ಕಲಬುರಗಿ ಕಕ್ಕಾಬಿಕ್ಕಿ: 9 ಸೋಂಕಿತರ ಪೈಕಿ ಐವರು ಅಪ್ರಾಪ್ತರಿಗೆ ಕೊರೊನಾ!
ಬೆಂಗಳೂರು, ಏಪ್ರಿಲ್.29: ಕೊರೊನಾ ವೈರಸ್ ಮಹಾಮಾರಿಗೆ ಕಲಬುರಗಿ ಮಂದಿ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಒಂದೇ ದಿನ ರಾಜ್ಯದಲ್ಲಿ ಒಂಬತ್ತು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಕರ್ನಾಟಕದಲ್ಲಿ ಬೆಳಗಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು ಬೆಳಗಾವಿಯಲ್ಲಿ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿದ್ದರೆ ಉಳಿದ ಎಂಟು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಕಲಬುರಗಿ ಜಿಲ್ಲೆ ಒಂದರಲ್ಲೇ ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 532ಕ್ಕೆ ಏರಿಕೆಯಾಗಿದೆ.
ಬೆಳಗಾವಿ ಜಿಲ್ಲೆ ಸಂಕೇಶ್ವರ ಪಟ್ಟಣದ 12 ವರ್ಷದ ಬಾಲಕನಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ನವದೆಹಲಿಯ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ವಾಪಸ್ ಆಗಿದ್ದ ಪೇಶೆಂಟ್ ನಂಬರ್.293ರ ವ್ಯಕ್ತಿಯಿಂದ ಬಾಲಕನಿಗೆ ಸೋಂಕು ತಗಲಿದೆ ಎಂದು ತಿಳಿದು ಬಂದಿದೆ.

ಒಂಬತ್ತು ಸೋಂಕಿತರ ಪೈಕಿ ಐವರು ಅಪ್ರಾಪ್ತರಿಗೆ ಕೊರೊನಾ:
ರಾಜ್ಯದಲ್ಲಿ ಬುಧವಾರ ಪತ್ತೆಯಾದ ಒಂಬತ್ತು ಕೊರೊನಾ ವೈರಸ್ ಸೋಂಕಿತರ ಪೈಕಿ ಐವರು ಅಪ್ರಾಪ್ತರು ಎಂದು ಗೊತ್ತಾಗಿದೆ. ಅದರಲ್ಲೂ ನಾಲ್ವರು 15 ವರ್ಷಕ್ಕಿಂತ ಚಿಕ್ಕವರು ಎಂದು ತಿಳಿದು ಬಂದಿದೆ. ಕಲಬುರಗಿಯಲ್ಲೇ ನಾಲ್ವರು ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದೆ. ನಾಲ್ಕೂವರೆ ವರ್ಷದ ಬಾಲಕಿ, 12 ವರ್ಷದ ಬಾಲಕಿ, 14 ವರ್ಷದ ಬಾಲಕಿ, 17 ವರ್ಷದ ಬಾಲಕಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆಯು 50ರ ಗಡಿ ದಾಟಿದ್ದು, 44 ರಿಂದ 52ಕ್ಕೆ ಏರಿಕೆಯಾಗಿದೆ. ಇನ್ನು, ಬೆಳಗಾವಿ ಸಂಕೇಶ್ವರ ಪಟ್ಟಣದ 12 ವರ್ಷದ ಬಾಲಕನಿಗೆ ಕೊರೊನಾ ವೈರಸ್ ಕನ್ಫರ್ಮ್ ಆಗಿದೆ.












Click it and Unblock the Notifications