KCET 2023 Exam Dates : ಸಿಇಟಿ ಪ್ರವೇಶ ಪರೀಕ್ಷೆಯ ದಿನಾಂಕ ಪ್ರಕಟ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಈ ಪರೀಕ್ಷೆಯು ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಡೆಯುತ್ತದೆ. ಸುಮಾರು 198 ಕಾಲೇಜುಗಳು ಕೆ-ಸೆಟ್ ಅಂಕಗಳನ್ನು ಪರಿಗಣಿಸುತ್ತವೆ.
ಬೆಂಗಳೂರು, ಮಾರ್ಚ್. 01: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಕೆ- ಸೆಟ್ 2023 ಪರೀಕ್ಷೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಕೆ ಸೆಟ್ ಅಥವಾ ಯುಜಿ ಸಿಇಟಿ 2023 ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಇನ್ನೂ ಕೆ-ಸೆಟ್ 2023ರ ಅಧಿಕೃತ ಅಧಿಸೂಚನೆಗಾಗಿ ಕಾಯುತ್ತಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.kea.kar.nic.in ಮೂಲಕ ನೋಂದಾಯಿಸಿಕೊಳ್ಳಬಹುದು.
*ಕೆ ಸೆಟ್ ಪರೀಕ್ಷೆಯ ದಿನಾಂಕ*
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ-ಸೆಟ್ 2023 ಪರೀಕ್ಷೆಯನ್ನು ಮೇ 20 ಮತ್ತು 21 ರಂದು ನಡೆಸಲಿದೆ. ಕನ್ನಡ ಭಾಷಾ ಪರೀಕ್ಷೆಯು ಮೇ 22, 2023 ರಂದು ನಡೆಯಲಿದೆ. KCET 2023 ಪರೀಕ್ಷೆಯು ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ.

*ಕೆ-ಸೆಟ್ ಪರೀಕ್ಷೆಯ ಅರ್ಜಿ ನಮೂನೆ*
ಕೆ- ಸೆಟ್ 2023 ನೋಂದಣಿ ದಿನಾಂಕಗಳನ್ನು ಸದ್ಯಕ್ಕೆ ಪ್ರಕಟಿಸಲಾಗಿಲ್ಲ. ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಭ್ಯರ್ಥಿಗಳು ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಕೆಇಎ ಕರ್ನಾಟಕ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು.
ಈ ಪರೀಕ್ಷೆಯು ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಡೆಯುತ್ತದೆ. ಸುಮಾರು 198 ಕಾಲೇಜುಗಳು ಕೆ-ಸೆಟ್ ಅಂಕಗಳನ್ನು ಪರಿಗಣಿಸುತ್ತವೆ. ಕೆ-ಸೆಟ್ 2023 ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಡ್ಡಾಯ ವಿಷಯಗಳೊಂದಿಗೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೆ-ಸೆಟ್ 2023 ಅರ್ಜಿ ಶುಲ್ಕ 500 ರೂಪಾಯಿಯಾಗಿದೆ.

2022 ರಲ್ಲಿ, ಕೆಸಿಇಟಿ ಜೂನ್ 16 ರಿಂದ 18 ರ ನಡುವೆ ನಡೆದಿತ್ತು. ಒಟ್ಟು 2,16,559 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು, ಅದರಲ್ಲಿ 2,10,829 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2023 ರಲ್ಲಿ, 2.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.











Click it and Unblock the Notifications