗೂ, ವೀಶೇಷವಾಗಿ ಮಧ್ಯಮ ವರ್ಗದವರಿಗೆ ಮಾದರಿ ಅನ್ನಿಸಿಕೊಂಡಿದೆ. ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಇತ್ತೀಚೆಗೆ ತಾವು ಖರೀದಿಸಿದ ಹೊಸ ಮನೆಯಲ್ಲಿ ಬೆಂಗಳೂರಿನ ದಂಪತಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಅದ್ದೂರಿ ಸಮಾರಂಭಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಬದಲು, ತಾವು ಹೊಸದಾಗಿ ಖರೀದಿಸಿದ ಫ್ಲಾಟ್‌ನಲ್ಲೇ ಆಪ್ತ ಸಂಬಂಧಿಕರು, ಸ್ನೇಹಿತರ ಸಾಕ್ಷಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

Bengaluru Couple Wedding

ವಿಧಿವಿಧಾನಗಳೊಂದಿಗೆ ವಧು-ವರರ ವಿವಾಹ

ಮದುವೆಗೆ ಹಣ ಎಷ್ಟಿದ್ದರು ಸಾಲದು. ಈ ಕಾರಣಕ್ಕೆ ಹಿರಿಯರು 'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಅರ್ಥಗರ್ಭಿತ ಮಾತನ್ನು ಹೇಳುತ್ತಾರೆ. ಈ ಮಾತಿನ ಅರ್ಥ ಬಲ್ಲವರಂತೆ ಈ ಜೋಡಿ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಿ ಖರೀದಿಸಿದ ಮನೆಯಲ್ಲಿ ಸರಳವಾಗಿ, ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರು ಸಾಂಪ್ರದಾಯಿಕ ವಿವಾಹ ವಿಧಿವಿಧಾನಗಳೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದರಿಂದ ಅದ್ಧೂರಿ ಆಚರಣೆ, ದುಂದು ವೆಚ್ಚಕ್ಕೆ ಬ್ರೇಕ್ ಹಾಕಿದ್ದಾರೆ. ಅನಗತ್ಯ ಖರ್ಚು, ಸಾಲದಿಂದ ಮುಕ್ತರಾಗಿದ್ದಾರೆ. ಸರಳ ವಿವಾಹವಾಗುವ ಉದ್ದೇಶದಿಂದಲೇ ಅವರು ಹಣ ಕೂಡಿಸಿ ಮನೆ ಖರೀದಿಸಿದ್ದಾರೆ. ಅದೇ ಮನೆಯಲ್ಲಿಯೇ ವಿವಾಹ ಮಾಡಿಕೊಳ್ಳುವ ಮೂಲಕ ಆಧುನಿಕ ಯುಗದಲ್ಲೂ ಸರಳ ವಿವಾಹದಿಂದ ಆರ್ಥಿಕ ಒತ್ತಡ, ಅಧಿಕ ನೆಮ್ಮದಿ, ಮೇಲಾಗಿ ಭವಿಷ್ಯ ಸುಭೀಕ್ಷವಾಗಿರುತ್ತದೆ ಎಂದಬುದನ್ನು ಸಾಬೀತು ಮಾಡಿದ್ದಾರೆ.

ದೀರ್ಘಾವಧಿಯ ಭವಿಷ್ಯಕ್ಕೆ ಆದ್ಯತೆ ಕೊಡಬೇಕು

ವರನ ಸಹೋದರನ ಪ್ರಕಾರ, ಸಂಬಂಧಿಕರನ್ನು ಮೆಚ್ಚಿಸಲು ಒಂದೇ ದಿನದ ಸಮಾರಂಭಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕಿಂತ, ಸ್ವಂತ ಮನೆಯನ್ನು ಖರೀದಿಸುವುದು ದೀರ್ಘಾವಧಿಯಲ್ಲಿ ಹೆಚ್ಚು ಮೌಲ್ಯಯುತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಎರಡು ವಧು-ವರನ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಸರಳ ವಿವಾಹದ ನೀರ್ಣಯವು ಮದುವೆ ವೆಚ್ಚಗಳು, ಸಾಮಾಜಿಕ ಒತ್ತಡ ಮತ್ತು ಬಾಹ್ಯ ಪ್ರದರ್ಶನಕ್ಕಿಂತ ಆರ್ಥಿಕ ಭದ್ರತೆಗೆ ಮುಖ್ಯವಾಗಿರುತ್ತದೆ. ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂಬ ಸಂದೇಶವ ಸಾರಿದ್ದು, ಇದು ತುಂಬಾ ದಿನಗಳ ಹಿಂದೆ ನಡೆದರೂ ಸಹಿತ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

ದುಂದು ವೆಚ್ಚ ಶುರುವಾಗಿದ್ದೇ ಈಚೆಗೆ; ನೆಟ್ಟಿಗರು

ಇವರು ಮನೆಯಲ್ಲೇ ಸರಳವಾಗಿ ಮದುವೆ ಆದರು ಎಂಬ ಸುದ್ದಿ ತಮಾಷೆಯಾಗಿದೆ! ಎಂದು ಒಬ್ಬರು ಹೇಳಿದ್ದಾರೆ. ' ನಮ್ಮ ಅಜ್ಜನವರ ಕಾಲದಲ್ಲಿ ನಾಲ್ಕು ದಿನಗಳ ಕಾಲ ಮನೆಯಲ್ಲೇ ಗುರು ಹಿರಿಯ ಸಾಕ್ಷಿಯಾಗಿ ಮದುವೆಗಳು ನಡೆಯುತ್ತಿದ್ದವು. ಅಡುಗೆ ಸೇರಿದಂತೆ ಎಲ್ಲ ಕೆಲಸಗಳನ್ನು ಮನೆಯವರೇ ನೋಡಿಕೊಳ್ಳುತ್ತಿದ್ದರು. ಇತ್ತೀಚಿನ 4-5 ದಶಕಗಳಲ್ಲಿ ದುಂದು ವೆಚ್ಚದ ಮದುವೆಗಳು ಆರಂಭವಾಗಿವೆ. ವರ್ಣರಂಜಿತ ಸಮಾರಂಭ, ಲೈಟಿಂಗ್, ಇವೆಂಟ್ ಟೀಂ ಗಳಿಂದ ತುಂಬಿ ಹೋಗಿವೆ ಎಂದಿದ್ದಾರೆ.

ಇನ್ನೊಬ್ಬರು ಹಿಂದೂ ಸಾಂಪ್ರದಾಯದ ಆಚರಣೆಗಳನ್ನು ಪ್ರಶ್ನೆಸಲು ಸದಾ ಕೆಲವು ಮುಂದಿರುತ್ತಾರೆ. ಮದುವೆ ದುಂದು ವೆಚ್ಚ ಮಾತನಾಡುವವರು, ದುಬಾರಿ ಕಾರು, ಸ್ಮಾರ್ಟ್ ಫೋನ್, ವಾರಾಂತ್ಯದ ಸಿನಿಮಾ, ಪಬ್‌ಗಳಿಗೆ ಖರ್ಚು ಮಾಡುವುದು ದುಂದು ವೆಚ್ಚವಲ್ಲವೇ ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅನೇಕರು ಇವರ ಸರಳ ವಿವಾಹ ಮೆಚ್ಚಿದ್ದು, ಕೆಲವರು ತಮ್ಮದೇ ಆಯಾಮಗಳಲ್ಲಿ ಚರ್ಚೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+