ಖಾಸಗಿ ಜಾಹೀರಾತುಗಳಿಗೆ ಸರ್ಕಾರಿ ಶಾಲಾ ಕಾಂಪೌಂಡ್ ಗಳು ಲಭ್ಯ!
ಬೆಂಗಳೂರು, ಫೆಬ್ರವರಿ 01 : ಸರ್ಕಾರಿ ಶಾಲಾ ಕಾಂಪೌಂಡ್ ಗಳನ್ನು ಖಾಸಗಿ ಜಾಹೀರಾತಿಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಜಾಹಿರಾತಿನಿಂದ ಬರುವ ಆದಾಯವನ್ನು ಶೈಕ್ಷಣಿಕ ಮೂಲಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ವ್ಯಯಿಸಲು ನಿರ್ಧರಿಸಿದೆ.
ಜಾಹೀರಾತು ಅಳವಡಿಸುವವರು ಆಯಾ ಶಾಲೆಗಳಿಗೆ ಬಣ್ಣ ಬಳಿದು ಅದನ್ನು ನಿರ್ವಹಿಸಬೇಕು. ಕಾಂಪೌಂಡ್ ಇಲ್ಲದಿದ್ದರೆ ನಿರ್ಮಿಸಿ ಜಾಹಿರಾತು ಅಳವಡಿಸಬಹುದು. ಮತ್ತೆ ಕೆಲವೆಡೆ ಜಾಹೀರಾತಿಗೆ ಶುಲ್ಕ ವಿಧಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಸರ್ಕಾರಿ ಶಾಲೆಗಳನ್ನು ಬಲವರ್ದನೆಗೊಳಿಸಿ, ಮುಂದಿನ ಪೀಳಿಗೆ ನಾಗರಿಕರನ್ನು ಸೃಜಿಸುವ ಕಾರ್ಯಾಗಾರದ ಬಳಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ಸರ್ಕಾರಿ ಶಾಲೆಗಳ ಗುಣಮಟ್ಟ ಸಬಲೀಕರಣಕ್ಕೆ ಸಿಎಸ್ ಆರ್ ನಿಧಿ ಬಳಸಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.

ಯೋಜನಾ ನಿರ್ವಹಣೆಗೆ ಅಪಸ್ವರ: ಸಿಎಸ್ ಆರ್ ನಿಧಿ ಬಳಕೆ ಸಂಬಂಧ ಉದ್ಯಮಿಗಳ ಜತೆ ಸಂಪರ್ಕ ಸಾಧಿಸಲು ಯೋಜನಾ ನಿರ್ವಾಹಕ ಘಟಕ ತೆರೆಯಲಾಗಿದ್ದು,ಇದಕ್ಕೆ ಸಭೆಯಲ್ಲಿ ಅಪಸ್ವರ ವ್ಯಕ್ತವಾಗಿದೆ. ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಮಾತನಾಡಿ, ಖಾಸಗಿ ವ್ಯಕ್ತಿಗಳಿಗೆ ಈ ಯೋಜನೆ ನಿರ್ವಹಣೆ ವಹಿಸುವುದು ಎಷ್ಟು ಸರಿ, ದೆಹಲಿ ಮೂಲದವರಿಗೆ ರಾಜ್ಯದ ಶಿಕ್ಷಣದ ಸ್ಥಿತಿಗತಿ ಏನು ತಿಳಿದಿದೆ. ಎಂದು ಪ್ರಶ್ನಿಸಿದರು.












Click it and Unblock the Notifications