ಇಡ್ಲಿ, ಪೊಹಾ, ರೈಸ್‌ನಿಂದ ಆಮ್ಲೆಟ್, ನಾಜ್‌ವೆಜ್‌ವರೆಗೆ! ಬೆಂಗಳೂರು-ಮುಂಬೈ ಸ್ಲೀಪರ್ ರೈಲಿನ ಫುಡ್ ಮೆನು ಹೀಗಿದೆ
ಬೆಂಗಳೂರು: ಬಹುನಿರೀಕ್ಷೆಯ ದೇಶದ 3ನೇ ಸ್ಲೀಪರ್ ವಂದೇ ಭಾರತ್ ಎಕ್ಸ್ (Sleeper Vande Bharat Express Train) ನಲ್ಲಿ ಪ್ರಯಾಣಿಕರಿಗೆ ಸ್ಥಳೀಯ ಊಟ-ತಿಂಡಿ, ಖಾದ್ಯಗಳ ಸೇವೆ ಉಣಬಡಿಸಲಾಗುತ್ತಿದೆ. ರೈಲಿನಲ್ಲಿ 'ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ'ದ (IRCTC) ಮೆನು ಗ್ರಾಹಕರಿಗೆ ಬಲು ಇಷ್ಟವಾಗಿದೆ. ಹಾಗಾದರೆ ಏನೆಲ್ಲ ತಿಂಡಿ, ಊಟ, ಪದಾರ್ಥಗಳನ್ನು ನೀಡಲಾಗುತ್ತಿದೆ.
ಹೌರಾ-ಕಾಮಾಕ್ಯ ಮತ್ತು ವಾರಣಾಸಿ-ದೆಹಲಿ ನಡುವಿನ ಎರಡು ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಳಿಕ ಬೆಂಗಳೂರು-ಮುಂಬೈ ನಡುವೆ ಮೂರನೇ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನವೆಂಬರ್ 1ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಪ್ರಯಾಣಿಕರು ತಮ್ಮ ಮೊದಲ ಪ್ರಯಾಣದಲ್ಲೇ ಆರಾಮದಾಯಕ ಸೇವೆ, IRCTC ಆತಿಥ್ಯಕ್ಕೆ ಮನಸೋತಿದ್ದಾರೆ. ಸುದೀರ್ಘ ಪ್ರಯಾಣದ ಅನುಭವವನ್ನು ಪ್ರಯಾಣಿಕರು ಹಂಚಿಕೊಂಡಿದ್ದಾರೆ.

ಊಟಿ-ತಿಂಡಿ, ಟೀ ಚಿಂತೆ ಬಿಡಿ, ಎಲ್ಲವು ನೀವಿದ್ದಲ್ಲಿಗೇ..
2026ರ ಆರಂಭದಲ್ಲಿ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಆಯಾ ಪ್ರದೇಶಗಳಿಗೆ ವಿಶಿಷ್ಟವಾದ ಸಾಂಪ್ರದಾಯಿಕ ಖಾದ್ಯಗಳನ್ನು ಆಹಾರ, ತಿಂಡಿಯಾಗಿ ಬಡಿಸಲಾಗುವುದು. ಈ ಮೂಲಕ ಸ್ಥಳೀಯ ಆಹಾರ ಸಂಸ್ಕೃತಿಯ ಮಹತ್ವ ಸಾರಲಾಗುವುದು ಎಂದು ರೈಲ್ವೆ ಸಚಿವಾಲಯ ಘೋಷಿಸಿತ್ತು.
ಅದರಂತೆ ಪ್ರಯಾಣಿಕರು ಉತ್ತಮ ಗುಣಮಟ್ಟದ ಆಹಾರ ಸೇವೆ ನೀಡುತ್ತಿದ್ದು, ಬೆಂಗಳೂರು-ಮುಂಬೈ ಸ್ಲೀಪರ್ ರೈಲಿನ ಆಹಾರದ ಮೆನು ಬಹಿರಂಗವಾಗಿದೆ. ಪ್ರಯಾಣಿಕರಿಗೆ ಪ್ರಯಾಣದ ಅವಧಿಯಲ್ಲಿ ಆಯಾ ಸ್ಥಳೀಯ ಖಾದ್ಯ ಸವಿಯಬಹುದು. ಸುದೀರ್ಘ ಪ್ರಯಾಣದ ವೇಳೆ ಆಹಾರ ಸಿಗುತ್ತೋ ಇಲ್ಲವೋ, ಸಕಾಲಕ್ಕೆ ನೀರು, ತಿಂಡಿ,ಕಾಫಿ ಚಿಂತೆಯನ್ನು ಐಆರ್ ಸಿಟಿಸಿ ಇಲ್ಲವಾಸಿದೆ. ಅದರ ಯಾವುದೇ ಒತ್ತಡ ಇಲ್ಲದೇ ನೀವಿದ್ದಲ್ಲಿಗೆ ಆಹಾರ ಬರುತ್ತದೆ.
