ಕನ್ನಡದ ಪೋರನ ತಪ್ಪು ಒಪ್ಪಿಕೊಳ್ಳುವ ಮಾತು ಕೇಳಿ !

ಬೆಂಗಳೂರು, ನವೆಂಬರ್, 27: ಇವತ್ತಿನ ಕಾಲದ ಪುಟಾಣಿಗಳು ಎಷ್ಟು ಬುದ್ಧಿವಂತರು ಎಂಬುದಕ್ಕೇ ಇಲ್ಲೊಂದು ಸಾಕ್ಷಿಯಿದೆ. ಪುಟ್ಟ ಪೋರನೊಬ್ಬ ತನ್ನ ತಪ್ಪನ್ನು ತಂದೆಯ ಮುಂದೆ ಒಪ್ಪಿಕೊಳ್ಳುತ್ತಾನೆ. ಸುಳ್ಳು ಹೇಳಿದ ತಾಯಿಯನ್ನು ಗದರಿಸುತ್ತಾನೆ. ಅಪ್ಪ ಒಡೆಯಬಹದು ಎಂಬ ಭಯದಲ್ಲಿ ನೈಸ್ ಮಾಡ್ತಾನೆ. ಕನ್ನಡದ ಪುಟ್ಟ ಪೋರನ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ಈ ಪೋರನ ಹೆಸರು ಪ್ರೀತಮ್. ಕನ್ನಡ ಭಾಷೆ ಮಾತನಾಡುತ್ತಾನೆ. ಬಾಲಕನ ಕೈಗೆ ಎಟುಕುವ ಜಾಗದಲ್ಲಿ ಬಿಸ್ಕೆಟ್ ಇಟ್ಟಿದ್ದಾರೆ. ಅದನ್ನು ತಿಂದು ಹಾಕಿರುವ ಪುಟಾಣಿ ಮತ್ತೆ ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಅವರ ತಂದೆ ಪ್ರಶ್ನಿಸುತ್ತಾನೆ. ಕೈ ಕಟ್ಟಿಕೊಂಡು, ಅಪ್ಪನ ಪ್ರಶ್ನೆಗಳಿಗೆ ಉತ್ತರಿಸುವ ಪೋರನ ಚಾಣಾಕ್ಷತೆ ಎಂಥವರನ್ನೂ ಒಮ್ಮೆ ಮೂಕವಿಸ್ಮಿತರನ್ನಾಗಿಸುತ್ತದೆ.

ಬಿಸ್ಕೆಟ್ ತಿಂದು ತಪ್ಪು ಮಾಡಿದ್ದನ್ನು ಮುಗ್ಧತೆಯಿಂದ ತಂದೆಯ ಎದುರು ಒಪ್ಪಿಕೊಳ್ಳುವ ಬಾಲಕ ಕೊನೆಗೆ, ಇದೊಂದು ಅಪರೂಪ ತಪ್ಪು ಬಿಡು ಡ್ಯಾಡಿ, ಇನ್ನು ಮಾಡಲ್ಲ ಎಂದು ಹೇಳುತ್ತಾನೆ. ಇದಕ್ಕೂ ಮೊದಲು ಏನಾದ್ರೂ ನನ್ನದೇ ತಪ್ಪು ಅಂತ ದೂಷಿಸುತ್ತಾರೆ ಎಂದು ಬೇಸರ ಪಟ್ಟಿಕೊಳ್ಳುತ್ತಾನೆ. ಬಿಸ್ಕೆಟ್ ಪಾಕೆಟ್ ಬಾಲಕನ ಕೈಗೆ ಸಿಗುವ ಜಾಗದಲ್ಲಿ ಇಟ್ಟಿದ್ದ ತಾಯಿಗೆ ಮಮ್ಮೀ.. ನೀನು ಸುಳ್ಳು ಹೇಳಬೇಡ ಎಂದು ಕೈ ಬೆರಳು ತೋರಿ ಅವಾಜ್ ಬಿಟ್ಟಿದ್ದಾನೆ. ಪೋರನ ಈ ಮುಗ್ಧತೆ ಹಾಗೂ ಚಾಣಾಕ್ಷತೆ ಮಾತಿನ ವಿಡಿಯೋ ಜಾಲ ತಾಣದಲ್ಲಿ ವೈರಲ್ ಆಗಿದೆ.

Kannada small kid and father video viral

ಇತ್ತೀಚೆಗೆ ಪುಟ್ಟ ಪೋರನೊಬ್ಬ ಕಟ್ಟಿಂಗ್ ಶಾಪ್ ನಲ್ಲಿ ನನ್ನ ಕೂದಲು ಕಟ್‌ ಮಾಡಿದ್ರೆ ನಿನ್ನ ಕೊಲೆ ಮಾಡ್ತೀನಿ ಎಂದು ಧಮಕಿ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಬಾಲಕನ ತಂದೆಯೇ ಆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟಿದ್ದರು. ಇದೀಗ ಕನ್ನಡದ ಪೋರನ ಈ ವಿಡಿಯೋ ಅದನ್ನು ಮೀರಿಸುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+