ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ದಟ್ಟಣೆ : ಜಾಲಹಳ್ಳಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್‌ ನಿರ್ಮಾಣ

|
Google Oneindia Kannada News

ಬೆಂಗಳೂರು, ನವೆಂಬರ್ 21: ಜಾಲ ಹಳ್ಳಿ ಜಂಕ್ಷನ್ ಬಳಿ ಸಂಚಾರ ದಟ್ಟಣೆ ವಿಪರೀತವಾಗಿದೆ, ಶಿವಮೊಗ್ಗ, ತುಮಕೂರು ಇನ್ನಿತರೆ ಪ್ರದೇಶಗಳಿಂದ ಬೆಂಗಳೂರು ಆಗಮಿಸುವವರು ಇದೇ ಮಾರ್ಗದಲ್ಲಿಯೇ ಸಾಮಾನ್ಯವಾಗಿ ಬರುತ್ತಾರೆ, ಬಸ್‌ಗಳು ಕೂಡ ಇದೇ ಮಾರ್ಗದಲ್ಲಿಯೇ ಬರುತ್ತದೆ ಹಾಗಾಗಿ ವಾಹನ ದಟ್ಟಣೆ ಜತೆಗೆ ಜನದಟ್ಟಣೆಯೂ ವಿಪರೀತವಾಗಿದೆ.

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ? ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

ಜಂಕ್ಷನ್ ಬಳಿ ಏಷ್ಯಾದಲ್ಲಿ ಅತಿ ದೊಡ್ಡ ಪೀಣ್ಯ ಕೈಗಾರಿಕಾ ಪ್ರದೇಶ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು, ಸಾವಿರಾರು ಗಾರ್ಮೆಂಟ್ಸ್ ಕಂಪನಿಗಳು ಇರುವುದರಿಂದ ನಿತ್ಯ ಸಾವಿರಾರು ಸಂಖ್ಯೆಯ ಉದ್ಯೋಗಿಗಳು ಜಂಕ್ಷನ್ ಮೂಲಕ ಹಾದು ಹೋಗಲಿದ್ದಾರೆ.ಹೀಗಾಗಿ ಅಧಿಕ ಪ್ರಮಾಣ ಸಂಚಾರ ದಟ್ಟಣೆ ಉಂಟಾಗಿದೆ.

ಹಗಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನದಟ್ಟಣೆ

ಹಗಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನದಟ್ಟಣೆ

ಹಗಲು ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿರ ಜಾಲಹಳ್ಳಿ ಕ್ರಾಸ್ ಜಂಕ್ಷನ್ ಬಳಿ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಪೀಣ್ಯ ಕೈಗಾರಿಕಾ ಪ್ರದೇಶ ಎರಡನೇ ಹಂತದ ರಿಂಗ್ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆಯಲ್ಲಿ ಸಾರ್ವಜನಿಕರು ಪ್ರತಿ ನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಎದುರಿಸಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.

ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ

ಮೇಲ್ಸೇತುವೆ ನಿರ್ಮಾಣ ಸಾಧ್ಯವಿಲ್ಲ

ಮೇಲ್ಸೇತುವೆ ನಿರ್ಮಾಣ ಸಾಧ್ಯವಿಲ್ಲ

ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಅಸಾಧ್ಯವಾದ ಮಾತಾಗಿದೆ ಏಕೆಂದರೆ ಈಗಾಗೇ ಮೆಟ್ರೋ ಕಾರಿಡಾರ್ ಹಾಗೂ ರಾಷ್ಟ್ರೀಯ ಹೆದ್ದಾರಿಕ್ಕೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗಿದೆ. ಹಾಗಾಗಿ ಅಲ್ಲಿ ಎಲಿವೇಟೆಡ್ ಕಾರಿಡಾರ್ ಅಥವಾ ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಅಂಡರ್ ಪಾಸ್ ನಿರ್ಮಾಣ ಸಾಧ್ಯವಿಲ್ಲ.

ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಗಂಟೆಗೆ 15 ಕಿ.ಮೀ ವೇಗದಲ್ಲಿ ವಾಹನ ಸಂಚಾರ

ಗಂಟೆಗೆ 15 ಕಿ.ಮೀ ವೇಗದಲ್ಲಿ ವಾಹನ ಸಂಚಾರ

ಜಾಲಹಳ್ಳಿ ಕ್ರಾಸ್ ಬಳಿ ಗಂಟೆಗೆ 15 ಕಿ,ಮೀ ಮಾತ್ರ ಸಂಚರಿಸಬಹುದು, ಜಂಕ್ಷನ್ ಬಳಿ ಮಾಲ್, ಬಿಎಂಟಿಸಿ, ಬಸ್‌ ನಿಲ್ದಾಣಗಳು, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣಗಳು, ಹೋಟೆಲ್, ಕೈಗಾರಿಕೆಗಳು ಇರುವುದರಿಂದ ಬೆಳಗ್ಗೆ 9ರಿಂದ 10 ಪೀಕ್ ಅವಧಿಯಲ್ಲಿ ಕೇವಲ 10-15 ಕಿಮೀ ಮಾತ್ರ ಸಂಚಾರ ಮಾಡಬಹುದಾಗಿದೆ.

ಗಂಟೆಗೆ 10 ಸಾವಿರಕ್ಕಿಂತಲೂ ಹೆಚ್ಚು ವಾಹನ

ಗಂಟೆಗೆ 10 ಸಾವಿರಕ್ಕಿಂತಲೂ ಹೆಚ್ಚು ವಾಹನ

ಜಾಲಹಳ್ಳಿ ಕ್ರಾಸ್ ಜಂಕ್ಷನ್ ನಲ್ಲಿ ಪೀಕ್ ಅವಧಿಯಲ್ಲಿ ಗಂಟೆಗೆ 15 ಸಾವಿರ ವಾಹನಗಳು ಸಂಜೆ 6-7ರ ಅವಧಿಯಲ್ಲಿ 15 ಸಾವಿರ ವಾಹನಗಳು ಸಂಚರಿಸಲಿದೆ. ಸರಾಸರಿ ಬೆಳಗ್ಗೆ 6 ರಿಂದ ಸಂಜೆ 10 ರವರೆಗೆ ಒಂದು ಗಂಟೆಗಳಲ್ಲಿ ಸರಾಸರಿ 10 ಸಾವಿರ ವಾಹನಗಳು ಸಂಚಾರ ಮಾಡುತ್ತದೆ.

English summary
To reduce Jalahalli junction traffic, state government is decided to construct underpass with the cost of 47 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X