ಬೆಂಗಳೂರು ಬಿಟ್ಟು ದೆಹಲಿಗೆ ಬನ್ನಿ ಎಂದ ಕಂಪನಿಗೆ ಪಾಠ ಕಲಿಸಿದ ಕನ್ನಡಿಗರು
ಬೆಂಗಳೂರಲ್ಲಿದ್ದು ಕನ್ನಡ ಕಲಿಯಲು ಕಷ್ಟ ಪಡುತ್ತಿದ್ದೀರಾ ಹಾಗಾದರೆ ತೊಂದರೆ ಇಲ್ಲ ನೀವು ದೆಹಲಿಗೆ ಬನ್ನಿ ಎಂದಿದ್ದ ಕಾರ್ 24 ಇಂಡಿಯಾ (cars24india Founder & CEO) ಸಂಸ್ಥಾಪಕ ಹಾಗೂ ಸಿಇಒ ವಿಕ್ರಮ್ ಚೋಪ್ರಾಗೆ ಕನ್ನಡಿಗರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಕಾರ್ 24 ಇಂಡಿಯಾದ ಸಂಸ್ಥಾಪಕ ವಿಕ್ರಮ್ ಕಳೆದ ವಾರ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪೋಸ್ಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಪೋಸ್ಟ್‌ನ ಬೆನ್ನಲ್ಲೇ ಕಾರ್ ಸಂಸ್ಥೆಗೆ ಸರಿಯಾಗಿ ಪೆಟ್ಟು ಬಿದ್ದಿದೆ. ಈ ಸಂಸ್ಥೆಗೆ ಬೆಂಗಳೂರಿನಿಂದ ಉತ್ತಮ ಆದಾಯ ಬರುತ್ತಿತ್ತು. ಬೆಂಗಳೂರು ಬಿಟ್ಟು ದೆಹಲಿಗೆ ಬನ್ನಿ ಅಂತ ಪೋಸ್ಟ್ ಮಾಡಿದ ಮೇಲೆ ಆರ್ಥಿಕವಾಗಿ ಹೊಡೆತ ಬಿದ್ದಿದೆ. ಅಲ್ಲದೆ ಕಂಪನಿಯ ಬಗ್ಗೆ ಜನ ಅವರ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕಾಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಹಾಗೂ ಕನ್ನಡಿಗರಿಗೆ ನೋವುಂಟು ಮಾಡುವಂತೆ ವಿಕ್ರಮ್ ಚೋಪ್ರಾ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕನ್ನಡಿಗರು ಈ ಕಂಪನಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಈ ಕಂಪನಿಯ ಸೇಲ್ಸ್ ಮಾರ್ಕೆಟ್‌ಗೆ ಸರಿಯಾದ ಪೆಟ್ಟು ಬಿದ್ದಿದೆ.
ಅಲ್ಲದೇ ಕಂಪನಿಯ ರಿವ್ಯೂವ್‌ನಲ್ಲೂ ಕನ್ನಡಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯಾದರೂ ವಿಕ್ರಮ್ ಚೋಪ್ರಾ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ಡಿಲೀಟ್ ಮಾಡಿಲ್ಲ. ಇದು ಸಹ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕಾರಣ ಹೇಳಿ ಫ್ರೀ ಕೆಲ್ಸ ಮಾಡ್ತೀನಿ: ವಿಕ್ರಮ್ ಚೋಪ್ರಾ ಅವರೇ ಬೆಂಗಳೂರಿಗಿಂತ ದೆಹಲಿ ಯಾವ ವಿಷಯದಲ್ಲಿ ಉತ್ತಮವಾಗಿದೆ ಎನ್ನುವುದಕ್ಕೆ ಒಂದೇ ಒಂದು ಕಾರಣ ಕೊಡಿ ನಾನು ನಿಮ್ಮ ಕಂಪನಿಯಲ್ಲಿ ಫ್ರೀಯಾಗಿ ಕೆಲಸ ಮಾಡುತ್ತೇನೆ ಎಂದು ಸ್ವಾತಿ ಎನ್ನುವವರು ಹೇಳಿದ್ದಾರೆ. ಒಂದು ಭಾಷೆಯನ್ನು ಕಲಿಯುವುದಕ್ಕೆ ಇವರಿಗೆ ಯಾಕೆ ಇಷ್ಟೊಂದು