ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ದಿನ ಸಿನಿಮಾ, ಶಾಪಿಂಗ್ ಹೋಗುವ ಪ್ಲ್ಯಾನ್ ಇದ್ದರೆ ಮರೆತುಬಿಡಿ!

|
Google Oneindia Kannada News

Recommended Video

Karnataka Elections 2018 : ಮೇ 12ರಂದು ಶಾಪಿಂಗ್, ಸಿನಿಮಾ ಬಂದ್ | Oneindia Kannada

ಬೆಂಗಳೂರು, ಏಪ್ರಿಲ್ 19: ಚುನಾವಣೆ ದಿನ ಹೇಗೂ ರಜೆ ಇದೆ ಸಿನಿಮಾ ನೋಡಿಕೊಂಡು ಸೂತ್ತಾಡಿಕೊಂಡು ಬರೋಣ ಎನ್ನುವ ಪ್ಲ್ಯಾನ್ ಏನಾದರು ಇದ್ದರೆ ಮರೆತುಬಿಡಿ. ಮುಂದಿನ ಐದು ವರ್ಷಕ್ಕೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಮತದಾನ ಮಾಡುವುದನ್ನು ಬಿಟ್ಟು ಶಾಪಿಂಗ್ , ಸಿನಿಮಾ ಎಂದು ಕಾಲ ಕಳೆಯುವವರಿಗೆ ಚುನಾವಣಾ ಆಯೋಗ ಶಾಕ್ ನೀಡಲು ಮುಂದಾಗಿದೆ.

ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!

ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿದಲು ಚುನಾವಣಾ ಆಯೋಗ ಸಾಕಷ್ಟು ಕಸರತ್ತು ಮಾಡುತ್ತಿದೆ. ಅದಕ್ಕಾಗಿಯೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.ಜಾಹಿರಾತು ಮೂಲಕ, ಸೆಲೆಬ್ರಿಟಿಗಳಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಅಲ್ಲದೆ, ಚುನಾವಣಾ ಆಯೋಗದ ಮೂಲಕವೇ ಪ್ರತಿ ಮತದಾರರಿಗೂ ಭಾವಚಿತ್ರವಿರುವ ವೋಟರ್ ಸ್ಲಿಪ್ ನೀಡಲಾಗುತ್ತಿದೆ. ಆದರೂ, ಮತದಾನದ ದಿನ ಮತದಾರರು ಶಾಪಿಂಗ್ ಮತ್ತು ಸಿನಿಮಾ ಎಂದು ಹೋಗುವುದನ್ನು ತಡೆಯಲು ಹೊಸದೊಂದು ಉಪಾಯ ಮಾಡಿದೆ. ಮತದಾನದ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಶಾಪಿಂಗ್ ಮಾಲ್ ಗಳಿಗೆ ಬೀಗ ಹಾಕುವ ಕುರಿತು ಚಿಂತನೆ ನಡೆಸಿದೆ.

karnataka election: EC thinking to close shopping malls on poll day

ಈ ಕುರಿತಂತೆ ಚುನಾವಣಾ ಆಯೋಗ ಮೌಖಿಕವಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಕೇಂದ್ರ ಆಯೋಗ ಅಧಿಕೃತವಾಗಿ ಅನುಮೋದನೆ ನೀಡಿದರೆ ಮೇ.12ರ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಗಳಿಗೆ ಬೀಗ ಹಾಕಲಾಗುತ್ತದೆ.

English summary
Central Election commission has given oral direction to shut down all shopping malls and multiplexes in Bangalore on May 12 of polling day as part increasing polling percentage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X