ಒಂದು ತಿಂಗಳಲ್ಲಿ ಬೆಂಗಳೂರಲ್ಲಿ ನಡೆದ ಪ್ರತಿಭಟನೆಗಳು ಎಷ್ಟು ಗೊತ್ತಾ?

ಬೆಂಗಳೂರು, ಜನವರಿ 15: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಬೆಂಗಳೂರಲ್ಲಿ ಸಾಲು ಸಾಲು ಪ್ರತಿಭಟನೆ ನಡೆದಿದೆ.

ಈ ಬಾರಿ ಒಂದೇ ತಿಂಗಳಲ್ಲಿ ಬರೋಬ್ಬರಿ 82 ಪ್ರತಿಭಟನೆಯನ್ನು ಬೆಂಗಳೂರು ಕಂಡಿದೆ. ಈ ಪ್ರತಿಭಟನೆಗಳು ಪೊಲೀಸರು ಹಾಗೂ ಸಾರ್ವಜನಿಕರಿಗೆ ತೀವ್ರ ತಲೆನೋವು ಉಂಟು ಮಾಡಿದ್ದವು.

ಹಾಗೆಯೇ ಬೆಂಗಳೂರಿಗೆ 'ಪ್ರತಿಭಟನಾ ನಗರ' ಎಂದು ಟ್ಯಾಗ್ ಮಾಡಲಾಗುತ್ತಿತ್ತು. ದೆಹಲಿಗಿಂತಲೂ ಬೆಂಗಳೂರಲ್ಲಿ ಹೆಚ್ಚು ಪ್ರತಿಭಟನೆಗಳು ನಡೆದಿವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

 Just In One Month Bengaluru Sees Record 82 Protests

ದೆಹಲಿಯಲ್ಲಿ ಸಿಎಎ , ಎನ್‌ಆರ್‌ಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬೆಂಗಳೂರಲ್ಲಿ ಪ್ರತಿನಿತ್ಯ ಕನಿಷ್ಠ 20 ಪ್ರತಿಭಟನೆ ನಡೆಸಲು ಅನುಮತಿ ಕೋರಿ ಅರ್ಜಿಗಳು ಬರುತ್ತಿದ್ದವು. ಅದರಲ್ಲಿ ಕೆಲವು ಪ್ರತಿಭಟನೆಗಳಿಗೆ ಮಾತ್ರ ಅವಕಾಶ ನೀಡಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 15ರ ಸಂದರ್ಭದಲ್ಲಿ ಬೆಂಗಳೂರಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧ ವಾರದಲ್ಲಿ ಕನಿಷ್ಠ 4 ಪ್ರತಿಭಟನೆಗಳು ನಡೆದಿವೆ. ಅದಾದ ಬಳಿಕ ಅದರ ಸಂಖ್ಯೆ ಹೆಚ್ಚಳವಾಗಿತ್ತು. ಡಿಸೆಂಬರ್‌ನಿಂದ 40 ಮನವಿಗಳು ಬಂದಿದ್ದವು ಅದರಲ್ಲಿ 35 ಮನವಿಗಳನ್ನು ಪುರಸ್ಕರಿಸಲಾಗಿತ್ತು. 144 ಸೆಕ್ಷನ್ ಜಾರಿಯಾದ ಸಂದರ್ಭದಲ್ಲಿ ಬಂದ ಮನವಿಗಳನ್ನು ತಿರಸ್ಕರಸಿಲಾಗಿತ್ತು.

ಬಹುತೇಕ ಪ್ರತಿಭಟನೆಗಳು ಟೌನ್‌ಹಾಲ್ ಎದುರು ನಡೆದಿದ್ದವು. ಅದನ್ನು ಹೊರತುಪಡಿಸಿ ಫ್ರೀಡಂಪಾರ್ಕ್ ಎದುರು ಅತಿಹೆಚ್ಚು ಪ್ರತಿಭಟನೆಗಳು ನಡೆದಿವೆ. ಡಿಸೆಂಬರ್ 18ರಿಂದ 21ರ ಮಧ್ಯೆ 144 ಸೆಕ್ಷನ್ ಜಾರಿಯಲ್ಲಿರುವಾಗ ಪ್ರತಿಭಟನೆ ಮಾಡಿದ 120 ಜನರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಪ್ರತಿಭಟನಾಕಾರರ ಬಂಧನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+