ಜನರಿಗೆ ಹಂಚಲು ತರಲಾಗಿದ್ದ 12 ಕೋಟಿ ರೂ. ಮೌಲ್ಯದ ಉಚಿತ ವಸ್ತುಗಳು ವಶ; ಚುನಾವಣಾ ಆಯೋಗ

ಬೆಂಗಳೂರು, ಏಪ್ರಿಲ್. 05: ಮಾರ್ಚ್ 29 ರಂದು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ನಂತರ ಜಾರಿ ನಿರ್ದೇಶನಾಲಯದ ಸಂಸ್ಥೆಗಳು ಕರ್ನಾಟಕದಲ್ಲಿ ಸುಮಾರು 70 ಕೋಟಿ ರೂಪಾಯಿ ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

ಈ ವಶಪಡಿಸಿಕೊಂಡಿರುವ ವಸ್ತುಗಳಲ್ಲಿ 22.75 ಕೋಟಿ ನಗದು, 24.45 ಕೋಟಿ ಮೌಲ್ಯದ ಮದ್ಯ ಮತ್ತು 12 ಕೋಟಿ ರೂಪಾಯಿಯ ಉಚಿತ ವಸ್ತುಗಳು ಸೇರಿವೆ ಎಂದು ಬುಧವಾರ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 526 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

Karnataka Election 2023: Freebies Worth Rs 12 Crore Seized

"ನಗದು, ಉಚಿತ ವಸ್ತು, ಮದ್ಯ, ಮಾದಕ ದ್ರವ್ಯ ಇತ್ಯಾದಿಗಳನ್ನು ಒಳಗೊಂಡ ಒಟ್ಟು ವಶಪಡಿಸಿಕೊಂಡ ಮೌಲ್ಯವು 69,36,17,467 ರೂಪಾಯಿ ಆಗಿದೆ" ಎಂದು ಚುನಾವಣಾ ಆಯೋಗ ಹೇಳಿದೆ. ಮಾರ್ಚ್ 9 ರಿಂದ ಮಾರ್ಚ್ 27 ರ ಅವಧಿಯಲ್ಲಿ ವಿಧಾನಸಭಾ ಚುನಾವಣೆಯ ಘೋಷಣೆಗೆ ಮುನ್ನ ಒಟ್ಟು 58 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು.

ಇನ್ನು, ಸಿ ವಿ ರಾಮನ್ ನಗರ ಕ್ಷೇತ್ರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು 1.47 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡರೆ, ಪದ್ಮನಾಭ ನಗರ ಕ್ಷೇತ್ರದಲ್ಲಿ ಆದಾಯ ತೆರಿಗೆ ಇಲಾಖೆ 3.37 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 47,030 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತನ್ನ ಡೈಲಿ ಬುಲೆಟಿನ್‌ನಲ್ಲಿ ಹೇಳಿದೆ.

ಮಂಗಳವಾರ ಒಟ್ಟು 17.36 ಕೋಟಿ ನಗದು, 22.35 ಕೋಟಿ ರೂ. ಮೌಲ್ಯದ 3.28 ಲಕ್ಷ ಲೀಟರ್ ಮದ್ಯ, 42.66 ಲಕ್ಷ ಮೌಲ್ಯದ 82.85 ಕೆಜಿ ಡ್ರಗ್ಸ್, 8.51 ಕೋಟಿ ರೂ. ಮೌಲ್ಯದ 22.691 ಕೆಜಿ ಚಿನ್ನ, 65.19 ಲಕ್ಷ ಮೌಲ್ಯದ 93.563 ಕೆಜಿ ಬೆಳ್ಳಿ ಹಾಗೂ 11 ಕೋಟಿ ರೂಪಾಯಿ ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Karnataka Election 2023: Freebies Worth Rs 12 Crore Seized

ಇತ್ತ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 22 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗಳು 24 ಗಂಟೆಗಳ ಕಾಲ ತಪಾಸಣೆ ನಡೆಸುತ್ತಿದ್ದಾರೆ. ಇಂದು 13ಕೆ.ಜಿ ಗಾಂಜಾ, 624 ಲೀ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 9 ಕೋಟಿ 85 ಲಕ್ಷ ರೂ. ಮೌಲ್ಯದ ವಸ್ತುಗಳು ಸೇರಿದಂತೆ ನಗದನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆಯ ಬೇತೂರು ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 32 ಲಕ್ಷ ರೂಪಾಯಿಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ 224 ಕ್ಷೇತ್ರಗಳಿಗೂ ಒಂದೇ ಬಾರಿ ಮತದಾನ ನಡೆಯಲಿದ್ದು, ಪ್ರಮುಖವಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜಾತ್ಯತೀತ ಜನತಾ ದಳ ನಡುವೆ ಚುನಾವಣಾ ಕದನ ನಡೆಯಲಿದೆ. 224 ವಿಧಾನಸಭಾ ಕ್ಷೇತ್ರಗಳಾದ್ಯಂತ 58, 282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಪ್ರತಿ ಮತಗಟ್ಟೆಗೆ ಸರಾಸರಿ ಮತದಾರರ ಸಂಖ್ಯೆಯನ್ನು 883 ಎಂದು ಚುನಾವಣಾ ಆಯೋಗ ಗುರುತಿಸಿದೆ. ಅರ್ಧದಷ್ಟು ಮತದಾನ ಕೇಂದ್ರಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿರುತ್ತವೆ. ಇದರ ಜೊತೆಗೆ 1320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+