ಸ್ಲೀಪರ್ ವಂದೇ ಭಾರತ್ ರೈಲಲ್ಲಿ ಹೇಗಿದೆ ಆಹಾರ ಮೆನು?
ಬೆಂಗಳೂರು-ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಕರಿಗೆ ಪ್ರಾದೇಶಿಕ ಶೈಲಿಯ ಖಾದ್ಯಗಳನ್ನು ಬಡಿಸಲಾಗುತ್ತದೆ. ರೈಲಲ್ಲಿ ಬೆಳಗ್ಗೆ ತಿಂಡಿ/ಉಪಹಾರಕ್ಕೆ ಇಡ್ಲಿ-ಸಾಂಬಾರ್, ಮಸಾಲಾ ಅವಲಕ್ಕಿ (ಪೋಹಾ), ಕೇಸರಿ ಬಾತ್, ವೆಜ್ ಕಟ್ಲೆಟ್ ಅಥವಾ ಎರಡು ಮೊಟ್ಟೆಗಳ ಆಮ್ಲೆಟ್ ನೀಡುತ್ತದೆ. ಇಲ್ಲಿ ಎಲ್ಲವುಗಳನ್ನು ನೀಡುವುದಿಲ್ಲ, ಬದಲಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಇದರೊಂದಿಗೆ ಬೆಳಗಿನ ಟೀ-ಕಾಫಿ ನೀಡಲಾಗುತ್ತದೆ.
ವೆಜ್, ನಾನ್ ವೆಜ್ ಸಹ ಸಿಗುತ್ತೆ!
ಇನ್ನೂ ರಾತ್ರಿ ಊಟದ ಮೆನುವಿನಲ್ಲಿ ಲೆಮನ್ ರೈಸ್ (ಚಿತ್ರಾನ್ನ) ಅಥವಾ ಅನ್ನ, ಚಪಾತಿ/ ಪರೋಟಾ, ಕರ್ನಾಟಕ ಶೈಲಿಯ ಅನ್ನ- ಸಾಂಬಾರ್, ಹಳದಿ ಬೇಳೆಯ ದಾಲ್ ತಡ್ಕಾ ಇರಲಿವೆ. ಸಸ್ಯಹಾರಿ ಪ್ರಿಯರಿಗೆ ಪನೀರ್ (ಒಂದು ಬಗೆಯ ಸಸ್ಯಾಹಾರಿ) ಅಥವಾ ಚಿಕನ್ ಖಾದ್ಯವನ್ನು ನೀಡಲಾಗುತ್ತದೆ. ಊಟದ ಪ್ಯಾಕ್ ಜೊತೆಗೆ ಮೊಸರು ಅಥವಾ ಮಜ್ಜಿಗೆ ಪ್ಯಾಕೇಟ್, ಸಿಹಿತಿಂಡಿಗಳು ಮೆನುವಿನಲ್ಲಿ ಸ್ಥಾನ ಪಡೆದಿವೆ.
ಬೆಂಗಳೂರು ಸರ್. ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ವರೆಗಿನ ಸುದೀರ್ಘ ದೂರದ ಪ್ರಯಾಣಿಕರು ಆಯಾ ಭಾಗಗಳ ಬಗೆ ಬಗೆಯ ಖಾದ್ಯಗಳನ್ನು ಸವಿಯಬಹುದು.
ಸಮಯ ಉಳಿತಾಯ
ವಾರದಲ್ಲಿ ಆರು ದಿನ ಈ ರೈಲು ಸಂಚಾರ ಮಾಡುತ್ತದೆ. ಬೆಂಗಳೂರಿನಿಂದ ಸೋಮವಾರ, ಮುಂಬೈನಿಂದ ಮಂಗಳವಾರ ಸಂಚಾರ ಮಾಡುವುದಿಲ್ಲ. 22 ಗಂಟೆಗಳ ದೂರದ ಪ್ರಯಾಣವನ್ನು ಕೇಲವ 16.10 ನಿಮಿಷದಲ್ಲಿ ಕ್ರಮಿಸಲಿದ್ದು, ಪ್ರಯಾಣಿಕರಿಗೆ ಸಮಯ ಉಳಿತಾಯ ಮಾಡುತ್ತದೆ. ಲಕ್ಸುರಿ, ಆರಾಮದಾಯಕ ಸೇವೆಗೆ, ಸ್ಥಳೀಯ ಸಾಂಪ್ರದಾಯಿಕ ಆಹಾರ ಸೇವೆಯು ಪ್ರಯಾಣಿಕರನ್ನು ಆಕರ್ಷಿಸಿದೆ.


Click it and Unblock the Notifications
