Namma metro: 2025ರೊಳಗೆ 44 ಕಿಲೋ ಮೀಟರ್‌ ಮೆಟ್ರೋ ಮಾರ್ಗ ಸೇರ್ಪಡೆ

ಬೆಂಗಳೂರು, ಫೆಬ್ರವರಿ, 16: ಸಿಎಂ ಸಿದ್ದರಾಮಯ್ಯನವರು ಇಂದು ರಾಜ್ಯ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ವೇಳೆ 2025ರ ವೇಳೆಗೆ 44 ಕಿಲೋ ಮೀಟರ್‌ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ಇನ್ನೂ ಈ ಬಾರಿ ಬಜೆಟ್​​ನ ಒಟ್ಟು ಗಾತ್ರ 3,71,383 ಕೋಟಿ ರೂಪಾಯಿ ಆಗಿದೆ. ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗಿದ್ದು, ಟ್ರಾಫಿಕ್‌ನಿಂದ ತಪ್ಪಿಸಿಕೊಂಡು ಕಡಿಮೆ ಸಮಯದಲ್ಲಿ ಕಚೇರಿ ಹಾಗೂ ತಮ್ಮ ಗಮ್ಯ ಸ್ಥಾನಗಳಿಗೆ ತಲುಪಬಹುದಾಗಿದೆ. ಆದ್ದರಿಂದ ಇಲ್ಲಿನ ಬಹುತೇಕ ಪ್ರಯಾಣಿಕರು ಮೆಟ್ರೋವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Karnataka Budget On Namma Metro: CM Unveils Plans for 44 KM New Metro Route in Bengaluru by 2025

ಸಿದ್ದರಾಮಯ್ಯ ಅವರು 15ನೇ ಬಾರಿ ಬಜೆ ಮಂಡನೆ ಮಾಡಿದ್ದಾರೆ. ಈ ವೇಳೆ ಮೆಟ್ರೋಗೆ ಮತ್ತಷ್ಟು ವೇಗ ಕೊಟ್ಟಿದ್ದು, ಹೊಸದಾಗಿ 2025ರ ಮಾರ್ಚ್‌ ವೇಳೆಗೆ 44 ಕಿಲೋ ಮೀಟರ್‌ ಮೆಟ್ರೋ ಮಾರ್ಗ ಸೇರ್ಪಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋವನ್ನೇ ನಂಬಿಕೊಂಡು ಪ್ರಯಾಣ ಮಾಡುವವರ ಹೆಚ್ಚುತ್ತಲೇ ಇದೆ. ಯಾಕೆಂದರೆ ಇದರಲ್ಲಿ ಗಮ್ಯ ಸ್ಥಳವನ್ನು ಅತೀ ಬೇಗನೆ ಯಾವುದೇ ಕಿರಿಕಿರಿ ಇಲ್ಲದೆ ತಲುಪಬಹುದು. ಇದೀಗ ಸಿಎಂ ಬಜೆಟ್‌ನಲ್ಲಿ ಮಾರ್ಗ ಸೇರ್ಪಡೆಯ ಬಗ್ಗೆ ಘೋಷಣೆ ಮಾಡಿರುವುದು ಇಲ್ಲಿನ ಜನರ ಮುಖದಲ್ಲಿ ಮತ್ತಷ್ಟು ಮಂದಹಾಸ ಮೂಡಿಸಿದಂತಾಗಿದೆ.

ಮೆಟ್ರೋ ಯೋಜನೆ ಹಂತ-2, 2ಎ ಯೋಜನೆಯಡಿ ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ ಮಾರ್ಗವನ್ನು 2026ಕ್ಕೆ ಪೂರ್ಣ ಮಾಡಲಾಗುತ್ತದೆ. ಇನ್ನು ಅಂದಾಜು 15 ಸಾವಿರದ 661 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಹಂತ 3ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದಲೂ ಅನುಮೋದನೆ ನಿರೀಕ್ಷೆಯಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+