ವಿಜಯ ಮಲ್ಯ ಜತೆ ವ್ಯವಹಾರ: ವೆಂಕಟವರ್ಧನ್ ಮನೆ ಮೇಲೆ ಐಟಿ ದಾಳಿ
ಬೆಂಗಳೂರು, ನವೆಂಬರ್ 17: ಮದ್ಯದ ದೊರೆ, ಪ್ರಸ್ತುತ ಲಂಡನ್ ನಲ್ಲಿರುವ ವಿಜಯ ಮಲ್ಯ ಜೊತೆ ವ್ಯವಹಾರ ಹೊಂದಿದ್ದಾರೆಂಬ ಅನುಮಾನದ ಮೇಲೆ ಡಿಎನ್ ಎ ಖಾಸಗಿ ಕಂಪನಿ ಮಾಲೀಕ ವೆಂಕಟವರ್ಧನ್ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು(ನವೆಂಬರ್ 17) ಬೆಳಿಗ್ಗೆ ಏಕಕಾಲದಲ್ಲಿ ವೆಂಕಟವರ್ಧನ್ ಒಡೆತನದ ದೆಹಲಿ, ಬೆಂಗಳೂರು, ಮುಂಬೈ ನಿವಾಸಗಳಲ್ಲಿ ದಾಳಿ ನಡೆದಿದೆ. ಕೋಲಾರದ ಕೆಜಿಎಫ್ ನಲ್ಲಿರುವ ಜಿವಿಐಟಿ ಇಂಜಿನಿಯರಿಂಗ್ ಕಾಲೇಜಿನ ಮೇಲೂ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.













Click it and Unblock the Notifications