ಬೆಂಗಳೂರಿನಲ್ಲಿ ರಾಷ್ಟ್ರೀಯ ಸಿದ್ಧ ಉಡುಪು ಪ್ರದರ್ಶನ

ಕರ್ನಾಟಕ ಹೋಸೈರಿ ಮತ್ತು ಗಾರ್ಮೆಂಟ್ಸ್ ಅಸೋಸಿಯೇಷನ್ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.[ಮಾವು ಬೇಕೆ? ಲಾಲ್‌ಬಾಗ್‌ಗೆ ಭೇಟಿ ನೀಡಿ]
ಸಿದ್ಧ ಉಡುಪು ತಯಾರಿಕಾ ಮಾಲೀಕರು ಮತ್ತು ಮಾರಾಟಗಾರರಿಗೆ ಅನುಕೂಲವಾಗಲು ರಾಷ್ಟ್ರಮಟ್ಟದ ಮೇಳ ಆಯೋಜನೆಗೊಂಡಿದ್ದು ವಿವಿಧ ರಾಜ್ಯಗಳಿಂದ ಒಂದು ಸಾವಿರಕ್ಕೂ ಅಧಿಕ ಮಂದಿ ಆಗಮಿಸಲಿದ್ದಾರೆ ಎಂದು ಕರ್ನಾಟಕ ಹೋಸೈರಿ ಮತ್ತು ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಕುಮಾರ್ ಗರ್ಗ್ ತಿಳಿಸಿದ್ದಾರೆ.
ಕರ್ನಾಟಕ ಈ ಹಿಂದೆ ಸಿದ್ಧ ಉಡುಪುಗಳ ರಫ್ತಿನಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಈಗ ಅದು ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ. ಹೀಗಾಗಿ ಉತ್ತಮ ಬ್ರ್ಯಾಂಡ್‌ನ ವಸ್ತ್ರಗಳ ಬಗ್ಗೆ ಈ ಮೇಳದ ಮೂಲಕ ಚರ್ಚಿಸಿ ಮಾಹಿತಿ ನೀಡಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜೂ.2ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸಲಿದ್ದು, ಮೂರೂ ದಿನ ಸಂಜೆ 7ರವರೆಗೆ ನಡೆಯುತ್ತದೆ. ಮಕ್ಕಳು, ಮಹಿಳೆಯರು ಹಾಗೂ ಪುರುಷರ ಸುಮಾರು 200 ಬ್ರ್ಯಾಂಡ್‌ನ ನಾನಾ ವಿನ್ಯಾಸದ ಬಟ್ಟೆಗಳು ಪ್ರದರ್ಶನಗೊಳ್ಳಲಿವೆ.
ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸಿದ್ಧ ಉಡುಪು ಉದ್ಯಮದವರಿಗಾಗಿ ಮಾತ್ರ ಆಯೋಜಿಸಲಾಗಿದೆ.












Click it and Unblock the Notifications