ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಉಚಿತ ವೈಫೈ

ಬೆಂಗಳೂರು, ಆ.7: ಜ್ಞಾನಭಾರತಿ ಕ್ಯಾಂಪಸ್‌ನ ವಿದ್ಯಾರ್ಥಿ‌ಗಳ ಅನುಕೂಲಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕ್ಯಾಂಪಸ್‌‌ಗೆ ವೈಫೈ ಅಳವಡಿಸಲು ಮುಂದಾಗಿದೆ.

ಸೆಂಟ್ರಲ್‌ ಕಾಲೇಜಿನಲ್ಲಿ ನಡೆದ ಸಿಂಡಿಕೇಟ್‌ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಲಪತಿ ಡಾ. ಬಿ ತಿಮ್ಮೇಗೌಡ ಈ ವಿಚಾರವನ್ನು ತಿಳಿಸಿದರು.

ಕ್ಯಾಂಪಸ್‌ನಲ್ಲಿ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸಲು ಹಾಗೂ 1.88 ಕೋಟಿ ರೂ. ವೆಚ್ಚದಲ್ಲಿ ಎಂಟು ಪ್ರಮುಖ ಸ್ಥಳದಲ್ಲಿ ಸಿಸಿಕ್ಯಾಮೆರಾ ಅಳವಡಿಸಲು ಟೆಂಡರ್‌ಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

Jnanabharathi campus

ವಿವಿಯ ಇಂಟರ್‌ನೆಟ್‌ ಸಂಪರ್ಕವನ್ನು ಮತ್ತಷ್ಟು ಸದೃಢಗೊಳಿಸಲು ವೈಫೈ ಅಳವಡಿಸಲಾಗುತ್ತದೆ. ವಿದ್ಯಾರ್ಥಿ‌ಗಳ ಓದಿಗೆ ಎಷ್ಟು ಬೇಕೋ ಅಷ್ಟು ಪ್ರಮಾಣದ ಇಂಟರ್‌ನೆಟ್‌ನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಫೇಸ್‌‌ಬುಕ್‌‌ನಂತಹ ಸಾಮಾಜಿಕ ಜಾಲತಾಣ ಮತ್ತು ಅನಗತ್ಯ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಲಾಗುವುದು ಎಂದು ತಿಳಿಸಿದರು.

ಎರಡು ವರ್ಷ‌ಗಳ ಹಿಂದೆ ಕ್ಯಾಂಪಸ್‌ ಅವರಣದಲ್ಲಿ ನೇಪಾಳಿ ವಿದ್ಯಾರ್ಥಿ‌ನಿ ಮೇಲಿನ ಅತ್ಯಾಚಾರದ ಬಳಿಕ ಪೊಲೀಸರು ಎಂಟು ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ವಿವಿ ಇದೀಗ ಕ್ಯಾಂಪಸ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗುತ್ತಿದೆ.

ವಾರದಲ್ಲಿ ದೂರಶಿಕ್ಷಣ ಫಲಿತಾಂಶ: ಮೌಲ್ಯ ಮಾಪನದಲ್ಲಿ ಅಕ್ರಮ ನಡೆದ ಕಾರಣಕ್ಕೆ ವಿವಿಯ ದೂರಶಿಕ್ಷಣ ಪದವಿಯ ಮೌಲ್ಯಮಾಪನವನ್ನು ಹೊಸದಾಗಿ ನಡೆಸಲಾಗಿದೆ. 50,330 ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗುತ್ತಿದೆ. ಅಂತಿಮ ಬಿಬಿಎಂ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ. ಅಂತಿಮ ಬಿಎ ಫಲಿತಾಂಶವನ್ನು ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಕುಲಪತಿ ತಿಮ್ಮೇಗೌಡ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+