ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ, ಕನ್ನಡ ಕಿರುತೆರೆ ನಟ ಬಂಧನ

ಬೆಂಗಳೂರು, ಮೇ 19 : ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಕಿರುತೆರೆ ನಟ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 12ರಂದು ಚಾಕು ತೋರಿಸಿ ಕಿರುತೆರೆ ನಟ ಮತ್ತು ಇತರ ಇಬ್ಬರು ಆರೋಪಿಗಳು ಇಬ್ಬರು ಮಹಿಳೆಯರ ಮೇಲೆ ಕೋರಮಂಗಲದ ಪಿಜಿಯಲ್ಲಿ ಅತ್ಯಾಚಾರ ನಡೆಸಿದ್ದರು. ಶುಕ್ರವಾರ ಈ ಕುರಿತು ದೂರು ದಾಖಲಾಗಿತ್ತು.

ಆರೋಪಿಗಳನ್ನು ರಾಕೇಶ್ (24), ಕ್ಯಾಬ್ ಚಾಲಕ ಮಣಿಕಾಂತ್ (25), ಪಾನಿಪೂರಿ ಮಾರುವ ಸೂರ್ಯ (23) ಎಂದು ಗುರುತಿಸಲಾಗಿದೆ. ಎಲ್ಲಾ ಆರೋಪಿಗಳು ಸ್ನೇಹಿತರಾಗಿದ್ದು, ಕೋರಮಂಗಳಲ ನಿವಾಸಿಗಳು.

Kannada TV actor arrest for raping women

'ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ' ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಹೇಳಿದ್ದಾರೆ.

ಮೇ 12ರಂದು ಇಬ್ಬರು ಮಹಿಳೆಯರು ಆನ್‌ಲೈನ್ ಮೂಲಕ ಊಟ ಬುಕ್ ಮಾಡಿದ್ದರು. 8.20ರ ಸಮಯದಲ್ಲಿ ಊಟಕ್ಕಾಗಿ ಕಾಯುತ್ತಿದ್ದರು. ಆಗ ಕಾಲಿಂಗ್ ಬೆಲ್ ಶಬ್ದ ಕೇಳಿ ಊಟ ಬಂದಿದೆ ಎಂದು ಬಾಗಿಲು ತೆರೆದಿದ್ದಾರೆ.

ರೂಂಗೆ ಪ್ರವೇಶಿಸಿದ ಮೂವರು ಚಾಕು ತೋರಿಸಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರು. ಆದರೆ, ಸ್ನೇಹಿತರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+