Karnataka Railways: ಜನವರಿ 01 ರಿಂದ ಈ ವಿಶೇಷ ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ

ಹುಬ್ಬಳ್ಳಿ, ನವೆಂಬರ್ 28: ಹೊಸ ವರ್ಷಕ್ಕೆ ರೈಲ್ವೆ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗಲಿವೆ. 2025 ರ ಜನವರಿ 1ರಿಂದ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆ ತನ್ನ ಒಡೆತನದ 10 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಅಂದರೆ ಹೊಸ ವರ್ಷದಿಂದ 10 ಪ್ಯಾಸೆಂಜರ್ ವಿಶೇಷ ರೈಲುಗಳಿಗೆ ಸಾಮಾನ್ಯ ಮರ ಸಂಖ್ಯೆ ಹೊಂದಿರುವ ಮೂಲಕ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Karnataka Railways Announces Changes to Passenger Train Numbers from January 2025

ಯಾವೆಲ್ಲ ರೈಲುಗಳ ಸಂಖ್ಯೆ ಬದಲಾಗಲಿದೆ: ಸಂಖ್ಯೆ ವಿವರ

* ಗುಂತಕಲ್-ಹಿಂದೂಪುರ-ಗುಂತಕಲ್ ರೈಲು ಸಂಖ್ಯೆ 07693/07694 ಇದೀಗ 77213/77214 ಎಂದು ಮರುಸಂಖ್ಯೆ ನೀಡಲಾಗಿದೆ.

* ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ರೈಲು ಸಂಖ್ಯೆ 07657/07658 ಈಗ 57401/57402 ಎಂದು ಮರುಸಂಖ್ಯೆ ನೀಡಲಾಗಿದೆ.

3. ತಿರುಪತಿ-ಕದಿದೇವರಪಲ್ಲಿ-ತಿರುಪತಿ ರೈಲು ಸಂಖ್ಯೆ 07589/07590 ಈಗ 57405/57406 ಎಂದು ಮರುಸಂಖ್ಯೆ ನೀಡಲಾಗಿದೆ.

4. ಸಂಖ್ಯೆ 07585/07586 ಹೊಂದಿದ್ದ ಚಿಕ್ಕಜಾಜೂರು-ಗುಂತಕಲ್-ಚಿಕ್ಕಜಾಜೂರು ರೈಲಿಗೆ ಇದೀಗ 57416/57415 ಮರು ಸಂಖ್ಯೆ ನೀಡಲಾಗಿದೆ..

5. ವಿಜಯಪುರ-ರಾಯಚೂರು-ವಿಜಯಪುರ ರೈಲು ಸಂಖ್ಯೆ 07663/07664 ಈಗ 57662/57661 ಎಂದು ಮರುಸಂಖ್ಯೆ ಕೊಡಲಾಗಿದೆ.

ರೈಲ್ವೆ ಸಾರಿಗೆ ಬಳಸುವ ಪ್ರಯಾಣಿಕರು ಹೊಸ ವರ್ಷದಿಂದ ಈ ಮಾರ್ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.

ಈ ರೈಲುಗಳ ಸಂಚಾರ ಸಮಯ ಬದಲು

ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ತೆರಳುವ ಬೆಂಗಳೂರು-ದಾನಪುರ ಎಕ್ಸ್‌ಪ್ರೆಸ್‌ ರೈಲಿನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಬೆಂಗಳೂರು-ದಾನಪುರ ಎಕ್ಸ್‌ಪ್ರೆಸ್‌ ರೈಲು ನವೆಂಬರ್ 29ರ ಶುಕ್ರವಾರ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಈ ಮೊದಲಿಗೆ ನವೆಂಬರ್ 28ರಂದು ರಾತ್ರಿ 11.50ಕ್ಕೆ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ಆ ರೈಲಿನ ಸಮಯ ಬದಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ರೀತಿ ಬೆಂಗಳೂರು-ಹಾವ್ರಾ ಎಕ್ಸ್‌ಪ್ರೆಸ್‌ ರೈಲು ಎಸ್‌ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಬದಲಾದ ಸಮಯದಲ್ಲಿ ನವೆಂಬರ್ 28ರಂದು ರಾತ್ರಿ 12 ಗಂಟೆಗೆ ಹೊರಡಲಿದೆ. ಈ ಮೊದಲು ಇದನ್ನು ಬೆಳಗ್ಗೆ 10.35ಕ್ಕೆ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+