• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇವಾ ಸದನದಲ್ಲಿ ಬೀದಿ ಬಿಂಬ ರಂಗದ ತುಂಬ ನಾಟಕ ನೋಡಿ

|

ಬೆಂಗಳೂರು, ಮೇ 16: 'ಅಶ್ವಘೋಷ ಥಿಯೇಟರ್ ಟ್ರಸ್ಟ್' ರಂಗತಂಡ ಪ್ರಸ್ತುತಪಡಿಸುವ, ಬೀದಿನಾಟಕವನ್ನು ನಾಟಕಕ್ಕೆ ಅಳವಡಿಸಿದ ಮೊದಲ ನಾಟಕ "ಬೀದಿ ಬಿಂಬ ರಂಗದ ತುಂಬ" ಪ್ರದರ್ಶನವು ಮೇ 18ರಂದು ನಡೆಯಲಿದೆ.

ನಮ್ಮ ಸುತ್ತಮುತ್ತಲಿನ ಸಮಾಜದ ಘಟನೆಗಳಿಗೆ ಕನ್ನಡಿ ಹಿಡಿಯುವಂಥ ಪಾತ್ರಗಳನ್ನು ಹೊಂದಿರುವ ಈ ನಾಟಕ, ಈಗಾಗಲೇ ವಿವಿಧ ವೇದಿಕೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.

ರಚನೆ: ಕರಣಂ ಪವನ್ ಪ್ರಸಾದ್

ತಂಡ : ಅಶ್ವಘೋಷ

ನಿರ್ದೇಶನ : ನಂದೀಶ್ ದೇವ್

ಪ್ರದರ್ಶನದ ವಿವರಗಳು

ದಿನಾಂಕ, ಸಮಯ: 18 ಮೇ 2019, ಶನಿವಾರ ಸಂಜೆ 7:00 ಗಂಟೆಗೆ

ಸ್ಥಳ: ಸೇವಾ ಸದನ, ಮಲ್ಲೇಶ್ವರಂ, 14ನೇ ಅಡ್ಡ ರಸ್ತೆ, ಬೆಂಗಳೂರು

ಯಾವ ಶಾಲೆಯಲ್ಲೂ ತರಬೇತಿ ಪಡೆಯದ ಕಲಾವಿದರ ಅದ್ಬುತ ನಟನೆ, ಸಂಭಾಷಣೆ, ದೇಹಭಾಷೆ ನಾಟಕದ ಪ್ರತಿ ಹಂತವನ್ನು ಜೀವಂತವಾಗಿರಿಸಿದೆ. ಕನ್ನಡ ಹಾಸ್ಯಲೋಕಕ್ಕೆ ಬರೆದ ಹೊಸ ಭಾಷ್ಯವೆಂದು ಹೇಳಬಲ್ಲಷ್ಟು ಪ್ರಭಾವಶಾಲಿ ಪ್ರಯೋಗ.

ದೇಶ, ಯುವಜನರ ಸಮಸ್ಯೆ, ನಕ್ಸಲ್ ವಾದ, ಗಡಿ ಸಮಸ್ಯೆ, ಜಲವಿವಾದ, ಭಾರತ - ಪಾಕ್ ವಿವಾದ, ಉಗ್ರವಾದ, ಮಾಧ್ಯಮಗಳಲ್ಲಿ ಬಾಸ್‍ಗೆ ಬಕೆಟ್ ಹಿಡಿಯುವ ವರದಿಗಾರರು, ಆಂಕರ್ ಗಳು, ಹೀಗೆ ಸಾಗುವ ವಿಷಯಗಳಲ್ಲಿ ಬಳಸಿದ ಪಂಚಿಂಗ್ ಸಂಭಾಷಣೆಗಳು ಪ್ರೇಕ್ಷಕರನ್ನು ಪ್ರತಿಕ್ಷಣವೂ ನಗಿಸುತ್ತವೆ.

ಸಣ್ಣ ಸಣ್ಣ ಮಾತಿನ ತುಣುಕುಗಳಿಂದ ಹಿಡಿದು ಸುದೀರ್ಘ ವಾಕ್ಯಗಳು, ಕಂಪ್ಯೂಟರ್ ಪರಿಭಾಷೆ, ಸಂಸ್ಕೃತ ಶ್ಲೋಕ ಇತ್ಯಾದಿ ಸಂಭಾಷಣೆಗಳು ವಿವಿದಾರ್ಥವನ್ನು ಬಿಂಬಿಸುವ ಮೂಲಕ ಗಮನಸೆಳೆಯುತ್ತವೆ.

English summary
Ashvagosha theatre trust Presents Kannada Play – Beedi Bimba Rangada Thumba by Karanam Pavan Prasad, Directed by Nandeesh Dev. This play will be staged at Seva Sadan, Malleswaram, Bengaluru on May 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X