ಕನ್ನಡ ಕಲಿಸದ ಬೆಂಗಳೂರಿನ ಶಾಲೆಗಳಿಗೆ ದಂಡ
Recommended Video

ಬೆಂಗಳೂರು, ಜೂನ್ 14: ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸದ ಬೆಂಗಳೂರು ನಗರ ವ್ಯಾಪ್ತಿ ಶಾಲೆಗಳಿಗೆ ದಂಡ ವಿಧಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ವರ್ಷದಿಂದ ಜಾರಿಗೊಂಡ ಕನ್ನಡ ಭಾಷಾ ಕಲಿಕೆ ಅಧಿನಿಯಮ-2015ರ ಪ್ರಕಾರ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು. ಆದರೆ ಈ ನಿಯಮದ ಪ್ರಕಾರ ಕನ್ನಡವನ್ನು ಬೋಧಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹೀಗಾಗಿ ಮೊದಲ ಹಂತದಲ್ಲಿ ಭಾಷಾ ಅಧಿನಿಯಮಾನುಷ್ಠಾನಗೊಳಿಸದ ಶಾಲೆಗಳಿಗೆ ದಂಡ ವಿಧಿಸುವಂತೆ ಹಾಗೂ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಶಾಲೆಯ ಅನುಮತಿ ರದ್ದುಗೊಳಿಸಲು ಶಿಫಾರಸು ಮಾಡುವಂತೆ ಸೂಚಿಸಲಾಯಿತು.

ರಾಜ್ಯದಲ್ಲಿ ಕನ್ನಡ ಕಲಿಕೆಗೆ ಒತ್ತು ನೀಡಲು ಸಿದ್ದರಾಮಯ್ಯ ಸರ್ಕಾರ ಭಾಷಾ ಅಧಿನಿಯಮ ಜಾರಿಗೊಳಿಸಿತ್ತು. 2017ರ ಜುಲೈನಲ್ಲಿ ಜಾರಿಗೊಂಡ ನಿಯಮದ ಪ್ರಕಾರ 2017-18ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ಹಾಗೂ 2018-19ನೇ ಸಾಲಿನಲ್ಲಿ ಒಂದು ಮತ್ತು ಡೆರನೇ ತರಗತಿಗೆ ಹೀಗೆ 2026ರ ವೇಳೆಗೆ 10ನೇ ತರಗತಿವರೆಗೆ ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು.
ಬೆಂಗಳೂರು ನಗರ, ದಕ್ಷಿಣ, ಗ್ರಾಮಾಂತರ ಭಾಗದ ಖಾಸಗಿ, ಅನುದಾನ, ಅನುದಾನ ರಹಿತ ಶಾಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು












Click it and Unblock the Notifications