ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2014 ಪ್ರಕಟ

ಬೆಂಗಳೂರು, ಮೇ 8 : 2013-14ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮೇ 8ರ ಬೆಳಿಗ್ಗೆ 8.30ಕ್ಕೆ ಪ್ರಕಟಿಸಿದ್ದಾರೆ. ಈ ಫಲಿತಾಂಶ ಇಂದು ಇಂಟರ್ನೆಟ್ ನಲ್ಲಿ ಮಾತ್ರ ಲಭ್ಯವಾಗಿರಲಿದೆ. ಆಯಾ ಕಾಲೇಜುಗಳಲ್ಲಿ ಮೇ 9ರ ಬೆಳಿಗ್ಗೆ ಲಭ್ಯವಾಗಲಿದೆ.

ಫಲಿತಾಂಶ ಅಂಕಗಳ ಸಮೇತ ಈಗ ಲಭ್ಯ, ಇಲ್ಲಿ ಕ್ಲಿಕ್ಕಿಸಿ!

Karnataka 2nd PUC examination 2014 results announced
ಮಲ್ಲೇಶ್ವರದಲ್ಲಿರುವ ಪಿಯು ಬೋರ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಿಮ್ಮನೆ ರತ್ನಾಕರ ಅವರು ಫಲಿತಾಂಶವನ್ನು ಪ್ರಕಟಿಸಿದರು. ಪ್ರತಿವರ್ಷ ಸಂಜೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ಬೆಳಿಗ್ಗೆಯೇ ಪ್ರಕಟವಾಗಿದೆ. [ಪಿಯುಸಿ ಫಲಿತಾಂಶದ ಹೈಲೈಟ್ಸ್]

ಪ್ರಸಕ್ತ ವರ್ಷ ಶೇ.68.75ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ ಶೇ.10ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ. ನಿರೀಕ್ಷೆಯಂತೆ ದಕ್ಷಿಣ ಕನ್ನಡ (ಶೇ.86.04), ಉಡುಪಿ (ಶೇ.85.57) ಮತ್ತು ಕೊಡಗು (ಶೇ.75.87) ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದು, ಕರ್ನಾಕದ ಉತ್ತರ ತುದಿಯಲ್ಲಿರುವ ಬೀದರ್ ಜಿಲ್ಲೆ (ಶೇ.44.85) ಕಡೆಯ ಸ್ಥಾನ ಪಡೆದಿದೆ.

ವಿದ್ಯಾರ್ಥಿನಿಯರ ಮೇಲುಗೈ : ಈ ಬಾರಿ ಕೂಡ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರು ಶೇ.66.81ರಷ್ಟು ಉತ್ತೀರ್ಣರಾಗಿದ್ದರೆ, ವಿದ್ಯಾರ್ಥಿಗಳು ಶೇ.54.46ನಷ್ಟು ತೇರ್ಗಡೆಯಾಗಿದ್ದಾರೆ. ಒಟ್ಟು 45 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ 6,13,705 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು, ಅವರಲ್ಲಿ 3,71,116 ಪಾಸಾಗಿದ್ದಾರೆ. ವಿದ್ಯಾರ್ಥಿನಿಯರು 199,560 ಮತ್ತು ವಿದ್ಯಾರ್ಥಿಗಳು 171,556 ತೇರ್ಗಡೆಯಾಗಿದ್ದಾರೆ.

ಕಿಮ್ಮನೆ ಹರ್ಷ : ಈ ಬಾರಿಯ ಫಲಿತಾಂಶಕ್ಕೆ ಸಂತಸ ವ್ಯಕ್ತಪಡಿಸಿರುವ ಕಿಮ್ಮನೆ ರತ್ನಾಕರ ಅವರು, ಕಳೆದ 10 ವರ್ಷಗಳಲ್ಲಿ ಈ ವರ್ಷ ಅತಿ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಕಳೆದ ವರ್ಷ ಶೇ59.36ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಲೋಕಸಭೆ ಚುನಾವಣೆ ಇದ್ದಾಗ ಮೌಲ್ಯಮಾಪನ ಪ್ರಕ್ರಿಯೆ ನಡೆದರೂ ಸರಿಯಾದ ಸಮಯದಲ್ಲಿ ಫಲಿತಾಂಶ ಒದಗಿಸಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+