ಕಷ್ಟವಾಗುತ್ತಿದೆ. ಕನ್ನಡ ಕಲಿಯುವುದಕ್ಕೆ ಬದಲಾಗಿ ಯಾಕೆ ಇವರೆಲ್ಲ ಈ ರೀತಿ ರಿಯಾಕ್ಟ್ ಮಾಡುತ್ತಿದ್ದಾರೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಕಂಪನಿ ರಿವ್ಯೂವ್: ಇನ್ನು ಹಲವು ಪ್ಲೇಸ್ಟೋರ್ ಹಾಗೂ ಗೂಗಲ್‌ನ ಮೂಲಕ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಕನ್ನಡದ ಬಗ್ಗೆ ಮಾತನಾಡಿರುವುದಕ್ಕೆ ಕಮೆಂಟ್‌ನ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಕಂಪನಿಯ ರೆಪ್ಯೂಟೆಷನ್‌ಗೆ ಹಾನಿಯಾಗಿದೆ. ಅಲ್ಲದೆ ಇದೊಂದು ಕಿತ್ತೋದ ಜಾಹೀರಾತು. ಈ ರೀತಿ ಜಾಹೀರಾತು ಕೊಡುವುದಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಜಾಹೀರಾತು ಕೊಡಬಹುದಿತ್ತು. ಆದರೆ, ಕಂಪನಿಯ ಸಂಸ್ಥಾಪಕ ಕೀಳು ಮಟ್ಟದ ಜಾಹೀರಾತಿನ ಮೂಲಕ ತಮ್ಮ ಕಂಪನಿಯ ಘನತೆಯನ್ನು ತಾವೇ ಕಳೆದುಕೊಂಡಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ 24 ಇಂಡಿಯಾ ಕಂಪನಿಯ ಟ್ವೀಟ್ ಏನು
ಕಾರ್ 24 ಇಂಡಿಯಾ ಈಚೆಗೆ ಒಂದು ಜಾಹೀರಾತು ಹಂಚಿಕೊಂಡಿತ್ತು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಕೆಲವರು ಇದೊಂದು ಕೀಳುಮಟ್ಟದ ಜಾಹೀರಾತು ಎಂದು ಸುಮ್ಮನಾಗಿದ್ದರು. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿತ್ತು ಎನ್ನುವ ವಿವರ ಇಲ್ಲಿದೆ. ಸಂಸ್ಥೆಯ ಸಂಸ್ಥಾಪಕ ವಿಕ್ರಮ್ ಚೋಪ್ರಾ ಎನ್ನುವವರು ಟ್ವೀಟ್ ಮೂಲಕ ಜಾಹೀರಾತು ಹಂಚಿಕೊಂಡಿದ್ದರು.
ನೀವು ಬೆಂಗಳೂರಿನಲ್ಲಿ ವರ್ಷಗಟ್ಟಲೆ ಇದ್ದರೂ ಕನ್ನಡ ಮಾತನಾಡಲು ಬರುತ್ತಿಲ್ಲವೇ, ಪರವಾಗಿಲ್ಲ ದೆಹಲಿಗೆ ಬನ್ನಿ ಎಂದಿದ್ದರು. ಅಲ್ಲದೆ ನಮ್ಮ ಕಂಪನಿಯಲ್ಲಿ ಇಂಜಿನಿಯರ್‌ಗಳಿಗೆ ಕೆಲಸ ಖಾಲಿ ಇದ್ದು, ಮನೆಯಿಂದ ಹತ್ತಿರ ಇರಬೇಕು ಎಂದು ಬಯಸುವವರಿಗೆ ಇದೊಂದು ಸುವರ್ಣಾವಕಾಶ ಎಂದು ಟ್ವೀಟ್ ಮಾಡಿದ್ದರು.
ಮುಂದುವರಿದು ದೆಹಲಿ ಎನ್‌ಸಿಆರ್ ಉತ್ತಮವಾಗಿದೆ ಅಂತಿಲ್ಲ. ಇದು ನಿಜವಾಗಿಯೂ ಉತ್ತಮವಾಗಿದೆ ಎಂದು ಮಾತ್ರ ಹೇಳಬಲ್ಲೆ. ನೀವು ದೆಹಲಿಗೆ ಹಿಂದಿರುಗಿಸಲು ಇಷ್ಟಪಟ್ಟರೆ ನನಗೆ ಮೇಲ್ ಮಾಡಿ. ದೆಹಲಿ ಮೇರಿ ಜಾನ್ ♥️ ಅನ್ನಲಾಗಿತ್ತು. ಈ ರೀತಿ ಜಾಹೀರಾತುಕೊಟ್ಟ ಕಂಪನಿಗೆ ಕನ್ನಡಿಗರು ಪಾಠ ಕಲಿಸಿದ್ದಾರೆ.












Click it and Unblock the Notifications