ಜಗ್ಗೇಶ್ ಸಿನಿಮಾ, ರಿಯಾಲಿಟಿ ಶೋ ನಿರ್ಬಂಧಿಸಿ: ಕಾಂಗ್ರೆಸ್

ಬೆಂಗಳೂರು, ಏಪ್ರಿಲ್ 29: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗ್ಗೇಶ್ ಅವರ ಸಿನಿಮಾ ಹಾಗೂ ರಿಯಾಲಿಟಿ ಶೋ ಪ್ರಸಾರಕ್ಕೆ ನಿರ್ಬಂಧ ಹೇರುವಂತೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ

ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಜಗ್ಗೇಶ್ ಅವರು ಸ್ಪರ್ಧಿಸಿದ್ದಾರೆ. ಜನಪ್ರಿಯ ಚಿತ್ರನಟರಾಗಿದ್ದು, ಅವರ ಚಲನಚಿತ್ರಗಳು ಹಾಗೂ ಅವರು ನಡೆಸಿಕೊಡುವ ರಿಯಾಲಿಟಿ ಶೋಗಳು, ದೂರದರ್ಶನ, ಖಾಸಗಿ ವಾಹಿನಿ, ಸ್ಥಳೀಯ ಕೇಬಲ್ ನೆಟ್‍ವರ್ಕ್‍ಗಳು ಮತ್ತು ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಇವು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿವೆ. ಇವುಗಳನ್ನು ನಿರ್ಬಂಧಿಸಬೇಕಾಗಿ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

Karnataka Elections 2018: Congress urges Election Commission to stop screening of Jaggesh films

ಜಗ್ಗೇಶ್ ಅವರ ಚಲನಚಿತ್ರಗಳು, ನಡೆಸಿಕೊಡುವ ರಿಯಾಲಿಟಿ ಶೋಗಳು ಇತರೆ ಮಾಧ್ಯಮಗಳಲ್ಲಿ ಪ್ರಸಾರವಾಗುವುದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚುನಾವಣಾ ಅವಧಿಯಲ್ಲಿ ಮತದಾರರ ಮೇಲೆ ಇವರ ಪರವಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.

ಹೀಗಾಗಿ, ಇವರು ನಟಿಸಿರುವ ಚಲನಚಿತ್ರಗಳನ್ನು ಹಾಗೂ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕಾಗಿ ಕೋರಿದ್ದಾರೆ. ದೂರು ಸ್ವೀಕರಿಸಿರುವ ಚುನಾವಣೆ ಆಯೋಗವು, ಈ ಬಗ್ಗೆ ಇನ್ನೂ ತನ್ನ ಆದೇಶ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+