ಸಿಲಿಕಾನ್ ಸಿಟಿಯಲ್ಲಿ 24/7 ಹೋಟೆಲ್ ಓಪನ್; ರಾಜ್ಯ ಸರ್ಕಾರದ ಹೊಸ ಆದೇಶ

ಬೆಂಗಳೂರು, ಏಪ್ರಿಲ್ 19: ಸಿಲಿಕಾನ್ ಸಿಟಿಯಲ್ಲಿ ಹೋಟೆಲ್ ಊಟವನ್ನೇ ನೆಚ್ಚಿಕೊಂಡವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ರಾತ್ರಿ 9 ರಿಂದ 10 ಗಂಟೆ ವೇಳೆಗೆಲ್ಲಾ ಬಾಗಿಲು ಹಾಕುತ್ತಿದ್ದ ಹೋಟೆಲ್‌ಗಳು ಇನ್ಮುಂದೆ 24/7 ಓಪನ್ ಇರುತ್ತವೆ.

ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್‌ಗಳನ್ನು ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಮಂಗಳವಾರ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಬೆಲೆ ಏರಿಕೆಯಿಂದ ಬೇಸತ್ತಿದ್ದ ಸಿಲಿಕಾನ್ ಸಿಟಿ ಜನರಿಗೆ ರಾತ್ರಿಯಾದರೆ ಊಟ-ತಿಂಡಿಯದ್ದೇ ಚಿಂತೆಯಾಗಿತ್ತು. ಹೋಟೆಲ್ ಊಟವನ್ನೇ ನೆಚ್ಚಿಕೊಂಡಿದ್ದ ಬೆಂಗಳೂರಿನ ಬ್ಯಾಚುಲರ್‌ಗಳಿಗೆ ಅಂತೂ ಊಟಕ್ಕೆ ಇನ್ಮುಂದೆ ಚಿಂತೆ ಇರುವುದಿಲ್ಲ. ಹಾಗಿದ್ದರೆ ರಾಜ್ಯ ಸರ್ಕಾರದ ಹೊಸ ಆದೇಶದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಮುಂದೆ ತಿಳಿಯೋಣ.

Karnataka Govt Gives Nod to Allow Bengaluru Hotels to Serve Food in Night Time

ರಾತ್ರಿ ಪಾಳೆಯಲ್ಲಿ ದುಡಿಯುವವರ ಅನುಕೂಲಕ್ಕೆ ಕ್ರಮ:

ಬೆಂಗಳೂರಿನಲ್ಲಿ ರಾತ್ರಿ ಪಾಳೆಯದಲ್ಲಿ ದುಡಿಯುವ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಅದರ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್, ಐಸ್ ಕ್ರೀಂ ಅಂಗಡಿಗಳು ದಿನದ 24 ಗಂಟೆಗಳ ಕಾಲ ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಈ ಆದೇಶವನ್ನು ಸ್ವಾಗತಿಸಿರುವ ಬೃಹತ್ ಬೆಂಗಳೂರು ನಗರ ಹೋಟೆಲ್ ಸಂಘವು ಪೊಲೀಸರ ಅನುಮತಿಗಾಗಿ ಎದುರು ನೋಡುತ್ತಿದೆ.

Karnataka Govt Gives Nod to Allow Bengaluru Hotels to Serve Food in Night Time

ಪೊಲೀಸರ ಅನುಮತಿ ನಂತರ 24/7 ಓಪನ್:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗಿಂತಲೂ ಮೊದಲು ಬೆಂಗಳೂರಿನಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್ ತೆರೆಯುವುದಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕೊವಿಡ್-19 ಅವಧಿಯಲ್ಲಿ ಈ ನಿಯಮವನ್ನು ನಿರ್ಬಂಧಿಸಲಾಗಿತ್ತು. ಆದರೆ ರಾಜ್ಯದಲ್ಲಿ ಇದೀಗ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆ ಮತ್ತೊಮ್ಮೆ ಹೋಟೆಲ್, ಬೇಕರಿ ಮತ್ತು ಸ್ವೀಟ್ ಸ್ಟಾಲ್ ಗಳನ್ನು 24/7 ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ. ಈ ಸಂಬಂಧ ಮೊದಲೇ ಹೋಟೆಲ್ ಸಂಘವು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿಕೊಂಡು ಪತ್ರ ಬರೆದಿತ್ತು. ಇದೀಗ ಪೊಲೀಸರ ಅನುಮತಿ ನೀಡುವುದನ್ನೇ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+