Industry: ಐಟಿ ಬಿಟಿ, ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ಜರ್ಮನಿ-ಕರ್ನಾಟಕದ ಮಹತ್ವದ ಒಪ್ಪಂದ

ಬೆಂಗಳೂರು, ಏಪ್ರಿಲ್ 15: ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ), ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಹೊಂದುವ ಉದ್ದೇಶವಿದೆ. ಈ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಐದು ವರ್ಷಗಳ ಅವಧಿಗೆ ಜರ್ಮನಿಯ ಬವೇರಿಯಾ ಜೊತೆಗೆ ಮಂಗಳವಾರ ಬೆಂಗಳೂರಿನಲ್ಲಿ ಮಹತ್ವದ ಒಡಂಬಡಿಕೆ ಜರುಗಿತು.

ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ಹಾಗೂ ಬವೇರಿಯಾ ಪರವಾಗಿ ಅಲ್ಲಿಯ ಚಾನ್ಸಲರಿ ಮುಖ್ಯಸ್ಥ ಡಾ.ಪ್ಲೋರಿಯನ್ ಹರ್ಮನ್ ಸಹಿ ಹಾಕಿದರು. ಈ ಮಹತ್ವದ ಒಪ್ಪಂದಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಕ್ಷಿಯಾದರು.

Karnataka and Bavaria Sign 5-Year Pact for Tech Education amp amp Industrial Cooperation MB Patil

ಒಪ್ಪಂದದಿಂದ ಏನು ಪ್ರಯೋಜನ?

ಈ ಸಂದರ್ಭದಲ್ಲಿ ಸಚಿವ ಎಂಬಿ ಪಾಟೀಲ ಅವರು ಮಾತನಾಡಿ, 'ಈ ಒಡಂಬಡಿಕೆಯು ಮುಂದಿನ 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಇದರ ಅನ್ವಯ ಕೈಗಾರಿಕೆ 4.0 ವೈಮಾಂತರಿಕ್ಷ, ವೈದ್ಯಕೀಯ ತಂತ್ರಜ್ಞಾನ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಮತ್ತು ನೇಮಕ, ಉದ್ಯಮಶೀಲತೆ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಬವೇರಿಯಾದ ಸಚಿವರಿಗೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರದ ಬಗ್ಗೆ ಸಾದ್ಯಂತವಾಗಿ ತಿಳಿಸಿ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳತ್ತ ಗಮನ ಸೆಳೆಯಲಾಯಿತು. ಜತೆಗೆ ಕೌಶಲ್ಯಾಭಿವೃದ್ಧಿಯಂಥ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವರ್ಕಿಂಗ್ ಗ್ರೂಪ್ ರಚಿಸುವ ಬಗ್ಗೆ ತೀರ್ಮಾನಿಸಲಾಯಿತು. ಬವೇರಿಯಾ ಪ್ರಾಂತ್ಯವು 2007 ರಿಂದಲೂ ರಾಜ್ಯದೊಂದಿಗೆ ವಾಣಿಜ್ಯ ಸಂಬಂಧವನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಬಾಹ್ಯಾಕಾಶ, ಎಲೆಕ್ಟ್ರಾನಿಕ್, ರಕ್ಷಣಾ ವಲಯಕ್ಕೆ ಆದ್ಯತೆ

ಕರ್ನಾಟಕದಲ್ಲಿ ಬವೇರಿಯಾ ಪ್ರಾಂತೀಯ ಸರಕಾರದ ಪ್ರತಿನಿಧಿ ಮಟ್ಟದ ಕಚೇರಿ 2001ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಈಗಿನ ಹೊಸ ಒಡಂಬಡಿಕೆಯಿಂದ ರಾಜ್ಯ ಮತ್ತು ಬವೇರಿಯಾ ನಡುವಿನ ಬಾಂಧವ್ಯ ಮತ್ತೊಂದು ಮಜಲನ್ನು ಕಾಣಲಿದೆ. ವಿಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ 2013ರಿಂದಲೂ ದ್ವಿಪಕ್ಷೀಯ ಸಹಕಾರವಿದೆ. ಇನ್ನು ಮುಂದೆ ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ವಲಯಗಳ ಬಗ್ಗೆ ಗಮನ ಹರಿಸಲು ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ರಾಜ್ಯದ ಐಟಿ-ಬಿಟಿ ಇಲಾಖೆಯು ನವೋದ್ಯಮ ಕ್ಷೇತ್ರದಲ್ಲಿ ಜರ್ಮನಿಯೊಂದಿಗೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಂಶೋಧನೆ, ಯೂನಿಕಾರ್ನ್ ಶ್ರೇಣಿಯ ನವೋದ್ಯಮಗಳು ಸಮೃದ್ಧವಾಗಿವೆ. ಯಾವುದಾದರೂ ವಲಯದಲ್ಲಿ ರಾಜ್ಯದ ಯುವಜನರು ಜರ್ಮನ್ ಭಾಷೆ ಕಲಿಯುವುದು ಅಗತ್ಯವೆನಿಸಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು. ಬವೇರಿಯಾ ಪ್ರಾಂತೀಯ ಸರಕಾರವು ಈ ಬಗ್ಗೆ ನಮ್ಮ ಗಮನಕ್ಕೆ ತರಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+