Sky Deck: ಬೆಂಗಳೂರಿನಲ್ಲಿ ದೇಶದ ಅತೀ ಎತ್ತರದ 'ವೀಕ್ಷಣಾ ಗೋಪುರ' ನಿರ್ಮಾಣ ಯೋಜನೆ, ಏನಿದು? ತಿಳಿಯಿರಿ
ಬೆಂಗಳೂರು, ಡಿಸೆಂಬರ್ 27: ಚೀನಾದ ಶಾಂಘೈನಲ್ಲಿ ನಿರ್ಮಿಸಿರುವ 'ಶಾಂಘೈ ಟವರ್' ಮಾದರಿಯಲ್ಲಿ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೇಶದ ಅತೀ ಎತ್ತರದ 'ವೀಕ್ಷಣಾ ಗೋಪುರ' (ಸ್ಕೈಡಕ್) ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.
ಹೌದು, ಬೆಂಗಳೂರಿನ ಕಬ್ಬನ್ ಉದ್ಯಾನ ಇಲ್ಲವೇ ಯಶವಂತಪುರ ವ್ಯಾಪ್ತಿಯಲ್ಲಿ ಇಂತದ್ದೊಂದು ಯೋಜನೆ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಎಲ್ಲವು ಅಂದುಕೊಂಡಂತೆ ಆದರೆ ಆಗಸದೆತ್ತರಕ್ಕೆ ನಿಂತು ನೀವು ರಾಜಧಾನಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ಡಿಸೆಂಬರ್ 26 ರಂದು ಬಿಗ್ ಬ್ಯಾನನ್ ಗ್ರೂಪ್ ಮುಖ್ಯಸ್ಥರು ಗೋಪುರ ನಿರ್ಮಾಣ ಕುರಿತು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಪಾಲ್ಗೊಂಡು ಯೋಜನೆ ಕುರಿತು ಮಾಹಿತಿ ಪಡೆದರು.
ಸ್ಕೈಡೆಕ್ ಎತ್ತರ 360 ಮೀಟರ್
ಶಾಂಘೈ ಟವರ್ ಅನ್ನು ಸ್ಪೂರ್ತಿಯಾಗಿಟ್ಟುಕೊಂಡು ಆಸ್ಟ್ರೀಯಾದ ಕೂಪ್ ಹಿಮ್ಮೆಲ್ಬ ಸಂಸ್ಥೆಯು ಈ 'ಸ್ಕೈ ಡೆಕ್ (ವೀಕ್ಷಣಾ ಗೋಪುರ)' ವಿನ್ಯಾಸವನ್ನು ಸಿದ್ದಪಡಿಸಿದೆ. 10 ಎಕರೆ ಜಾಗದಲ್ಲಿ ಒಟ್ಟು 360 ಮೀಟರ್ ಎತ್ತರದವರೆಗೆ ಈ ವೀಕ್ಷಣಾ ಗೂಪುರವನ್ನು ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ವಿವರಿಸಿದೆ. ಇದರ ಬೆನ್ನಲ್ಲೆ ಗೋಪುರ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.
ಭಾರತದ ಅತೀ ಎತ್ತರದ ವೀಕ್ಷಣಾ ಗೂಪುರ
ಎಲ್ಲವು ಅಂದುಕೊಂಡಂತೆ ಈ ವೀಕ್ಷಣಾ ಗೋಪುರ ಯೋಜನೆ ಸಾಕಾರವಾದರೆ, ಬಾನೆತ್ತರದಲ್ಲಿ ನಿಂತು ಸಾರ್ವಜನಿಕರು ರಾಜಧಾನಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇನ್ನೂ ಚೀನಾದಲ್ಲಿನ ಗೋಪುರ್ ಸುಮಾರು 600 ಮೀಟರ್ ಎತ್ತರದಲ್ಲಿದೆ. ಕರ್ನಾಟಕದ ಗೋಪುರ ಅಷ್ಟು ಎತ್ತರದಲ್ಲಿ ಇರದಿದ್ದರೂ ಸಹ ಭಾರತದ ಮಟ್ಟಿಗೆ ಇದೇ (360 ಮೀಟರ್) ಅತೀ ಎತ್ತರದ ಸ್ಕೈಡೆಕ್ ಆಗಿರಲಿದೆ.

ಯೋಜನೆಯಲ್ಲಿ ಏನೇನಿರಲಿದೆ?
ಸದ್ಯ ಬೆಂಗಳೂರಿನಲ್ಲಿ ಈ ಎರಡು ಪ್ರದೇಶಗಳಲ್ಲಿ ಇದನ್ನು ಎಲ್ಲಿ ನಿರ್ಮಿಸಬೇಕು. ಅದಕ್ಕೆ ಬೇಕಾದ ಮೂಲ ಸೌಲಭ್ಯಗಳು, ವೆಚ್ಚ ಸೇರಿದಂತೆ ಎಲ್ಲವನ್ನು ಅಂದಾಜು ಮಾಡುತ್ತಿದೆ. ಸೂಕ್ತ ಯೋಜನೆ ರೂಪಿಸಲು ಸಜ್ಜಾಗಿದೆ. ಈ ಗೋಪುರವಿರುವ 10 ಎಕರೆ ಜಾಗದಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯಗಳು ಇರಲಿವೆ. ವಾಣಿಜ್ಯ ಸಂಕೀರ್ಣ, ಆಹಾರ ಮಳಿಗೆ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಇರುವಂತೆ ಯೋಜನೆ ರೂಪಿಸಲಾಗುತ್ತಿದೆ.
ತಮಿಳುನಾಡಿನಲ್ಲಿ ಇದೇ ರೀತಿ ಒಂದು ಗೋಪುರವಿದ್ದು, ಅದು 323 ಮೀಟರ್ ಎತ್ತರವಿದೆ. ಗುಜರಾತಿನ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆ 182 ಮೀಟರ್ ಎತ್ತರವಿದೆ. ಇದರ ನಂತರ ಬೆಂಗಳೂರಿನಲ್ಲಿಯೇ ಇಂತದ್ದೊಂದು ಅತೀ ಎತ್ತರ ಗೋಪುರ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತಿದೆ. ಹೀಗಾಗಿಯೇ ಇದು ದೇಶ ಅತೀ ಎತ್ತರ ಗೋಪುವಾಗಲಿದೆ.












Click it and Unblock the Notifications