ಬೆಂಗಳೂರಿನಲ್ಲಿ 5 ದಿನ ಜೆಡಿಯು ಪಾದಯಾತ್ರೆ

ಬೆಂಗಳೂರು, ಜನವರಿ 29: ಬೆಂಗಳೂರಿನಲ್ಲಿ ಜನವರಿ 30 ರಿಂದ ಫೆಬ್ರವರಿ 3ರವರೆಗೆ ಐದು ದಿನಗಳ ಕಾಲ ಜೆಡಿಯು ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

ಪಕ್ಷ ಸಂಘಟನೆ ಮತ್ತು ರಾಜಕೀಯ ಪರಿವರ್ತನೆ ಕುರಿತ ಜಾಗೃತಿಗಾಗಿ ಜನವರಿ 30 ರಿಂದ ಪಾದಯಾತ್ರೆ ನಡೆಯಲಿದೆ.

ಮೊದಲ ದಿನ ಮೆಜೆಸ್ಟಿಕ್ ಅಣ್ಣಮ್ಮ ದೇವಿ ದೇವಸ್ಥಾನದಿಂದ ಪ್ರಾರಂಭಿಸಿ ರಾಜರಾಜೇಶ್ವರಿನಗರದವರೆಗೆ ಪಾದಯಾತ್ರೆ ಮಾಡಲಾಗುತ್ತದೆ. ಜನವರಿ 31ರಂದು ರಾಜರಾಜೇಶ್ವರಿನಗರದಿಂದ ಪೀಣ್ಯ-ದಾಸರಹಳ್ಳಿವರೆಗೆ, ಫೆ.1ರಂದು ದಾಸರಹಳ್ಳಿಯಿಂದ ಯಲಹಂಕದವರೆಗೆ, ಫೆ.2ರಂದು ಯಲಹಂಕದಿಂದ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ವರೆಗೆ ಮತ್ತು ಕೊನೆಯ ದಿನವಾದ ಫೆ.3 ರಂದು ಮಾನ್ಯತಾ ಟೆಕ್‌ ಪಾರ್ಕ್‌ನಿಂದ ಕುಮಾರ ಪಾರ್ಕ್ ಪಶ್ಚಿಮದವರೆಗೆ ಜೆಡಿಯು ರಾಜ್ಯ ಘಟಕದ ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

JDU Organised Padayatra In Bengaluru From January 30

ಬೆಂಗಳೂರು ನಗರದಲ್ಲಿ ವಿವಿಧ ಹಂತಗಳಲ್ಲಿ ಪಾದಯಾತ್ರೆ ಮಾಡಲಾಗುತ್ತದೆ. ಜನ ಕೇಂದ್ರಿತ ರಾಜಕಾರಣ ಮತ್ತು ಸುಸ್ಥಿರ ಬೆಂಗಳೂರು ನಿರ್ಮಾಣಕ್ಕಾಗಿ ಈ ಪಾದಯಾತ್ರೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+