Get Updates
Get notified of breaking news, exclusive insights, and must-see stories!

ಸಮಯ ಪಾಲನೆಯ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಏರ್‌ಫೋರ್ಟ್‌ಗೆ 2ನೇ ಸ್ಥಾನ

ಬೆಂಗಳೂರು, ಜನವರಿ 05: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಸಮಯಕ್ಕೆ ಸರಿಯಾಗಿ ವಿಮಾನಗಳು ನಿರ್ಗಮಿಸುವ ನಿಲ್ದಾಣಗಳ ಪೈಕಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ.

ಇಂಗ್ಲೆಂಡ್‌ (ಯುಕೆ)ನ ಪ್ರಧಾನ ಕಚೇರಿಯ ವಾಯುಯಾನ ದತ್ತಾಂಶ ವಿಶ್ಲೇಷಣೆ 'ಸಿರಿಯಮ್' ಕಂಪನಿ ಉನ್ನತ-ಕಾರ್ಯನಿರ್ವಹಣೆಯ ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್‌ಗಳ- 2022 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಮಯದಲ್ಲಿ ಸಮಯಕ್ಕೆ ವಿಮಾನಗಳು ನಿಲ್ದಾಣದಿಂದ ನಿರ್ಗಮಿಸುವ ವ್ಯವಸ್ಥೆಯಲ್ಲಿ ಜಾಗತಿಕವಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ವು ಎರಡನೇ ಸ್ಥಾನಕ್ಕೆ ಭಾಜನವಾಗಿದೆ.

ಕಳೆದ ವರ್ಷ 2022ರಲ್ಲಿ 2,01,897 ವಿಮಾನಗಳನ್ನು ನಿರ್ವಹಿಸಿರುವ ಪೈಕಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶೇ. 84.08 ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ಸಕಾಲಕ್ಕೆ ನಿರ್ಗಮಿಸಿವೆ. ಇನ್ನು ಶೇ. 90.33ರಷ್ಟು (373,264 ವಿಮಾನ ನಿರ್ವಹಣೆ) ನಿಗದಿತ ಸಮಯಕ್ಕೆ ವಿಮಾನಯಾನ ಆರಂಭವಾದ ಹಿನ್ನೆಲೆಯಲ್ಲಿ ಟೋಕಿಯೊದ ಹನೇಡಾ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 7ನೇ ಸ್ಥಾನದಲ್ಲಿದೆ ಎಂದು ಕಂಪನಿ ತಿಳಿಸಿದೆ.

KIA has been 2nd ranked among global airports in terms of on-time departure during 2022

ಜಾಗತಿಕ ಕಾರ್ಯಾಚರಣೆಯ ಶ್ರೇಷ್ಠತೆಗಾಗಿ ಡೆಲ್ಟಾ ಏರ್ ಲೈನ್ಸ್ ಸಂಸ್ಥೆಯು ಸಿರಿಯಮ್‌ ಪ್ಲಾಟಿನಂ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ತನ್ನದಾಗಿಸಿಕೊಂಡಿದೆ. ಜಾಗತಿಕ ವಿಮಾನಯಾನ ಸಂಸ್ಥೆಯಲ್ಲಿ ಕಡಿಮೆ ವೆಚ್ಚದಲ್ಲಿ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಆಗಮಿಸುವ ನಿಲ್ದಾಣ ಪೈಕಿ ಬ್ರೇಜಿಲ್ ಅಗ್ರ ಸ್ಥಾನದಲ್ಲಿದೆ. ಇದರ ನಂತರ ಜಪಾನ್‌ನ ಆಲ್ ನಿಪ್ಪಾನ್ ಏರ್‌ವೇಸ್ (ಶೇ.88.61) ಮತ್ತು ಜಪಾನ್ ಏರ್‌ಲೈನ್ಸ್ (ಶೇ. 88) ನಂತರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಒಂದೇ ಒಂದು ಯುರೋಪಿಯನ್ ರಾಷ್ಟ್ರಗಳು ಯಾವ ವಿಭಾಗದಲ್ಲೂ ಸ್ಥಾನ ಪಡೆದಿಲ್ಲ ಎನ್ನಲಾಗಿದೆ.

KIA has been 2nd ranked among global airports in terms of on-time departure during 2022

ಸಿರಿಯಮ್ ಕಂಪನಿ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರದೇಶದ ಪ್ರಕಾರ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ, ಇಂಡಿಗೋ 5 (ಶೇ. 84.11), ಏರ್ ಏಷ್ಯಾ ಇಂಡಿಯಾ 6 (ಶೇ. 83.7), ಮತ್ತು ವಿಸ್ತಾರಾ 9 (ಶೇ. 80.98). 91.56 ರಷ್ಟು ಸಮಯಕ್ಕೆ ಸರಿಯಾಗಿ ಆಗಮಿಸುವ ಮೂಲಕ ಥಾಯ್ ಏರ್‌ಏಷ್ಯಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿವೆ. 91.38 ರಷ್ಟು ಸಮಯಕ್ಕೆ ಆಗಮಿಸುವ ಓಮನ್ ಏರ್ ಮಧ್ಯಪ್ರಾಚ್ಯ ಸಹ ಮುಂಚೂಣಿಯಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+