Video Viral: ಪ್ರಯಾಣಿಕರ ಕೈಸೇರಿದ ಚಿನ್ನದ ಸರ; ಎಲ್ಲರ ಮನ ಗೆದ್ದ ಕನ್ನಡದ ಆಟೋ ಚಾಲಕ

ಬೆಂಗಳೂರು, ಅಕ್ಟೋಬರ್‌, 28: ಈಗಿನ ಕಾಲದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಒಂದು ಸರ ಸಿಕ್ಕರೆ ಸಾಕು ಅದರಿಂದ ಎಷ್ಟು ಹಣ ಬರುತ್ತದೆಯೋ ಎಂದು ಕಾಯುತ್ತಿರುತ್ತಾರೆ. ಇಂತಹವರ ನಡುವೆಯೂ ಆಟೋ ಚಾಲಕರೊಬ್ಬರು ತಮ್ಮ ಆಟೋದಲ್ಲಿ ಬಿಟ್ಟೋಗಿದ್ದ ಚಿನ್ನದ ಸರವನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಇತ್ತೀಚೆಗೆ ಮೈಸೂರಿನ ತಳಿರು ಫೌಂಡೇಶನ್‌ ಸಂಸ್ಥಾಪಕಿ ಚಿತ್ರಾ ಅವರು ಬೆಂಗಳೂರಿಗೆ ಬಂದ ವೇಳೆ ತಮ್ಮ ಬೆಳೆ ಬಾಳುವ ಚಿನ್ನದ ಸರವನ್ನು ಕಳೆದುಕೊಂಡಿರುತ್ತಾರೆ. ಅದನ್ನು ಎಲ್ಲಿ ಕಳೆದುಕೊಂಡೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಆದರೆ, ಮರುದಿನ ಇವರ ಮನೆಗೆ ಬಂದಂತಹ ಆಟೋ ಚಾಲಕರೊಬ್ಬರು ಕಳೆದುಹೋದ ಚಿನ್ನದ ಸರವನ್ನು ಚಿತ್ರಾ ಅವರಿಗೆ ಹಿಂದುರಿಗಿಸಿದ್ದಾರೆ.

Kannada s auto driver who delivered gold chain to passenger video viral

ಬೆಂಗಳೂರಿನ ಆಟೋ ಚಾಲಕರಾದ ಗಿರೀಶ್‌ ಅವರಿಗೆ ಈ ಚಿನ್ನದ ಸರ ತಮ್ಮ ಆಟೋದಲ್ಲಿ ಸಿಕ್ಕಿದ್ದು, ಈ ಬೆಲೆ ಬಾಳುವ ವಸ್ತು ಯಾರದು ಎಂದು ಪತ್ತೆ ಹಚ್ಚಿ, ನಗರ ಮೀಟರ್ಡ್‌ ಆಟೋ ಅಪ್ಲಿಕೇಷನ್‌ ಸಹಾಯದ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿ ಚಿತ್ರಾರಿ ಅವರಿಗೆ ಆ ಚಿನ್ನದ ಸರವನ್ನು ಜೋಪಾನವಾಗಿ ತಲುಪಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ. ಇನ್ನು ಇದೀಗ ಈ ಆಟೋ ಚಾಲಕನ ಪ್ರಮಾಣಿಕತೆಗೆ ಶ್ಲಾಘನಿಯಗಳು ಹರಿದುಬರುತ್ತಿವೆ.

👑ಚೆ_ಕೃಷ್ಣ🇮🇳💛❤️ ಎಂಬ ಹೆಸರಿನ ಟ್ವೀಟ್‌ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ತಳಿರು ಫೌಂಡೇಶನ್‌ ಸಂಸ್ಥಾಪಕಿ ತಮ್ಮ ಮನೆಯನ್ನು ಹುಡುಕಿಕೊಂಡು ಬಂದು ತಾವು ಕಳೆದುಕೊಂಡಿದ್ದ ಬೆಲೆ ಬಾಳುವ ಚಿನ್ನದ ಸರವನ್ನು ಹಿಂದುರಿಗಿಸಿ‌ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಗಿರೀಶ್‌ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

ಅಕ್ಟೋಬರ್‌ 27ರಂದು ಹಂಚಿಕೊಳ್ಳಲಾದ ಈ ವಿಡಿಯೋಯನ್ನು ಇದುವರೆಗೂ 67,000 ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. 481 ಜನರು ಶೇರ್‌ ಮಾಡಿದ್ದು, 3,044 ಮೆಚ್ಚುಗೆಗಳು ಬಂದಿವೆ. 24 ಜನ ಕಾಮೆಂಡ್‌ ಮಾಡಿದ್ದಾರೆ. ಇದರಲ್ಲಿ ಒಬ್ಬ ಬಳಕೆದಾರರು "ಇಂತಹ ಪ್ರಾಮಾಣಿಕ ವ್ಯಕ್ತಿಗೆ ನನ್ನದೊಂದು ಸಲಾಂ," ಎಂಬ ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಈ ಕಾಲದಲ್ಲೂ ಇಂತಹ ಅದ್ಭುತ ವ್ಯಕ್ತಿತ್ವದ ವ್ಯಕ್ತಿ ಸಿಗುವುದು ಅಪರೂಪ" ಎಂದು ಬರೆದುಕೊಂಡಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+