Flipkart; 1,100 ಕೋಟಿ ತೆರಿಗೆ ಪ್ರಕರಣ, ಫ್ಲಿಪ್‌ಕಾರ್ಟ್‌ಗೆ ಮಧ್ಯಂತರ ತಡೆ ನೀಡಿದ ಕರ್ನಾಟಕ ಹೈಕೋರ್ಟ್

2016 - 17 ಮತ್ತು 2018 - 19 ಮೌಲ್ಯಮಾಪನ ವರ್ಷಗಳಿಗೆ ಫ್ಲಿಪ್‌ಕಾರ್ಟ್ ಇಂಡಿಯಾದ ವಿರುದ್ಧ 1100 ಕೋಟಿ ರೂಪಾಯಿ ತೆರಿಗೆ ಬೇಡಿಕೆಯಿತ್ತು. ಈ ಹಣವನ್ನು 4 ದಿನಗಳಲ್ಲಿ ಠೇವಣಿ ಮಾಡಬೇಕಾಗಿತ್ತು.

ಬೆಂಗಳೂರು, ಫೆಬ್ರವರಿ. 08: 1,100 ಕೋಟಿ ರೂಪಾಯಿ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲಿಪ್‌ಕಾರ್ಟ್‌ಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಹಾಕಲಾಗಿದ್ದು, ಅಲ್ಲಿಯ ತನಕ ಕಂಪನಿಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.

2016 - 17 ಮತ್ತು 2018 - 19 ಮೌಲ್ಯಮಾಪನ ವರ್ಷಗಳಿಗೆ ಫ್ಲಿಪ್‌ಕಾರ್ಟ್ ಇಂಡಿಯಾದ ವಿರುದ್ಧ 1100 ಕೋಟಿ ರೂಪಾಯಿ ತೆರಿಗೆ ಬೇಡಿಕೆಯಿತ್ತು. ಈ ಹಣವನ್ನು 4 ದಿನಗಳಲ್ಲಿ ಠೇವಣಿ ಮಾಡಬೇಕಾಗಿತ್ತು.

Karnataka High Court grants interim stay to Flipkart in Rs 1,100 crore tax demand case

ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಿ ಮೇಲ್ಮನವಿ ಆದೇಶಗಳನ್ನು ರವಾನಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್ ವಾದಿಸಿದೆ. ಇ-ಕಾಮರ್ಸ್ ಚಿಲ್ಲರೆ ವ್ಯಾಪಾರಿಯು ಸಿಐಟಿ(ಎ) ನೀಡಿದ ಬೇಡಿಕೆಯ ನೋಟಿಸ್‌ಗಳ ವಿರುದ್ಧ ರಿಟ್ ಅರ್ಜಿಗಳಿಗೆ ಆದ್ಯತೆ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

2015-16ರ ಮೌಲ್ಯಮಾಪನ ವರ್ಷಕ್ಕೆ ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ತನ್ನ ಪರವಾಗಿ ಮಾರ್ಕೆಟಿಂಗ್ ಸಮಸ್ಯೆಯನ್ನು ಈಗಾಗಲೇ ನಿರ್ಧರಿಸಿದೆ ಎಂದು ಫ್ಲಿಪ್‌ಕಾರ್ಟ್ ವಾದಿಸಿದೆ.

ಇದರ ಜೊತೆಗೆ ಬಯೋಕಾನ್‌ನಲ್ಲಿನ ಸಮನ್ವಯ ಪೀಠದ ತೀರ್ಪು, ಹಾಗೆಯೇ ಕ್ರಮವಾಗಿ ಪಿವಿಪಿ ವೆಂಚರ್ಸ್ ಮತ್ತು ಎನ್‌ಡಿಟಿವಿಯ ಕುರಿತ ಮದ್ರಾಸ್ ಹೈಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳು ತನ್ನ ಪರವಾಗಿವೆ ಎಂದು ವಾದಿಸಿದೆ.

Karnataka High Court grants interim stay to Flipkart in Rs 1,100 crore tax demand case

ಇನ್ನು, ತೆರಿಗೆ ಬೇಡಿಕೆಯನ್ನು ಠೇವಣಿ ಮಾಡಲು ಯಾವುದೇ ಸಮಂಜಸವಾದ ಸಮಯವನ್ನು ಒದಗಿಸಲಾಗಿಲ್ಲ ಎಂಬುದು ಕಂಪನಿಯ ಆರೋಪವಾಗಿದೆ.

ವರದಿಗಳ ಪ್ರಕಾರ, ಫ್ಲಿಪ್‌ಕಾರ್ಟ್‌ನ 2021-22 ಹಣಕಾಸು ವರ್ಷದಲ್ಲಿ ಅದರ ವ್ಯವಹಾರದಿಂದ ವ್ಯಾಪಾರ ಘಟಕವಾದ ಫ್ಲಿಪ್‌ಕಾರ್ಟ್ ಇಂಡಿಯಾ ಮತ್ತು ಬಿಟುಸಿ ಇ-ಕಾಮರ್ಸ್ ಯುನಿಟ್ ಫ್ಲಿಪ್‌ಕಾರ್ಟ್ ಇಂಟರ್ನೆಟ್‌ನಿಂದ 7,800 ಕೋಟಿ ರೂಪಾಯಿ ನಷ್ಟವಾಗಿದೆ. 2020-21 ರ ಹಣಕಾಸು ವರ್ಷದಲ್ಲಿ ಎರಡೂ ಘಟಕಗಳ ಒಟ್ಟು ನಷ್ಟವು 5,352 ಕೋಟಿ ರೂಪಾಯಿಗಳಷ್ಟಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಕಂಪನಿಯು ರಿಟ್ ಅರ್ಜಿ ಸಲ್ಲಿಸಿದ ವಾರಗಳ ನಂತರ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+