Bengaluru: ನಾರ್ಥಿಗಳಿಗಲ್ಲ ಮೊದಲು ಬಿಬಿಎಂಪಿಗೆ ಕನ್ನಡ ಕಲಿಸಬೇಕು!

ಕೆಲವು ಉತ್ತರ ಭಾರತೀಯರು ಕರ್ನಾಟಕಕ್ಕೆ ಬಂದು ಕನ್ನಡ ಕಲಿಯುವುದಿಲ್ಲ. ಹಿಂದಿ ರಾಷ್ಟ್ರಭಾಷೆ ಅದನ್ನು ಮಾತನಾಡಬಹುದು ಎಂದು ವಾದ ಮಾಡುತ್ತಾರೆ. ಇವರಿಗೆ ಕನ್ನಡ ಕಲಿಸಬೇಕು ಎನ್ನುವ ಆಗ್ರಹದಲ್ಲಿ ಅರ್ಥವಿದೆ. ಆದರೆ, ದುರಾದೃಷ್ಟವಶಾತ್ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಕನ್ನಡ ಕಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರು ಆಡಳಿತ ನಡೆಸುವಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುವ ಬಿಬಿಎಂಪಿ ಕನ್ನಡವನ್ನು ಯಾವ ರೀತಿ ಬಳಸುತ್ತಿದೆ ಎನ್ನುವ ವಿವರ ಇಲ್ಲಿದೆ.

ನಮ್ಮ ನಾಯಕರು "ಜಗತ್ತನ್ನು ಬದಲಿಸುವ ಇಂಧನ ಹೊಂದಿರುವ ದೂರದೃಷ್ಟಿಯ ಜನರು" ಎಂದು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ

Kannada should be taught to this BBMP first not the northerners

https://bbmp.gov.in/home ಈ ರೀತಿ ಬರೆಯಲಾಗಿದೆ. ಇದು ಇಂಗ್ಲಿಷ್‌ನ ಯಥಾವತ್ತು ಅನುವಾದದ ಸ್ಯಾಂಪಲ್‌. ಇದೇ ರೀತಿ ಹಲವು ತಪ್ಪುಗಳು ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಇದೆ. ಬಿಬಿಎಂಪಿಯು ಬೆಂಗಳೂರಿನ ಅಭಿವೃದ್ಧಿ, ಕಾಮಗಾರಿ ಹಾಗೂ ಸೇವೆ ಸೇರಿದಂತೆ ಹಲವು ಜವಾಬ್ದಾರಿ ನಿರ್ವಹಿಸುತ್ತಿದೆ. ಭಾರತದ ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಬಿಬಿಎಂಪಿಯೂ ಒಂದಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ. ಆದರೆ, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ರೀತಿ ನಿರ್ಲಕ್ಷ್ಯ ತೋರಿಸುತ್ತಿರುವುದು ನೋಡಿದರೆ, ಅಚ್ಚರಿಯಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ಮಾತ್ರ ಕನ್ನಡ ಬಳಸಲಾಗಿದೆ ಒಳಗೆ ನೋಡಿದರೆ ಎಲ್ಲವೂ ಇಂಗ್ಲಿಷ್‌ ಮಯವಾಗಿದೆ.

ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಮ್ಮ ನಾಯಕರು ಎನ್ನುವ ಕಾಲಂ ಇದೆ (ಮುಖಪುಟದ ಮೂರನೇ ಆಯ್ಕೆ) ಅದರಲ್ಲಿ ನಮ್ಮ ನಾಯಕರು ಇಂಧನ ಹೊಂದಿರುವ ದೂರದೃಷ್ಟಿಯ ಜನರು (https://bbmp.gov.in/leadership) ಎಂದು ಬರೆಯಲಾಗಿದೆ.

