ಜಯಲಲಿತಾ ಸಹೋದರಿ ಶೈಲಜಾ ನಿಧನ

ಬೆಂಗಳೂರು, ಏ.9 : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರಿ ಶೈಲಜಾ ನಿಧನರಾಗಿದ್ದಾರೆ. ಕೆಂಗೇರಿ ಸಮೀಪದ ರಾಮಸಂದ್ರದಲ್ಲಿ ಅವರು ವಾಸವಾಗಿದ್ದರು.

ಗುರುವಾರ ಬೆಳಗ್ಗೆ ಶೈಲಜಾ ಜಯರಾಮನ್ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು 20 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Jayalalitha

ಕೆಂಗೇರಿ ಬಳಿಯ ರಾಮಸಂದ್ರದಲ್ಲಿನ ನಿವಾಸದಲ್ಲಿ ವಾಸವಾಗಿದ್ದ ಶೈಲಜಾ ಅವರು ಅಲ್ಲಿಯೇ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ? ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. [ಆಸ್ತಿಗಳಿಕೆ ಪ್ರಕರಣ, ಜಯಾ ತೀರ್ಪು ಕಾಯ್ದಿರಿಸಿದ ಕೋರ್ಟ್]

ಪೂಜೆ ಮಾಡಿಸಿದ್ದರು : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಜೈಲು ಸೇರಿದಾಗ ಶೈಲಜಾ ಹರಕೆ ಹೊತ್ತಿದ್ದರು. ಜೈಲಿನಿಂದ ಜಯಲಲಿತಾ ಅವರು ಬಿಡುಗಡೆಯಾದ ಬಳಿಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹರಕೆ ತೀರಿಸಿ ಬಂದಿದ್ದರು.

ಜೈಲಿಗೆ ಹೋಗಿದ್ದರು : ಜಯಲಲಿತಾ ಅವರು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅವರನ್ನು ಭೇಟಿ ಮಾಡಲು ಶೈಲಜಾ ತೆರಳಿದ್ದರು. ಆದರೆ, ಅವರ ಭೇಟಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಜಯಲಲಿತಾ ಯಾವುದೇ ತಪ್ಪು ಮಾಡಿಲ್ಲ ಅವಳಿಗೆ ಜಾಮೀನು ದೊರೆಯಲಿದೆ ಎಂದು ಮಾಧ್ಯಮಗಳೊಂದಿಗೆ ಶೈಲಜಾ ಮಾತನಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+