ಬೆಂಗಳೂರಿನಲ್ಲಿ ಮತದಾನ ಹೆಚ್ಚಿಸಲು ಬಿಬಿಎಂಪಿ ಮಾಡಿದ ಪ್ಲಾನ್ ಏನು ಗೊತ್ತಾ?, ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್, 26: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಹಲವೆಡೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಅದರಲ್ಲೂ ಸಮೀಕ್ಷೇಗಳ ಪ್ರಕಾರ ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2018ರಲ್ಲಿ ಕೇವಲ 54%ರಷ್ಟು ಮತದಾನ ಆಗಿದ್ದು, ಇನ್ನು 46% ಜನ ವೋಟ್ ಹಾಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಬಾರಿ ಮತದಾನ ಹೆಚ್ಚಿಸಲು ಬಿಬಿಎಂಪಿ ಬಿಗ್ ಪ್ಲಾನ್ ಮಾಡಿದೆ.
ಮೊದಲೇ ಟ್ರಾಫಿಕ್ ಜಂಜಾಟದಿಂದ ಬೇಸತ್ತ ಬೆಂಗಳೂರಿನ ಹಲವು ಪ್ರದೇಶಗಳ ಜನರಿಗೆ ಯಾಕೆ ನೀವು ವೋಟ್ ಹಾಕಿಲ್ಲ ಅಂತಾ ಕೇಳಿದರೆ, ಅವರು ಪಾರ್ಕಿಂಗ್ ಸಿಗುವುದಿಲ್ಲ, ಅಲ್ಲಿ ತುಂಬಾ ಕ್ಯೂ ಇರುತ್ತದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಅಲ್ಲದೆ ಬಿರು ಬಿಸಿಲಿನಲ್ಲಿ ಅರದಿಯಲ್ಲಿ ನಿಂತುಕೊಳ್ಳಲು ಆಗುವುದಿಲ್ಲ ಅನ್ನುವ ಉದಾಹರಣೆಗೆಗಳನ್ನು ನೀಡುತ್ತಿದ್ದರು. ಆದ್ದರಿಂದ ಬಿಬಿಎಂಪಿ ಇದೀಗ ಹೊಸ ರಿಯಲ್ ಟೈಮ್ ಆ್ಯಪ್ ಅನ್ನು ಜಾರಿಗೆ ತರಲು ಮುಂದಾಗಿದೆ.

ಈ ಆಪ್‌ನ ಡ್ರೈ ರನ್ ಈಗಾಗಲೇ ಆಗಿದ್ದು, ತರಬೇತಿ ನೀಡುವುದು ಮಾತ್ರ ಬಾಕಿ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ರಿಯಲ್ ಟೈಮ್ ಆಪ್‌ನ ಉಪಯೋಗಗಳು
1. ಪಾರ್ಕಿಂಗ್ ವ್ಯವಸ್ಥೆಯನ್ನು ತಿಳಿದುಕೊಳ್ಳಬಹುದಾಗಿದೆ.
2. ರಿಯಲ್ ಟೈಮ್ ನೋಡಿ ಮತದಾನಕ್ಕೆ ಬರಬಹುದಾಗಿದೆ.
3. ಮತಗಟ್ಟೆಯ ಪಾರ್ಕಿಂಗ್ ಕುರಿತು ಮಾಹಿತಿಯನ್ನು ತಿಳಿಯಬಹುದಾಗಿದೆ
4. ಮತದಾರರು ರಿಯಲ್ ಟೈಮ್ ನೋಡಿ ಮತದಾನಕ್ಕೆ ಹೋಗಬಹುದಾಗಿದೆ.
5. ಕ್ಯೂ ಎಷ್ಟಿದೆ ಅಂತಲೂ ವಿಡಿಯೋದಲ್ಲಿ ನೋಡಬಹುದಾಗಿದೆ.
ಒಟ್ಟಿನಲ್ಲಿ ಮತದಾರರು ಈ ಆಪ್‌ನಿಂದಲಾದರೂ ಮತದಾರರು ಎಚ್ಚೆತ್ತುಕೊಂಡು 2023ನೇ ಸಾಲಿನಲ್ಲಿ ಅಂದರೆ ಮೆ 10ರಂದು ನಡೆಯುವ ಚುನವಾಣೆಗೆ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡಲಿದ್ದಾರೆಯಾ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications