ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್

ಬೆಂಗಳೂರು, ಜುಲೈ 12 : ಬೆಂಗಳೂರು ನಗರದ ಸಂಚಾರ ಸಮಸ್ಯೆ ಬಗೆಹರಿಸಲು ಜಪಾನ್ ನೆರವು ನೀಡಲಿದೆ. 2019ರ ಡಿಸೆಂಬರ್ ವೊಳಗೆ ನಗರದ 29 ಸಿಗ್ನಲ್‌ಗಳು ಸ್ಮಾರ್ಟ್ ಆಗಲಿವೆ.

ಜಪಾನ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿಯು (ಜೆಐಸಿಎ) ಸುಮಾರು 72 ಕೋಟಿ ಹಣವನ್ನು ಹೂಡಿಕೆ ಮಾಡಲಿದೆ. ಸೆಪ್ಟೆಂಬರ್‌ನಲ್ಲಿ ಸ್ಮಾರ್ಟ್‌ ಸಿಗ್ನಲ್ ವ್ಯವಸ್ಥೆ ಜಾರಿಗೊಳಿಸುವ ವ್ಯವಸ್ಥೆಗೆ ಟೆಂಟರ್ ಕರೆಯುವ ಸಾಧ್ಯತೆ ಇದೆ.

ಕಾಂಬೋಡಿಯಾ, ಮಯನ್ಮಾರ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಯನ್ನು ಜೆಐಸಿಎ ಅಭಿವೃದ್ಧಿಗೊಳಿಸಿದ್ದು ಯಶಸ್ವಿಯಾಗಿದೆ. ಈಗ ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

Japan International Cooperation to build smart network signal in Bengaluru

2019ರ ಡಿಸೆಂಬರ್ ವೇಳೆಗೆ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ನಗರ ಭೂ ಸಾರಿಗೆ ನಿರ್ದೇಶನಾಲಯ ಈ ಯೋಜನೆಗೆ ನೋಡೆಲ್ ಸಂಸ್ಥೆಯಾಗಿ ಕೆಲಸ ಮಾಡಲಿದೆ. ಯಾವ-ಯಾವ ಸಿಗ್ನಲ್ ಎಂಬುದನ್ನು ನಿರ್ದೇಶನಾಲಯ ಪಟ್ಟಿ ಮಾಡಿದೆ.

ಮೊದಲ ಹಂತದಲ್ಲಿ ನಗರದ 29 ಜಂಕ್ಷನ್‌ಗಳನ್ನು ಸ್ಮಾಟ್‌ ಸಿಗ್ನಲ್‌ಗಳಾಗಿ ಪರಿವರ್ತಿಸಲಾಗುತ್ತದೆ. ಹೊಸ ಸಿಸಿಟಿವಿ ಅಳವಡಿಕೆ, ವಾಹನಗಳ ಓಡಾಟಗಳನ್ನು ನಿಯಂತ್ರಿಸಲು ಹೊಸ ಉಪಕರಣಗಳನ್ನು ಆಳವಡಿಸಲಾಗುತ್ತದೆ.

ಅನಿಲ್ ಕುಂಬ್ಳೆ ಸರ್ಕಲ್, ಟ್ರನಿಟಿ ಸರ್ಕಲ್, ಮಣಿಪಾಲ್ ಜಂಕ್ಷನ್, ಕಾಮರಾಜ ಜಂಕ್ಷನ್, ಶಿವಾಜಿನಗರ ಜಂಕ್ಷನ್, ಮಯೋಹಾಲ್, ಗರುಡಾ ಮಾಲ್ ಸೇರಿದಂತೆ ನಗರದ 29 ಸಿಗ್ನಲ್‌ ಸ್ಮಾರ್ಟ್‌ ಆಗಲಿದೆ. ಇದರ ನಿಯಂತ್ರಣ ಕೇಂದ್ರ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+