ಬೆಂಗಳೂರಿಗೆ ಬಂದಿರುವುದು ಮೋದಿಯಾ ಇಲ್ಲ ಕೊರೋನಾ ವೈರಸ್ಸಾ? ಪೊಲೀಸರ ಸೂಚನೆ ಬಗ್ಗೆ ಕಾಂಗ್ರೆಸ್ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಶನಿವಾರ ಮತ್ತು ಭಾನುವಾರ ರಾಜಧಾನಿಯಲ್ಲಿ 34 ಕಿಲೋ ಮೀಟರ್ ಭರ್ಜರಿ ರ್‍ಯಾಲಿ ನಡೆಯಲಿದೆ. ಮೋದಿ ರ್‍ಯಾಲಿ ಹಿನ್ನಲೆಯಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಮೋದಿ ರೋಡ್ ಶೋ ನಡೆಯುವ ಇಕ್ಕೆಲಗಳಲ್ಲಿನ ಮನೆ, ಕಟ್ಟಡ, ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ಪೊಲೀಸರು ಕಟ್ಟಡದ ಮೇಲೆ ಹತ್ತದಂತೆ ಸೂಚನೆ ನೀಡಿದ್ದಾರೆ. ರೋಡ್ ಶೋ ಮುಗಿಯುವವರೆಗೂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪೊಲೀಸರ ಈ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 Karnataka Congress lashes out at Modis roadshow in Bengaluru

ಜನರನ್ನು ಮನೆಯಲ್ಲಿ ಬಂಧಿಸಿ ರೋಡ್ ಶೋ ಮಾಡುವ ಅಗತ್ಯವೇನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಜನರಿಗೆ ವಿಧಿಸಿದ ಕಟ್ಟಪ್ಪಣೆಗಳನ್ನು ನೋಡಿದರೆ ಬೆಂಗಳೂರಿಗೆ ಬಂದಿದ್ದು ಕರೋನಾ ವೈರಸ್ಸಾ ಅಥವಾ ಮೋದಿನಾ ಎಂಬ ಅನುಮಾನ ಮೂಡುತ್ತಿದೆ. ಬೆಂಗಳೂರು ನಿವಾಸಿಗಳನ್ನು ಹೌಸ್ ಅರೆಸ್ಟ್ ಮಾಡಿ ಶೋ ಮಾಡುವಂತಾದ್ದೇನಿದೆ ನರೇಂದ್ರ ಮೋದಿಯವೇ? ಜನರಿಗೆ ಕೋವಿಡ್ ಲಾಕ್‌ಡೌನ್‌ಗಿಂತಲೂ ಮಿಗಿಲಾದ ಹಿಂಸೆ ನೀಡಿ ಕರ್ನಾಟಕ ಬಿಜೆಪಿ ಏನು ಸಾಧಿಸುತ್ತದೆ?" ಎಂದು ಪ್ರಶ್ನೆ ಮಾಡಿದೆ.

ದೇಶದ ಕೆಲಸ ಬಿಟ್ಟು ಕರ್ನಾಟಕದಲ್ಲಿ ಠಿಕಾಣಿ

ನರೇಂದ್ರ ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುವವರು, ಜೀವನದಲ್ಲಿ ಒಂದು ದಿನವೂ ರಜೆಯನ್ನು ಪಡೆಯದೆ ನಿರಂತರವಾಗಿ ದೇಶದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು, ಅತ್ಯಂತ ಬ್ಯುಸಿ ಇರುವ ಅವರು, ಈಗ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕಳೆದ ಒಂದು ತಿಂಗಳಿನಿಂದ ಕರ್ತವ್ಯಕ್ಕೆ ರಜೆ ಪಡೆದು ಕರ್ನಾಟಕದಲ್ಲೇ ಠಿಕಾಣಿ ಹೂಡಿರುವುದನ್ನು ನೋಡಿದೆ ಬೇಸರವಾಗುತ್ತದೆ ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ.

ಭಾನುವಾರ ಕೂಡ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ನೀಟ್ ಪರೀಕ್ಷೆ ಇರುವ ಕಾರಣ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ 11.30ರವರೆಗೆ ಮಾತ್ರ ರೋಡ್ ಶೋ ನಡೆಸಲು ಹೈಕೋರ್ಟ್ ಸೂಚನೆ ನೀಡಿದೆ. ಮೋದಿ ರೋಡ್ ಶೋ ರದ್ದು ಮಾಡಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿತ್ತು.

ಮೋದಿ ರೋಡ್ ಶೋ ಹಿನ್ನಲೆಯಲ್ಲಿ ಬೆಂಗಳೂರಿನ 34 ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಬೆಂಗಳೂರು ಪೊಲೀಸರು ನಾಗರೀಕರಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+