ವಿವಾದದಲ್ಲಿ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್
ಬೆಂಗಳೂರು, ಡಿ. 19: ವೈಟ್‌ಫೀಲ್ಡ್‌ನಲ್ಲಿ ಡಿ. 20ರಂದು ಆಯೋಜಿಸಿರುವ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ ಎಂದು ಕರ್ನಾಟಕ ಅಮೇಚೂರ್ ಅಥ್ಲೆಟಿಕ್ ಸಂಸ್ಥೆ ತಿಳಿಸಿದೆ.
ಮಿಡ್‌ನೈಟ್ ಮ್ಯಾರಥಾನ್ ಕುರಿತು ಆಯೋಜಕರು ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ ಆಯೋಜಕರನ್ನು ಸಂಪರ್ಕಿಸಲು ಭಾರತೀಯ ಅಥ್ಲೆಟಿಕ್ ಸಂಸ್ಥೆ (ಎಎಫ್ಐ) ಮತ್ತು ಕರ್ನಾಟಕ ಅಮೇಚೂರ್ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎಎ) ಸಾಕಷ್ಟು ಬಾರಿ ಪ್ರಯತ್ನಿಸಿದರೂ ಮಾಹಿತಿ ನೀಡಿಲ್ಲ ಎಂದು ಕೆಎಎಎ ಕಾರ್ಯದರ್ಶಿ ಎನ್. ಚಂದ್ರಶೇಖರ್ ತಿಳಿಸಿದ್ದಾರೆ. [ಮ್ಯಾರಥಾನ್ ಗೆ ಮುನ್ನ cxo ರನ್]

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಅಥ್ಲೀಟ್‌ಗಳು ಮ್ಯಾರಥಾನ್‌ನಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. [ಬೆಂಗಳೂರಲ್ಲಿ ಮಿಡ್ ನೈಟ್ ಮ್ಯಾರಥಾನ್]











Click it and Unblock the Notifications