Kannada should be taught to this BBMP first not the northerners

ಉದ್ಯಾನವನ ಮನೋಲ್ಲಾಸವನ್ನು ಒದಗಿಸುವ ಮೂಲ: ಬಿಬಿಎಂಪಿಯು "ಹಸಿರುಮಿತ್ರ" ಯೋಜನೆಯ ಬಗ್ಗೆ ನೀಡಿರುವ ವಿವರ ಈ ರೀತಿ ಇದೆ. ಇದರಲ್ಲಿ ʼಬೆಂಗಳೂರು "GARDEN CITY" ಎಂದು ಪ್ರಕ್ಯಾತಿ ಗಳಿಸಿದ್ದು, ಇದರ ಹಿರಿಮೆಯನ್ನು ಇನ್ನಷ್ಟು ಕಪಾಡುವ ನಿಟ್ಟಿನಲ್ಲಿ ಪರಿಸರವನ್ನು ಹಸಿರುಕರಣಗೊಳಿಸುವುದು ಬಹು ಮುಖ್ಯ ಪಾತ್ರವಾಗುತ್ತದೆ. ಉದ್ಯಾನವನಗಳು ಬೆಂಗಳೂರಿನ ನಾಗರೀಕರಿಗೆ ಉತ್ತಮವಾದ ಆಮ್ಲಜನಕ ಮತ್ತು ಮನೋಲ್ಲಾಸವನ್ನು ಒದಗಿಸುವ ಮೂಲವಾಗಿದೆ.ಉದ್‍ಯಾನವನಗಳ ನಿರ್ವಹಣೆ ಮತ್ತು ಸಂರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆಯಾಗಿರುವುದಿಂದ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾರ್ವಜನಿಕರ ಅನುಕೂಲಕ್ಕಾಗಿ "ಉದ್ಯಾನ ಮಿತ್ರ" ಮೊಬೈಲ್ ಆಪ್ ಸಹಕಾರಿಯಾಗಿರುತ್ತದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1270 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲಾಗುತ್ತಿದ್ದೆʼ ಎನ್ನಲಾಗಿದೆ.

ದೃಷ್ಟಿಹೀನ: ದೃಷ್ಟಿಹೀನ ಎನ್ನುವ ಹೆಸರಿನಲ್ಲಿ ಕಾಲಂವೊಂದನ್ನು ಬಿಬಿಎಂಪಿ ಸೃಷ್ಟಿಸಿದೆ. ದೃಷ್ಟಿಹೀನ ಎಂದರೇನು ಎನ್ನುವುದು ಬಿಬಿಎಂಪಿಗೆ ಅರ್ಥವಾದಂತಿಲ್ಲ. ಇಷ್ಟುಂದು ನಿರ್ಲಕ್ಷ್ಯ ಧೋರಣೆ ಏಕೆ ಎನ್ನುವ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.

Kannada should be taught to this BBMP first not the northerners

ಹಿಂದಿನ ವೆಬ್‌ಸೈಟ್‌ನಲ್ಲಿ ಹಲವು ತಪ್ಪು: ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಂದಿನ ವೆಬ್‌ಸೈಟ್‌ಗೆ ತಿರುಗಿ ಎನ್ನುವ ಆಯ್ಕೆಯೊಂದಿದ್ದು, ಅದರಲ್ಲಿ "ನಾಗರಿಕ ಸೌಲಭ್ಯಗಳ ಕೆಲವು ಮೂಲಭೂತ ಆಸ್ತಿಗಳ ಜವಾಬ್ದಾರಿ ಆಡಳಿತಾತ್ಮಕ ಸಂಸ್ಥೆಯಾಗಿದ್ದು" ಎನ್ನುವುದು ಸೇರಿದಂತೆ ಹಲವು ವಾಕ್ಯ ರಚನೆ ತಪ್ಪು ಹಾಗೂ ವಾಕ್ಯದೋಷಗಳಿವೆ.

ಶೀಘ್ರ ಬರಲಿದೆ: ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವು ಮಾಹಿತಿಗಳು ಇನ್ನೂ ಅಪ್ಡೇಟ್‌ ಆಗಿಲ್ಲ. ಅದರಲ್ಲಿ ಶೀಘ್ರ ಬರಲಿದೆ ಎಂದು ಮಾತ್ರ ಬರಲಿದೆ. ಬಿಬಿಎಂಪಿಯು ತನ್ನ ವೆಬ್‌ಸೈಟ್‌ ನಿರ್ಹವಣೆಗೆ ಪ್ರತಿ ವರ್ಷವು ಸಾಕಷ್ಟು ಹಣ ವ್ಯಯಿಸುತ್ತಿದೆ. ಆದರೆ, ಇಷ್ಟೆಲ್ಲ ಖರ್ಚಾದರೂ, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬಳಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+