Jan Ki Baat Pre Poll Survey: ಸಮಗ್ರ ಬೆಂಗಳೂರಿನ 32 ಸ್ಥಾನ ಪೈಕಿ ಬಿಜೆಪಿಗೇ ಬಹುಪಾಲು, ಕಾಂಗ್ರೆಸ್‌-ಜೆಡಿಎಸ್‌ಗೆ ಎಷ್ಟು?

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ ಇನ್ನೇನು ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಲಿವೆ, ಯಾವ ಪ್ರದೇಶ ಯಾರ ಕೈವಶವಾಗಲಿದೆ ಎಂದು ವಿವಿಧ ಸಂಸ್ಥೆಗಳಿಂದ ಸಮೀಕ್ಷೆಗಳು ನಡೆದಿವೆ. ಇದೀಗ ಕನ್ನಡ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಜನ್ ಕಿ ಬಾತ್ ಸಮೀಕ್ಷೆ ಮಹತ್ವದ ಅಂಶಗಳು ಹೊರ ಬಿದ್ದಿವೆ.

ಬೆಂಗಳೂರು ನಗರ ಜಿಲ್ಲೆ (28) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ (04) ಸೇರಿ ಸಮಗ್ರ ಬೆಂಗಳೂರಿನ ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಸೀಟುಗಳ ಮೇಲೆ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕಣ್ಣಿಟ್ಟಿವೆ. ಈ ಕ್ಷೇತ್ರಗಳ ಅಭ್ಯರ್ಥಿಗಳು ಗುರುವಾರದಿಂದಲೇ ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ.

Karnataka Jan Ki Baat Pre Poll Survey: 15 Seats Won For BJP Of 32 Seats Of Bengaluru

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಬೆಂಗಳೂರಿನ ಒಟ್ಟು 32 ಸೀಟುಗಳಲ್ಲಿ ಯಾವ ಪಕ್ಷ ಅಧಿಪತ್ಯ ಸಾಧಿಸುತ್ತದೆ ಎಂಬುದಕ್ಕೆ ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಉತ್ತರ ಸಿಕ್ಕಿದೆ. ಬೆಂಗಳೂರಿನಲ್ಲಿ ಕಳೆದ 2018ರ ಚುನಾವಣೆಯಲ್ಲಿ 11 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 15 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇತ್ತ ಕಳೆದ ಚುನಾವಣೆಯಲ್ಲಿ 17 ಸೀಟು ಹೊಂದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ 3 ಸ್ಥಾನ ಕಳೆದುಕೊಂಡು 14 ಸ್ಥಾನಕ್ಕೆ ತೃಪ್ತಿಪಡುವ ಸಾಧ್ಯತೆ ಇದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಹಿಂದೆ ಗಳಿಸಿದ್ದ 4 ಕ್ಷೇತ್ರದಿಂದ ಈ ಸಲ 3ಕ್ಕೆ ಇಳಿಯಲಿದೆ ಎಂದು ಸಮಿಕ್ಷೆಯು ಹೇಳುತ್ತದೆ.

ಸಮಗ್ರ ಬೆಂಗಳೂರಿನ 32 ಕ್ಷೇತ್ರಗಳು ಇವು

ಸಮಗ್ರ ಬೆಂಗಳೂರಿನಲ್ಲಿ ಬಿಬಿಎಂಪಿ ಕೇಂದ್ರದ ವ್ಯಾಪ್ತಿಯಲ್ಲಿ ಚಾಮರಾಜಪೇಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿನಗರ, ಶಿವಾಜಿನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇನ್ನೂ ಬಿಬಿಎಂಪಿ ಉತ್ತರದಲ್ಲಿ ಸಿ.ವಿ.ರಾಮನ್‌ ನಗರ, ಹಬ್ಬಾಳ, ಕೆ.ಆರ್‌.ಪುರ, ಮಹಾಲಕ್ಷ್ಮಿ ಬಡಾವಣೆ, ಮಲ್ಲೇಶ್ವರಂ, ಪುಲಕೇಶಿನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳು ಇವೆ.

Karnataka Jan Ki Baat Pre Poll Survey: 15 Seats Won For BJP Of 32 Seats Of Bengaluru

ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಟಿಎಂ ಬಡಾವಣೆ, ಬಸವನಗುಡಿ, ಗೋವಿಂದರಾಜನಗರ, ಜಯನಗರ, ವಿಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಚಿಕ್ಕಪೇಟೆ ಕ್ಷೇತ್ರಗಳು ಆವರಿಸಿವೆ. ಅಂತೆಯೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆನೇಕಲ್, ಬೆಂಗಳೂರು ಉತ್ತರ, ಬ್ಯಾಟರಾಯನಪುರ, ದಾಸರಹಳ್ಳಿ, ಮಹಾದೇವಪುರ, ಯಲಹಂಕ ಹಾಗೂ ಯಶವಂತಪುರ ಬರುತ್ತವೆ. ಕೊನೆಯದಾಗಿ ಬೆಂಗಳೂರು ಗ್ರಾಮಾಂತರದಲ್ಲಿ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳು ಇವೆ.

ರಾಜ್ಯದ ಅತ್ಯಧಿಕ ವಿಧಾನಸಭಾ ಕ್ಷೇತ್ರಗಳು ಈ ಸಮಗ್ರ ಬೆಂಗಳೂರಿನಲ್ಲಿವೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಈ ಭಾಗದಲ್ಲೇ ಪ್ರಾಬಲ್ಯ ಹೊಂದಲು ಹೆಚ್ಚು ಆಸಕ್ತಿ ವಹಿಸುತ್ತವೆ. ರಾಜ್ಯಮಟ್ಟದಲ್ಲಿ ನೋಡುವುದಾದರೆ ಈ ಬಾರಿಯು ಅಂತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+