ಬೆಂಗಳೂರಿನಲ್ಲಿ ಫೆ.28ರಂದು ಉದ್ಯೋಗ ಮೇಳ
ಬೆಂಗಳೂರು, ಫೆ. 19 : ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಫೆಬ್ರವರಿ 28 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ವಿದ್ಯಾಪೀಠ ಸರ್ಕಲ್ ಬಳಿಯ ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ಮೇಳ ನಡೆಯಲಿದೆ.
ಫೆ.28ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ಐಟಿಸಿ ವೋಲ್ವೊ, ಎಚ್‌ಡಿಎಫ್‌ಸಿ, ಕೋಟಕ್ ಮಹೇಂದ್ರ, ಐಎನ್‌ಜಿ ವೈಶ್ಯ ಬ್ಯಾಂಕ್, ನಾರಾಯಣ ಹೃದಯಾಲಯ, ಕಾಫೀಡೇ, ಎನ್‍ಟಿಟಿಎಫ್, ಎನ್‍ಐಐಟಿ, ಇಂಡೋ-ಯುಎಸ್-ಮಿಮ್ (ಪ್ರೈ) ಲಿ., ಅಡಿಕೋ ಇಂಡಿಯಾ ಲಿ, ಅಪೋಲೋ ಫಾರ್ಮಸಿ, ಆಕ್ಸಿಸ್ ಬ್ಯಾಂಕ್ ಮುಂತಾದ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ.

ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸ್ಥಳದಲ್ಲೇ ನೇರವಾಗಿ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಿರುದ್ಯೋಗಿ, ಯುವಕ/ಯುವತಿಯರು ಈ ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.[ಹುಬ್ಬಳ್ಳಿಯಲ್ಲಿ ಫೆ.21ರಂದು ಉದ್ಯೋಗ ಮೇಳ]
ಅರ್ಧದಲ್ಲಿಯೇ ಶಾಲೆ ಬಿಟ್ಟವರು, ಎಸ್ಎಸ್ಎಲ್‌ಸಿ ಅನುತ್ತೀರ್ಣ, ಎಸ್ಎಸ್ಎಲ್‌ಸಿ ಉತ್ತೀರ್ಣ, ಪಿಯುಸಿ, ಐಟಿಐ, ಮತ್ತು ಡಿಪ್ಲೊಮಾ ಪದವಿ ಪಡೆದವರು, ಎಲ್ಲಾ ಪದವೀಧರರು ಹಾಗೂ ಎಂಬಿಎ ಪದವಿ ಹೊಂದಿದವವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. [ಕೆಎಸ್ಆರ್ ಟಿಸಿಯಲ್ಲಿ ಕೆಲಸ ಖಾಲಿ ಇದೆ]
ಮೇಳ ನಡೆಯುವ ಸ್ಥಳದ ವಿಳಾಸ : ಶ್ರೀ ಕೃಷ್ಣ ಪದವಿ ಕಾಲೇಜು, ಐಟಿಐ ಲೇಔಟ್ , ಬನಶಂಕರಿ, 36ನೇಹಂತ (ವಿದ್ಯಾಪೀಠ ಸರ್ಕಲ್) ಬೆಂಗಳೂರು - 560085. ಹೆಚ್ಚಿನ ಮಾಹಿತಿಗಾಗಿ 22259351/22374582 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications