ಹೊಸೂರು : ಜಾಲಿ ರೈಡ್ ಮೋಜಿಗೆ ಒಂದು ಬಲಿ

ಬೆಂಗಳೂ, ಸೆಪ್ಟೆಂಬರ್ 17 : ಮೂವರು ಅಪ್ರಾಪ್ತರ ಜಾಲಿ ರೈಡ್ ಒಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ಜಾಲಿರೈಡ್ ತೆರಳಿದ್ದ ಮೂವರು ಅಪ್ರಾಪ್ತ ಹುಡುಗರು ಬೆಂಗಳೂರಿನ ಪ್ರತಿಷ್ಠತ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಹೊಸೂರು ಫ್ಲೈ ಓವರ್ ಮೇಲೆ ಈ ಅಪಘಾತ ನಡೆದಿದೆ. 150 ಕಿ.ಮೀ.ವೇಗದಲ್ಲಿ ಬಾಲಕರು ಕಾರಿನ ನಿಯಂತ್ರಣ ಕಳೆದುಕೊಂಡಿದ್ದು, ಸರಣಿ ಅಪಘಾತ ಸಂಭವಿಸಿದೆ.

Jolly ride turns tragic in Hosur, one dead

ಸ್ಕೋಡಾ, ಇನ್ನೋವಾ ಕಾರುಗಳಲ್ಲಿ ಬಾಲಕರು ಜಾಲಿರೈಡ್ ಬಂದಿದ್ದರು. ಸ್ಕೋಡಾ ಕಾರು ಮೊದಲು ಅಪಘಾತಕ್ಕೀಡಾಗಿದ್ದು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಬಾಲಕನ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Jolly ride turns tragic in Hosur, one dead

ಇನ್ನೋವಾ ಕಾರು ನಿಯಂತ್ರಣ ತಪ್ಪಿ ಎರಡು ಅಡಿ ಪಕ್ಕದಲ್ಲಿದ್ದ ಮತ್ತೊಂದು ರಸ್ತೆಗೆ ಹಾರಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

ಹೊಸೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+