ಸ್ವಾದಿಷ್ಟ ಭೋಜನ ಸವಿಯುವ ಆಸೆ ನಿಮಗಿದ್ದರೆ!

Joy of Giving Week : Food for Change, Bangalore
ಬೆಂಗಳೂರು, ಅ. 4 : ಸುಮಧುರವಾದ ಸಂಗೀತ ಕೇಳುತ್ತ, ಲಯಬದ್ಧವಾದ ನೃತ್ಯವನ್ನು ನೋಡುತ್ತ, ಸಂಜೆಯ ವೇಳೆಯಲ್ಲಿ ಅತ್ಯುತ್ಕೃಷ್ಟವಾದ ಮತ್ತು ಸ್ವಾದಿಷ್ಟವಾದ ಭೋಜನವನ್ನು ಸವಿಯುವ ಆಸೆ ನಿಮಗಿದ್ದರೆ, ಇಗೋ ಇಲ್ಲಿದೆ ನಿಮಗೆ ಆಹ್ವಾನ. ಆದರೆ, ಬೆಂಗಳೂರಿನ ನತದೃಷ್ಟರಿಗೆ ಏನನ್ನಾದರೂ ಮಾಡುವ ಬಯಕೆ ನಿಮಗಿರಬೇಕು ಮತ್ತು ಕೈಬಿಚ್ಚಿ ನೀಡುವ ದಾನಿಗಳಾಗಿರಬೇಕು.

ಬೆಂಗಳೂರು ಕೇರ್ಸ್ ಎಂಬ, ಸರಕಾರೇತರ ಸಂಸ್ಥೆಗಳಿಗೆ ಹಣ ಕ್ರೊಢೀಕರಿಸುವ ಸಂಸ್ಥೆ, 'ಜಾಯ್ ಆಫ್ ಗಿವಿಂಗ್ ವೀಕ್' ಭಾಗವಾಗಿ 'ಫುಡ್ ಫಾರ್ ಚೇಂಜ್' ಎಂಬ ಕಾರ್ಯಕ್ರಮವನ್ನು ಅ.5ರ ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದು, ಸ್ವಾದಿಷ್ಟ ಭೋಜನವನ್ನು ಸವಿಯುವ ಮತ್ತು ನೃತ್ಯ ಸಂಗೀತವನ್ನು ಆಸ್ವಾದಿಸುವ ಅವಕಾಶವನ್ನು ಒದಗಿಸಿದೆ.

ದಾನಿಗಳು ಮಾಡಬೇಕಾಗಿರುವುದು : ವೈಯಕ್ತಿಕವಾಗಿ ದಾನ ನೀಡಬಯಸುವವರು 5,000 ರು. ನೀಡಿ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ಗಳು ನೀಡುವ ಭೋಜನವನ್ನು ಸವಿಯಬಹುದು. ಅಥವಾ ಕಂಪನಿಗಳು 1 ಲಕ್ಷ ರು. ನೀಡಿ 10 ಜನರಿಗೆ ಸ್ಥಳವನ್ನು ಕಾಯ್ದಿರಿಸಬಹುದು ಮತ್ತು ಶನಿವಾರದ ಸಂಜೆಯನ್ನು ಸ್ಮರಣೀಯವಾಗಿಸಿಕೊಳ್ಳಬಹುದು.

ಬೆಂಗಳೂರಿನ ಕೇಪರ್ ಬೆರ್ರಿ, ಫಾವ, ನೊವೊಟೆಲ್, ಐಬಿಸ್, ದಿ ಲಲಿತ್ ಅಶೋಕ್, ರಾಯಲ್ ಆರ್ಕಿಡ್ ಮತ್ತು ಮೊವೆನ್ ಪಿಕ್ ಹೋಟೆಲುಗಳು ಈ 'ಫುಡ್ ಫಾರ್ ಚೇಂಜ್' ಕಾರ್ಯಕ್ರಮದಲ್ಲಿ ದಾನಿಗಳಿಗೆ ಸ್ವಾದಿಷ್ಟ ಖಾದ್ಯವನ್ನು ಬಡಿಸಲಿವೆ. ಅಭಿನವ್ ಡಾನ್ಸ್ ಕಂಪನಿಯ ನಿರುಪಮಾ ಮತ್ತು ರಾಜೇಂದ್ರ ಅವರು ನೃತ್ಯ ಪ್ರದರ್ಶನ ನೀಡಲಿದ್ದರೆ, ಡಿವೈನ್ ರಾಗ ಬ್ಯಾಂಡ್ ಸಂಗೀತ ಸುಧೆ ಹರಿಸಲಿದೆ.

ವೈಟ್ ಫೀಲ್ಡ್ ನಲ್ಲಿರುವ ಎಸ್ಎಪಿ ಲ್ಯಾಬ್ಸ್ ತನ್ನ ಹುಲ್ಲಿನಂಕಣವನ್ನು ಈ ಉದಾತ್ತ ಕಾರ್ಯಕ್ಕಾಗಿ ನೀಡಿದೆ. ಕಾರ್ಯಕ್ರಮ ನಡೆಯುವ ವಿಳಾಸ ಹೀಗಿದೆ : ಎಸ್ಎಪಿ ಲ್ಯಾಬ್ಸ್, ನಂ.138, ಇಪಿಐಪಿ ಜೋನ್, ವೈಟ್ ಫೀಲ್ಡ್, ಬೆಂಗಳೂರು - 560 066. ಸಮಯ : ಸಂಜೆ 7 ಗಂಟೆಯ ನಂತರ.

ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಬೆಂಗಳೂರಿನ 31 ಸರಕಾರೇತರ ಸಂಸ್ಥೆ(ಎನ್‌ಜಿಓ)ಗಳು ಭಾಗವಹಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಶೇಖರಣೆಗೊಂಡ ಹಣವನ್ನು 31 ಎನ್‌ಜಿಓಗಳು ಸಮಾಜಸೇವಾ ಕಾರ್ಯಕ್ಕಾಗಿ ವಿನಿಯೋಗಿಸಲಿವೆ ಎಂದು ಬೆಂಗಳೂರು ಕೇರ್ಸ್ ಸಂಸ್ಥೆಯ ಆಯೋಜಕರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+