KHB Flat: ಬೆಂಗಳೂರಲ್ಲಿ ಗೃಹ ಮಂಡಳಿ ಫ್ಲಾಟ್ ಮಾರಾಟ, ಪ್ರದೇಶ, ದರ ವಿವರ

ಬೆಂಗಳೂರು, ಜನವರಿ 29: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿದ ಫ್ಲಾಟ್ ಕೊಳ್ಳುವ ಚಿಂತನೆ ನಡೆಸುತ್ತಿರುವ ಜನರಿಗೆ ಮಾಹಿತಿಯೊಂದಿದೆ. ಮಂಡಳಿ ನಿಗದಿ ಮಾಡಿರುವ ದರಗಳು ಅತಿ ಹೆಚ್ಚಾಗಿದೆ ಎಂದು ಜನರು ವಿರೋಧ ಮಾಡುತ್ತಿದ್ದು, ಈಗ ಮಂಡಳಿ ಮನೆಗಳ ಖರೀದಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆದಿದ್ದು, ಜನರು ಫ್ಲಾಟ್‌ ಖರೀದಿಗೆ ಕೋಟಿ ಕೋಟಿ ರೂ. ಹಣವನ್ನು ಹೂಡಿಕೆ ಮಾಡಬೇಕಿದೆ.

ಕರ್ನಾಟಕ ಗೃಹ ಮಂಡಳಿ ಚಂದಾಪುರ-ಆನೇಕಲ್ ಮುಖ್ಯ ರಸ್ತೆಯ ಸೂರ್ಯ ನಗರ ಮೊದಲ ಹಂತದಲ್ಲಿರುವ ಫ್ಲಾಟ್‌ಗಳನ್ನು ಮಾರಾಟ ಮಾಡುತ್ತಿದೆ. 2 ಬಿಹೆಚ್‌ಕೆ ಮನೆಗಳಿಗೆ ಕನಿಷ್ಠ 88 ಲಕ್ಷ ರೂ. ದರವನ್ನು ನಿಗದಿ ಮಾಡಿದೆ.

flat-sale

ನಾಲ್ಕು ವರ್ಷದ ಹಿಂದೆ ಇದೇ ಮಾದರಿ ಯೋಜನೆಗೆ ನಿಗದಿ ಮಾಡಿದ್ದ ದರಕ್ಕಿಂತ ಇದು 4 ಪಟ್ಟು ಜಾಸ್ತಿ ಎಂದು ಜನರು ಆರೋಪಿಸುತ್ತಿದ್ದಾರೆ. ಸಾಮಾನ್ಯ ಜನರು ಮನೆಗಳನ್ನು ಖರೀದಿ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ದರಗಳ ಮಾಹಿತಿ: ಕಳೆದ ವಾರ ಕರ್ನಾಟಕ ಗೃಹ ಮಂಡಳಿ 90 ಫ್ಲಾಟ್‌ಗಳ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿತ್ತು. ಆದರೆ ಈಗ ನಿರ್ಮಾಣ ಮಾಡಿರುವ ಯೋಜನೆಗೆ ಅಧಿಕ ದರವನ್ನು ನಿಗದಿ ಮಾಡಲಾಗಿದೆ. ಇದರಿಂದಾಗಿ ಜನರಿಗೆ ತೊಂದರೆಯಾಗಿದೆ. ಖಾಸಗಿ ಬಿಲ್ಡರ್‌ಗಳಿಗೆ ಪೈಪೋಟಿ ನೀಡಲು ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

1340 ಚ. ಮೀ. ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ 2 ಬಿಹೆಚ್‌ಕೆ ಫ್ಲಾಟ್‌ಗೆ 88 ಲಕ್ಷ ರೂ., 2,200 ಚ. ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿರುವ 3 ಬಿಹೆಚ್‌ಕೆ ಫ್ಲಾಟ್‌ಗೆ 1.6 ಕೋಟಿ ರೂ. ದರ ನಿಗದಿ ಮಾಡಲಾಗಿದೆ. ಈ ಫ್ಲಾಟ್‌ಗಳು ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ 5 ಕಿ. ಮೀ. ದರದಲ್ಲಿದೆ.

ಈ ಪ್ರದೇಶದಲ್ಲಿ ಭೂಮಿಯ ಬೆಲೆ ಅಧಿಕವಾಗಿದ್ದು, ಫ್ಲಾಟ್‌ಗಳ ದರಗಳು ಏರಿಕೆ ಆಗಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಖಾಸಗಿ ಬಿಲ್ಡರ್‌ಗಳು ಇದೇ ಮಾದರಿ ಯೋಜನೆಯ 2 ಬಿಹೆಚ್‌ಕೆಗೆ 1.5 ಕೋಟಿ ರೂ. ದರ ಹೇಳುತ್ತಿದ್ದಾರೆ. ಗೃಹ ಮಂಡಳಿಯ ದರದಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳು ಸೇರಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿ ಈ ಹಿಂದೆ ಸೂರ್ಯ ನಗರದಲ್ಲಿ 2 ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಿತ್ತು. 2007ರಲ್ಲಿ 1573 ಫ್ಲಾಟ್‌ ನಿರ್ಮಾಣ ಮಾಡಲಾಗಿತ್ತು. 2021ರಲ್ಲಿ 384 ಫ್ಲಾಟ್‌ ನಿರ್ಮಿಸಿತ್ತು. 4 ವರ್ಷದ ಹಿಂದೆ 2 ಬಿಹೆಚ್‌ಕೆ ಫ್ಲಾಟ್‌ಗೆ 30 ಲಕ್ಷ, 3 ಬಿಹೆಚ್‌ಕೆ ಫ್ಲಾಟ್‌ಗೆ 47 ಲಕ್ಷ ರೂ. ದರವನ್ನು ನಿಗದಿ ಮಾಡಲಾಗಿತ್ತು. 2021ರಲ್ಲಿ ಯಾವುದೇ ದರವನ್ನು ಏರಿಕೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಗೃಹ ಮಂಡಳಿ ಫ್ಲಾಟ್‌ಗಳ ದರ ಏರಿಕೆ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ಗೃಹ ಮಂಡಳಿ ದರಗಳನ್ನು ಇಳಿಕೆ ಮಾಡುವ ಕುರಿತು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+