ಟ್ವಿಟ್ಟರ್‌ನಲ್ಲಿ ಅಮಿತ್ ಶಾ ಭಾಷಣ ಬದಲು ಸಿನಿಮಾ ಹಾಡು ಕೇಳಿಸಿದ ಬಿಜೆಪಿ!
ಬೆಂಗಳೂರು, ಜನವರಿ 18: ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಡವಟ್ಟಾಗಿದೆ. ಸಿಎಎ ಬಗ್ಗೆ ಜನಜಾಗೃತಿ ಮೂಡಿಸಲು ಹುಬ್ಬಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ, ಅಮಿತ್ ಶಾ ಲೈವ್ ಭಾಷಣ ಕೇಳಿ ಎಂದು ನೆಟ್ಟಿಗರಿಗೆ ಮುಂಗಾರು ಮಳೆ ಚಿತ್ರದ ಹಾಡು ಕೇಳಿಸಿದೆ.
ಸಮಾವೇಶವನ್ನು ಟ್ವೀಟರ್‌ನಲ್ಲಿ ನೇರ ಪ್ರಸಾರ ಮಾಡುವುದಾಗಿ BJP Karnataka ಆರಂಭದಲ್ಲಿ ಹೇಳಿಕೊಂಡಿತ್ತು. ಸಮಾವೇಶ ಆರಂಭಗೊಂಡಾಗ ಟ್ವೀಟರ್‌ನಲ್ಲಿ ನೇರ ಪ್ರಸಾರ ಆರಂಭವಾಗಿದೆ. ಆದರೆ, 2 ಗಂಟೆ 21 ನಿಮಿಷದ ಆ ವಿಡಿಯೋದಲ್ಲಿ ಅಮಿತ್ ಶಾ ಭಾಷಣದ ಬದಲು ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಚಿತ್ರದ ಹಾಡುಗಳ ಆಡಿಯೋ 21 ನಿಮಿಷ ಕೇಳಿ ಬಂದಿದೆ.

ನಂತರ ಹಾಡುಗಳು ಕೇಳುವುದು ಸ್ಥಗಿತಗೊಂಡರೂ ಅಮಿತ್ ಶಾ ಅವರ ಯಾವುದೇ ಮಾತುಗಳು ನೇರ ಪ್ರಸಾರದಲ್ಲಿ ಕಂಡು ಬರುವುದಿಲ್ಲ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸದಾ ಮುಂದೆ ಇರುವ ಬಿಜೆಪಿಗೆ ಇದರಿಂದ ಮುಜುಗರವಾಗಿದೆ. ಇದೊಂದು ತಾಂತ್ರಿಕ ಕಾರಣದಿಂದ ನಡೆದ ಅಚಾತುರ್ಯ ಎಂದು BJP Karnataka ತಿಳಿಸಿದ್ದೂ, ನಂತರ ಲೈವ್ ವಿಡಿಯೋವನ್ನು ಅಳಿಸಿ ಹಾಕಿದೆ.












Click it and Unblock the Notifications